ಬೆಂಗಳೂರು:
ಬೆಂಗಳೂರಿನ ಕುಂಬಳಗೋಡಿನ ಸುಪ್ರಸಿದ್ಧ ತಿಬ್ಬಾದೇವಿ ಟೆಂಟ್ ಹೌಸ್‌ನ ರಜತ ಮಹೋತ್ಸವ ಸಮಾರಂಭ ಭಾನುವಾರ ಅದ್ಧೂರಿಯಾಗಿ ಜರುಗಿತು. ಪರಿಶ್ರಮದಿಂದ ಉದ್ಯಮವನ್ನು ಕಟ್ಟಿದ ಹಾಗೂ ಹಲವಾರು ಮಂದಿಗೆ ಉದ್ಯೋಗ ನೀಡಿದ ತಿಬ್ಬಾದೇವಿ ಟೆಂಟ್ ಹೌಸ್‌ನ ಕಾರ್ಯವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಶ್ಲಾಘಿಸಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಿಬ್ಬಾದೇವಿ ಟೆಂಟ್ ಹೌಸ್‌ನ ಮಾಲೀಕರಾದ ಶಿವಲಿಂಗೇಗೌಡರು, ಕೃಷ್ಣೇಗೌಡರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ತಿಬ್ಬಾದೇವಿ ಟೆಂಟ್ ಹೌಸ್ ಇಪ್ಪತ್ತೈದು ವರ್ಷಗಳ ಯಶಸ್ವಿ ಔದ್ಯಮಿಕ ಪಯಣವನ್ನು ಪೂರೈಸಿದೆ. ಪಾರದರ್ಶಕ ಹಾಗೂ ಸಮಯಕ್ಕೆ ಸರಿಯಾದ ಸೇವೆಯ ಮೂಲಕ ರಾಜಧಾನಿ ನಗರ ಹಾಗೂ ಸುತ್ತಮುತ್ತ ಅಪಾರ ಖ್ಯಾತಿಯನ್ನು ಗಳಿಸಿಕೊಂಡಿದೆ.