ಎಲ್ಲಾ ಮತ ಎಣಿಕೆ ಕೇಂದ್ರಗಳ ಸುತ್ತಾ ಬಿಗಿ ಭದ್ರತೆ : ಆಯೋಗ

ಬೆಂಗಳೂರು:

      ಮೇ 10 ರಂದು ವಿಧಾನಸಭೆಗೆ ಚುನವಾಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಿದೆ. ಆದ್ದರಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕೆಲ ಕಾಲೇಜುಗಳಲ್ಲಿ  ನಡೆಯಲಿದ್ದು ಎಲ್ಲಾ ಮತ ಎಣಿಕೆ ಕೇಂದ್ರಗಳ ಸುತ್ತಾ ಪೊಲೀಸ್‌ ಬಿಗಿಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

     ಅದೇ ರೀತಿ ಮೇ 13ರಂದು ಚಿಕ್ಕಮಗಳೂರು ನಗರದಲ್ಲಿರುವ ಐಡಿಎಸ್‌ಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸ್ಥಳದಲ್ಲಿ ಸಾರ್ವಜನಿಕರು ವಾಹನಗಳಲ್ಲಿ ಆಗಮಿಸುವುದರಿಂದ ಅಧಿಕ ಜನಸಂದಣಿ ಏರ್ಪಡಲಿದೆ.

      ಇದರಿಂದ ಮತ ಎಣಿಕೆಗೆ ಅಡಚಣೆಯಾಗದಂತೆ ಜಿಲ್ಲಾಡಳಿಯ ಸೂಕ್ತ ಕ್ರಮಕ್ಕೆ ಮುದಾಗಿದೆ. ಸುಗಮ ವಾಹನ ಸಂಚಾರದ ದೃಷ್ಠಿಯಿಂದ ಬೈಪಾಸ್ ರಸ್ತೆಯಲ್ಲಿ ಎಐಟಿ ಸರ್ಕಲ್‌ನಿಂದ ನರಿಗುಡ್ಡನಹಳ್ಳಿವರೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ, ಸದರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡದಂತೆ ಸೂಚಿಸಲಾಗಿದೆ.

       ಅಲ್ಲದೆ ಐಡಿಎಸ್‌ಜಿ ಕಾಲೇಜಿನಿಂದ ದಂಟರಮಕ್ಕಿ ಸರ್ಕಲ್‌ವರೆಗಿನ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡದಂತೆ, ವಾಹನಗಳನ್ನು ನಿಲುಗಡೆ ಮಾಡಲು ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap