ತಿಪಟೂರು:
ಕೊರೊನ ಎರಡನೇ ಅಲೆ ಆರ್ಭಟಕ್ಕೆ ತತ್ತರಿಸುತ್ತಿರುವ ನಗರ ಮತ್ತು ಗ್ರಾಮೀಣ ರೋಗಿಗಳ ಅನುಕೂಲಕ್ಕಾಗಿ ಎರಡು ಲೀಟರ್ ಮತ್ತು ಹತ್ತು ಲೀಟರ್‍ನ ಎರಡು ಆಮ್ಲಜನಕ ಸಾಂದ್ರಕ, 2 ಹಾಸಿಗೆ, ಮೆಡಿಕಿಟ್, ಇಬ್ಬರು ನರ್ಸ್‍ಗಳಿರುವ ಸಂಚಾರಿ ಆಂಬ್ಯೂಲೆನ್ಸ್‍ಗೆ ರಾಜ್ಯ ಕೆಪಿಸಿಸಿ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಕೆ.ಟಿ.ಶಾಂತ್‍ಕುಮಾರ್ ಚಾಲನೆ ನೀಡಿದರು.
ಈ ಕುರಿತು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಾತನಾಡಿದ ಅವರು ಸಂಚಾರಿ ಆಮ್ಲಜನಕ ಸಾಂದ್ರಕ ಆಂಬುಲೆನ್ಸ್‍ಗೆ ಚಾಲನೆ ನೀಡಿದ್ದು ಅವಶ್ಯಕತೆ ಇರುವ ನಗರ, ಗ್ರಾಮೀಣ ಪ್ರದೇಶದ ಜನ ಯಾವುದೇ ಕೊರೋನಾ ಸೋಂಕು ಕಂಡು ಬಂದಲ್ಲಿ ಈ ಮೊಬೈಲ್ ಸಂಖ್ಯೆಗಳಿಗೆ 8197056259, 9740890917, 9972291313, 6363961515 ಕರೆಮಾಡಬೇಕು. ಆಗ ತಕ್ಷಣ ಅವರ ಸೇವೆಗೆ ದಾವಿಸುತ್ತದೆಎಂದು ತಿಳಿಸಿದ ಅವರುಆಕ್ಸಿಜನ್‍ಯುಕ್ತಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿ ರೋಗಿಗೆಆಕ್ಸಿಜನ್ ವ್ಯವಸ್ಥೆ ಮಾಡಿ ಸ್ಥಳೀಯ ಆಸ್ಪತ್ರೆಗೆತಂದು ಸೇರಿಸಲಾಗುತ್ತದೆ.ಆಸ್ಪತ್ರೆಯಲ್ಲಿ ಬೆಡ್‍ಕೊರತೆಯಿದ್ದರೂ ಈ ಆಂಬುಲೆನ್ಸ್ ಉಪಯೋಗಿಸಿಕೊಳ್ಳಬಹುದುಎಂದರು.
ಸ್ಥಳೀಯ ಆಡಳಿತಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಸಾರ್ವಜನಿಕಆಸ್ಪತ್ರೆಗೆ ಸುಮಾರು 10 ಬೆಡ್‍ಗಳ ವೆಂಟಿಲೇಟರ್ ವ್ಯವಸ್ಥೆ ಮಾಡಿ, ಜೂನ್ ತಿಂಗಳು ಬಂದರುಆಕ್ಸಿಜನ್‍ಪ್ಲಾಂಟ್‍ಕಾಮಗಾರಿಇನ್ನೂಆಮಗತಿಯಲ್ಲಿ ಸಾಗುತ್ತಿದೆ,ತಾಲೂಕಿನಜನತೆಆಕ್ಸಿಜನ್‍ಕೊರತೆಯಿಂದ ನರಳುತ್ತಿದ್ದಾರೆ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆಯಲ್ಲಿಕೇಂದ್ರ ಮತ್ತುರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಈಗಲಾದರೂ ಎಚ್ಚೆತ್ತುಕೊಳ್ಳಿ ಗ್ರಾಮೀಣಜನರುಕೊರೋನಾ ಮಹಾಮಾರಿಗೆಯಾರು ಹೇದರ ಬೇಡಿ. ನೀವು ಭಯಪಡುವುದರಿಂದ ನಿಮ್ಮಲಿ ಬಿಳಿ ರಕ್ತ ಕಣಗಳ ಸಂಖ್ಯೆಕಮ್ಮಿಯಾಗಿರೋಗಕ್ಕೆಆಹ್ವಾನ ನೀಡಿದಂತಾಗುತ್ತದೆ.ಕೊರೋನಾರೋಗಿಗೆತುರ್ತು ಪರಿಸ್ಥಿತಿ ಕಂಡುಬಂದರೆ ಈ ಕೆಳಕಂಡ ಮೊಬೈಲ್ ಸಂಖೈಗೆ ಪೋನ್ ಮಾಡಿಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಿ ಎಂದುಕರೆನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
