ತಿಪಟೂರು : ಅನ್ನದಾತ ಮತ್ತು ಆರಕ್ಷಕರ ಜಟಾಪಟಿ

 ತಿಪಟೂರು : 

      ಬೆಳಂಬೆಳಗ್ಗೆ ತಿಪಟೂರು ನಗರದ ತುಂಬಾ ಆರಕ್ಷಕರು ನಾಕಬಂದಿಯನ್ನು ಹಾಕಿದಂತೆ ಮಾಡಲಾಗಿದ್ದು ನಗರದ ಬಸ್‍ನಿಲ್ದಾಣದಲ್ಲಿ ರೈತನೊಬ್ಬನನ್ನು ವಾಹನದಲ್ಲಿ ಕರೆದೊಯ್ಯಲಾಯಿತು.

     ಬೆಳಗ್ಗೆಯೇ ರಸ್ತೆಗಿಳಿದ ಆರಕ್ಷಕರು ವಾಹನಗಳ ದಾಖಲೆಗಳು, ಚಾಲನಾ ಪರವಾನಗಿ, ವಿಮೆಯನ್ನು ಪರೀಕ್ಷಿಸುತಿದ್ದವೇಳೆ ಬಸ್‍ನಿಲ್ದಾಣದ ಹತ್ತಿರ ರೈತ ಮತ್ತು ಆರಕ್ಷಕರ ನಡುವೆ ವಾಗ್ವಾದ ಶುರುವಾಗಿ ಕೆಲಕಾಲ ಬಿಸಿಯ ವಾತಾವರಣ ಏರ್ಪಟ್ಟಿತ್ತು. ಇದೇ ಸಮಯದಲ್ಲಿ ರೈತನು ನಾನು ಯಾವುದೇ ದಂಡವನ್ನು ಕಟ್ಟುವುದಿಲ್ಲ ಆರಕ್ಷಕರಿಗೆ ದಿಕ್ಕಾರ ಕೂಗಿದನು. ನಂತರ ಆರಕ್ಷಕರು ರೈತನನ್ನು ವಾಹನದಲ್ಲಿ ಕುಳ್ಳುರಿಸಿಕೊಂಡು ಠಾಣೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ರಸ್ತೆಯ ತುಂಬಾ ಜನ ಜಮಾಯಿಸಿ ಕೆಲ ವೇಳೆ ರಸ್ತೆ ಸಂಚಾರ ದಟ್ಟಣೆ ಉಂಟಾಗಿತ್ತು.

     ರೈತ ಮತ್ತು ಆರಕ್ಷಕರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link