ತಿಪಟೂರು :
ನಗರದಲ್ಲಿ ಬಹುತೇಕ ಬಡಾವಣೆಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆ ಇಂದ ಕೂಡಿವೆ ಎಂದು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಬಡಾವಣೆಯೊಂದರಲ್ಲಿ ಅಧಿಕಾರಿಯನ್ನು ಸ್ಥಳಕ್ಕೆ ಕರೆದು ಸೂಕ್ತ ರೀತಿಯಲ್ಲಿ ಕೆಲಸಮಾಡಿಸುವಂತೆ ಸೂಚಿಸಿದ್ದಾರೆ.
ನಗರದಲ್ಲಿ ಹಲವಾರು ಬಡಾವಣೆಗಳಲ್ಲಿ ಕೋಟ್ಯಾಂತರ ರೂಪಾಯಿಯ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು ಇವುಗಳಲ್ಲಿ ಕೆಲವು ಕಳಪೆ ಕಾಮಗಾರಿಯಿಂದ ಈಗಾಗಲೇ ಕಿತ್ತು ಬರುತ್ತಿದ್ದು ಸಾರ್ವಜನಿಕರ ತೆರಿಗೆ ಹಣ ಹಾಳಾಗುತ್ತಿದೆ. ಇದೇ ರೀತಿ ರಸ್ತೆ ರಿಪೇರಿ ಮಾಡಲು ರಸ್ತೆಗೆ ಕೇವಲ ಜಲ್ಲಿಯನ್ನು ತುಂಬಿದ್ದು ಅದು ರಸ್ತೆಯ ತುಂಬಾ ಹರಡುತ್ತಿದೆ. ಮತ್ತು ನೀವು ಕಾಮಗಾರಿ ಆರಂಭಿಸುವ ವೇಳೆಗೆ ಇಲ್ಲಿ ಹಾಕಿರುವ ಜಲ್ಲಿ ಹೋಗಿರುತ್ತದೆ ಮತ್ತು ನೀವು ಜಲ್ಲಿಯನ್ನು ಹಾಕಬೇಕಾದರೆ ಅದಕ್ಕೆ ವೆಟ್‍ಪಿಕ್ಸ್ ಮಿಶ್ರಣವನ್ನು ಹಾಕಿ ಅದರ ಮೇಲೆ ರೋಲರ್ ಮಾಡಿಸಬೇಕು ಎಂದರು.
ಗುತ್ತಿಗೆದಾರ ಕಳಪೆ ದರ್ಜೆಯ ಜಲ್ಲಿಯನ್ನು ಹಾಕಿದ್ದಾರೆ. ಗುತ್ತಿಗೆದಾರ ಯಾರು ಅವರಿಂದ ಸೂಕ್ತ ರೀತಿಯಲ್ಲಿ ಕೆಲಸಮಾಡಿಸುವಂತೆ ನಗರಸಭೆ ಇಂಜಿನಿಯರ್‍ಗೆ ಸೂಚಿಸಿದ್ದು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ