ತಿಪಟೂರು : ಪೊಲೀಸರ ಪ್ರಯೋಗಕ್ಕೆ ಜನರಿಂದ ಉತ್ತಮ ಪ್ರತಿಸ್ಪಂದನೆ

 ತಿಪಟೂರು :

      ಪೊಲೀಸ್ ಇಲಾಖೆ ಒಂದೇ ಸೂರಿನಡಿ ಚಾಲನಾಪರವಾನಗಿ, ಶಿರಸ್ತ್ರಾಣ, ವಾಹನದ ವಿಮೆ ಸೌಲಭ್ಯವನ್ನು ಸೋಮವಾರ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದು, ನಾಗರಿಕರಿಂದ ಉತ್ತಮ ಪ್ರತಿಸ್ಪಂದನೆ ದೊರೆಯಿತು.

     ರಾಜ್ಯಾದಾದ್ಯಂತ ಆರಕ್ಷಕ ಇಲಾಖೆ 2021, ಜನವರಿ 18 ರಿಂದ ಫೆಬ್ರವರಿ 17ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ನಡೆಸುತ್ತಿದ್ದು ಈ ಬಾರಿ ವಿಶಿಷ್ಟವಾಗಿ ಅದರಲ್ಲು ಸಡಕ್ ಸುರಕ್ಷಾ– ಜೀವನ್ ರಕ್ಷಾ ಎಂಬ ಧ್ಯೇಯ ವಾಕ್ಯದೊಂದಿಗೆ ಮನೆಮನೆಗೆ ತೆರಳಿ ಮಾಹಿತಿಯನ್ನು ಕಲೆಹಾಕಿ ಯಾರ ಹತ್ತಿರ ಚಾಲನಾಪರವಾನಗಿ ಮತ್ತು ವಾಹನದ ದಾಖಲೆಗಳು ಸರಿಇಲ್ಲವೋ ಅವುಗಳನ್ನು ಮಾಡಿಸಿಕೊಳ್ಳುವ ಕಾರ್ಯಕ್ರವನ್ನು ಆರಕ್ಷಕ ಇಲಾಖೆ ಹಮ್ಮಿಕೊಂಡಿದೆ.

      ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಮುಂದಾದ ತಾಲೂಕಿನ 500ಕ್ಕೂ ಅಧಿಕ ಮಂದಿ ಚಾಲನಾ ಪರವಾನಗಿ ಮಾಡಿಸಿಕೊಳ್ಳಲು ನೂಕುನುಗ್ಗಲಲ್ಲಿ ಜಮಾಯಿಸಿದ್ದರು. ಅವರುಗಳನ್ನು ಸೂಕ್ತ ರೀತಿಯಲ್ಲಿ ನಿಲ್ಲಿಸಿ ಟೋಕನ್ ವ್ಯವಸ್ಥೆಮಾಡಿದ್ದು, ಸಂಜೆಯಾದರು ಆರಕ್ಷರು ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ ಉತ್ಸಾಹದಿಂದಲೇ ಜನರಿಗೆ ಸೇವೆ ಒದಗಿಸಿದರು.ಸುಮಾರು 150ಕ್ಕೂ ಹೆಚ್ಚು ಜನರು ವಾಹನದ ವಿಮೆಯನ್ನು ಮಾಡಿಸಿಕೊಂಡಿದ್ದು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದ ಹೆಲ್ಮೆಟ್ ಮಾತ್ರ ಖಾಲಿಯಾಗಿತ್ತು. ಮತ್ತೆ ಬರುತ್ತದೆಂದು ಜನ ಕಾಯುತ್ತಿದ್ದರು.

      ನಮ್ಮ ಕಾರ್ಯ ಯಶಸ್ವಿಯಾದಂತೆ ಕಾಣುತ್ತಿದ್ದು ಇಂದು ಪೂರ್ಣಗೊಳ್ಳದೆ ಇದ್ದರೆ ನಾಳೆಯು ಮುಂದುವರೆಯುತ್ತದೆ. ಇದರಲ್ಲಿ ನಮ್ಮ ಬೀಟ್ ಪೋಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು ಮನೆಮನೆಗೂ ತೆರಳಿ ಮಾಹಿತಿ ಸಂಗ್ರಹಿಸಿ ಅವರನ್ನು ಇಲ್ಲಿಗೆ ಕರೆತಂದು ತಮ್ಮಗೆ ಬೇಕಾಗದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಈ ಕಾರ್ಯ ರಾಜ್ಯದಲ್ಲೇ ಮೊದಲಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೇ ರೀತಿಯ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿಯಲ್ಲೂ ಮಂಗಳವಾರ ಮಾಡಲಾಗುತ್ತಿದೆ ಎಂದು ಡಿ.ವೈ.ಎಸ್ಪಿ ಚಂದನ್‍ಕುಮಾರ್ ತಿಳಿಸಿದರು.

ಚಾಲನಾಪರವಾನಗಿ ಇಲ್ಲದೇ ವಿಕಲಚೇತನರ ಅಳಲು :

      ಇಂದು ಅನೇಕ ಬಾರಿ ಚಾಲನಾಪರವಾನಗಿ ಪಡೆಯಲು ಹೋಗಿ ಹಿಂದಿರುಗಿದ ಅಂಗವಿಕಲರು ಅಂದರೆ ವಾಹನವನ್ನು ಓಡಿಸಲು ಶಕ್ತಿಇರುವ ಕೆಲವರು ನಾವು ಚಾಲನಾ ಪರವಾನಗಿ ಮಾಡಿಸಲು ಬಂದಿದ್ದರು ಆದರೆ ಇಲ್ಲೂ ಸಾಧ್ಯವಾಗದೆ ಇದ್ದಿದಕ್ಕೆ ನಮಗೆ ವಾಹನ ಚಾಲನಾ ಪರವಾನಗಿ ಇಲ್ಲದೇ ನೀವು ವಾಹನವನ್ನು ಹಿಡಿದರೆ ನಾವೇನು ಮಾಡಬೇಕು ಎಂಬ ಪ್ರಶ್ನೆಯನ್ನು ಆರಕ್ಷಕರನ್ನು ಕೇಳುತ್ತಿದ್ದು ಅದಕ್ಕೆ ಆರಕ್ಷಕರು ವಿಶೇಷಚೇತನರಿಗೆ ವಾಹನಚಾಲನ ಪರವಾನಗಿ ಕೊಡಲು ಬರುವುದಿಲ್ಲ ಆದರೂ ನೀವು ವಾಹನವನ್ನು ತೆಗೆದುಕೊಂಡು ರಸ್ತೆಗಿಳಿದರೆ ದಂಡ ಖಚಿತ ಎಂದು ತಿಳಿಸಿದಾಗ ನಮಗೆ ಬೇರೆ ದಾರಿಯೇ ಇಲ್ಲವೇ ಎಂಬುದು ಅಂಗವಿಕಲರ ಅವರ ಪ್ರಶ್ನೆಯಾಗಿತ್ತು.
ವಾಹನ ತೆಗದುಕೊಂಡು 15 ವರ್ಷವಾಗಿದೆ ಆಗ ಇಷ್ಟೊಂದು ಕಷ್ಟ ಇರಲಿಲ್ಲ. ಹಾಗೂ ನಮಗೇಕೆ ವಾಹನ ಚಾಲನ ಪರವಾನಗಿ ಎಂದು ಸುಮ್ಮನೇ ಇದ್ದೆವು ಆದರೆ ಈಗ ವಯಸ್ಸು 60 ದಾಟಿದೆ ಈಗ ವಾಹನ ಚಾಲನ ಪರವಾನಗಿ ಮಾಡುತ್ತಿಲ್ಲವೆಂದು ಹಿರಿಯರೊಬ್ಬರು ಅಳಲು ತೋಡಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link