ತಿಪಟೂರು ಜಿಲ್ಲಾ ಕೇಂದ್ರದ ಕೂಗು : ಹೆಚ್ಚಿದ ಒತ್ತಾಯ!!

 ತಿಪಟೂರು :

      ಬಹಳ ವರ್ಷಗಳಿಂದ ತಿಪಟೂರುಜಿಲ್ಲಾಕೇಂದ್ರವಾಗಲು ಹೋರಾಟಗಳು ನಡೆಯುತ್ತಲೇ ಇವೇ ಆದರೆ ಈಗ ಕೈಗೂಡಬಹುದೆಂಬ ನಂಬಿಕೆಯಿಂದ ತಿಪಟೂರು ಸುತ್ತಮುತ್ತಲಿನ ತಾಲ್ಲೂಕಿನ ಜನರು ತಿಪಟೂರು ಜಿಲ್ಲೆಯನ್ನು ಮಾಡಲೇಬೇಕೆಂಬಛಲದೊಂದಿಗೆ ಹಲವಾರು ಸಂಘಟನೆಗಳು ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿಕಾರ್ಯೋನ್ಮುಖವಾಗಿವೆ.

      ಇಷ್ಟುದಿನ ಸುಮ್ಮನಿದ್ದಜಿಲ್ಲಾ ಹೋರಾಟಗಾಗರರು ಮೊನ್ನೆನಡೆದಅಧಿವೇಶನದ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್ ತಿಪಟೂರನ್ನು ಜಿಲ್ಲಾಕೇಂದ್ರವನ್ನಾಗಿ ಒತ್ತಾಯಿಸಬೇಕೆಂದು ಆಗ್ರಹಿಸಿ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ್ದ ಭರವಸೆಯನ್ನು ಜ್ಞಾಪಿಸಿದರು. ತಿಪಟೂರುನ್ನು ಜಿಲ್ಲಾ ಕೇಂದ್ರ ಮಾಡಲು ಹಲವಾರು ಸಮಿತಿಗಳನ್ನು ರಚಿಸಿಕೊಂಡು ಹೋರಾಡುತ್ತಿದ್ದಾರೆ.

      ತಿಪಟೂರು ತಾಲ್ಲೂಕುತುಮಕೂರುಜಿಲ್ಲೆಗೆಕಂದಾಯವನ್ನುತರುವ ತಾಲ್ಲೂಕುಗಳಲ್ಲಿ ಮೇಲ್ಪಂಕ್ತಿಯಲ್ಲಿದ್ದುಜೊತೆಗೆ ಏಷ್ಯಾದಲ್ಲೆ ದೊಡ ್ಡಕೊಬ್ಬರಿ ಮಾರುಕಟ್ಟೆಯನ್ನು ಹೊಂದಿರುವತಿಪಟೂರು ಸಾಕಷ್ಟು ಆದಾಯವನ್ನುತರುವುದರಜೊತೆಗೆ, ದಕ್ಷಿಣರೈಲ್ವೆಯಲ್ಲಿ ಬರುವ ಹುಬ್ಬಳ್ಳಿ-ಬೆಂಗಳೂರು ರೈಲ್ವೆಯಲ್ಲಿದಾವಣಗೆರೆಯನ್ನು ಬಿಟ್ಟರೆತಿಪಟೂರುರೈಲ್ವೆ ನಿಲ್ದಾಣವು ಹೆಚ್ಚು ಆದಾಯವನ್ನುತರುತ್ತಿದೆ. ಇನ್ನುಇಲ್ಲಿರುವರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದುಜಿಲ್ಲೆಕೇಂದ್ರಕ್ಕೆ ಬೇಕಾಗಿರುವಅತ್ಯುನ್ನತ ಮೂಲಭೂತ ಸೌಲಭ್ಯಗಳನ್ನು ನಮ್ಮತಿಪಟೂರು ಹೊಂದಿದೆ. ಒಂದುಜಿಲ್ಲಾಕೇಂದ್ರವನ್ನು ಮಾಡಲು ಸರ್ಕಾರಕ್ಕೆ ಸುಮಾರು 2000 ಕೋಟಿ ರೂಗಳ ಅವಶ್ಯಕತೆ ಸರ್ಕಾರಕ್ಕೆ ಬರಬಹುದುಎನ್ನುವುದಾದರೆತಿಪಟೂರುಜಿಲ್ಲಾಕೇಂದ್ರವನ್ನು ಮಾಡಲು 500 ಕೋಟಿ ರೂಗಳು ಸಾಕಾಗಬಹುದೆಂಬ ಅಂದಾಜೂಕೂಡ ಮಾಡಲಾಗಿದೆ.

      ಈಗಾಗಲೇ ತಿಪಟೂರು ನಗರದಲ್ಲಿ ಉನ್ನತದರ್ಜೆಯ ಮಿನಿವಿಧಾನಸೌದ, ಸಿವಿಲ್ ನ್ಯಾಯಾಧೀಶರ ಕೋರ್ಟ್, ನಗರಸಭಾ ಕಾರ್ಯಾಲಯ, ರೈಲ್ವೆ ನಿಲ್ದಾಣ, ಉಪವಿಭಾಗಾಧಿಕಾರಿಗಳ ಕಚೇರಿ, ಸಹಾಯಕ ಪ್ರಾದೇಶಿಕ ಸಾರಿಗೆಕಛೇರಿ, ಕೆ.ಪಿ.ಟಿ.ಸಿ.ಎಲ್ ಉಪವಿಭಾಗ, ಪೋಲೀಸ್ ಉಪ ಅಧೀಕ್ಷಕರ ಕಚೇರಿ ಸೇರಿ ಉನ್ನತ ಶೈಕ್ಷಣಿಕಕೇಂದ್ರವಾಗಿದೆ, ದೇಶ-ವಿದೇಶದಿಂದ ಭಕ್ತಾದಿಗಳನ್ನು ಹೊಂದಿರುವಕೆರೆಗೋಡಿ-ರಂಗಾಪುರ ಸುಕ್ಷೇತ್ರ, ನೊಣವಿನಕೆರೆ ಕಾಡಸಿದ್ದೇಶ್ವರ ಮಠ, ದಸರೀಘಟ್ಟ, ಇತಿಹಾಸ ಪ್ರಸಿದ್ಧ ಅರಳಗುಪ್ಪೆ, ಕಿಬ್ಬನಹಳ್ಳಿ, ವಿಘ್ನಸಂತೆ, ಹೊನ್ನವಳ್ಳಿ. ಹೊಸಪಟ್ಟಣ, ಮುಂತಾದ ಕ್ಷೇತ್ರಗಳಿವೆ.

      ದೊಡ್ಡ ಜಿಲ್ಲೆ ವಿಭಜನೆ ಅಗತ್ಯ :

      ರಾಜ್ಯದಲ್ಲಿ ದೊಡ್ಡಜಿಲ್ಲೆಗಳಲ್ಲಿ ಬೆಳಗಾವಿ ಬಿಟ್ಟರೆ ತುಮಕೂರು 2ನೇ ಸ್ಥಾನದಲ್ಲಿದೆ. ತಿಪಟೂರುತಾಲ್ಲೂಕು ಹಾಗೂ ಚಿಕ್ಕನಾಯಕನಹಳ್ಳಿ ಗಡಿಭಾಗದಿಂದ ತುಮಕೂರು ಜಿಲ್ಲೆಯನ್ನು ತಲುಪಲು ಸುಮಾರು 125 ಕಿ.ಲೋ ಮೀಟರ್ ಸಾಗಬೇಕು ಹಾಗೂ ಈಗಾಗಲೇ 20 ಲಕ್ಷ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವತುಮಕೂರುಜಿಲ್ಲೆಯನ್ನು ವಿಭಜಿಸಿ ತಿಪಟೂರು ಜಿಲ್ಲೆಯನ್ನಾಗಿ ಮಾಡಿಇದಕ್ಕೆ ಪೂರಕವಾಗಿ ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಸೇರಿಸಿಕೊಂಡು, ಹೊಸ ತಾಲ್ಲೂಕಾಗಲು ತುದಿಗಾಗಲಲ್ಲಿ ಕಾಯುತ್ತಿರುವ ಹುಳಿಯಾರನ್ನು ತಾಲ್ಲೂಕಾಗಿ ಮಾಡಿ ತಿಪಟೂರು ಕಲ್ಪತರು ಜಿಲ್ಲೆಯನ್ನಾಗಿ ಮಾಡುವಂತೆ ಕೂಗು ಪ್ರಬಲವಾಗಿದೆ. 

ಲೋಕ ಸಭಾ ಕ್ಷೇತ್ರವಾಗಿದ್ದ ತಿಪಟೂರು:

      ಸ್ವಾತಂತ್ರ ನಂತರರಾಜ್ಯವಿಂಗಡನೆಯಲ್ಲಿ ಮೈಸೂರು ಪ್ರಾಂತ್ಯಕ್ಕೆತಿಪಟೂರು ಸೇರಿತ್ತು. 1951 ಮೊದಲ ಸಾರ್ವತ್ರಿಕಚುನಾವಣೆಯಲ್ಲಿ ಗುರುತಿಸಿಕೊಳ್ಳದ ಲೋಕಸಭಾಕ್ಷೇತ್ರ 1957 ಮತ್ತು 1962ರ ಚುನಾವಣೆಯಲ್ಲಿತಿಪಟೂರು ಲೋಕಸಭಾಕ್ಷೇತ್ರವಾಗಿ ಗುರುತಿಸಲ್ಪಟ್ಟು ಹಿರಿಯ ಮುಖಂಡ ಸಿ.ಆರ್.ಬಸಪ್ಪ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಆದರೆ 1967ರ ಚುನಾವಣೆಯಲ್ಲಿ ಲೋಕಸಭಾಕ್ಷೇತ್ರ ಮರುವಿಂಗಡನೆಯಾ ಗಿತುಮಕೂರು ಲೋಕಸಭಾಕ್ಷೇತ್ರಕ್ಕೆತಿಪಟೂರು ಸೇರ್ಪಡೆಯಾಯಿತು. ಹಿಂದೆ ಕುಣಿಗಲ್, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರುವನ್ನೊಳಗೊಂಡ ತಿಪಟೂರು ಉಪವಿಭಾಗಕೇಂದ್ರವಿತ್ತು. ಈಗಲೂ ಕಂದಾಯ ವಿಭಾಗಕ್ಕೆ ತುರುವೇಕೆರೆ, ತಿಪಟೂರು ಚಿಕ್ಕನಾಯಕನಹಳ್ಳಿ ಸೇರಿ ಉಪವಿಭಾಗ ಹಾಗೆಯೇ ಉಳಿದಿದ್ದು ಈ ಮೂರು ತಾಲ್ಲೂಕುಗಳ ಹಾಗೂ ಹುಳಿಯಾರು ತಾಲ್ಲೂಕನ್ನಾಗಿ ಮಾಡುವುದರಜೊತೆಗೆ ಪಕ್ಕದ ಅರಸೀಕೆರೆ ತಾಲ್ಲೂಕನ್ನು ಮಾಡಿದ ಜಿಲ್ಲಾಕೇಂದ್ರ ದಿಂದ ಈ ಮೇಲಿನ ತಾಲ್ಲೂಕುಗಳಿಗೆ 25 ರಿಂದ 30 ಕಿ.ಮಿ.ಬಳಗೆ ಬರುವುದಲ್ಲದೇಅರ್ದಮುಕ್ಕಾಲುಗಂಟೆಯಲ್ಲಿ ಚಲಿಸಬಹುದು.

      ವಿದ್ಯಾಕೇಂದ್ರ:

      ತಿಪಟೂರು ಕಲ್ಪತರು ನಾಡಿನಲ್ಲಿ ತುಮಕೂರನ್ನು ಬಿಟ್ಟರೆ ಶೈಕ್ಷಣಿಕ ನಗರಿಯಾಗಿ ಬೆಳೆದಿದೆ. ಇದಕ್ಕೆ ಮುಖ್ಯವಾಗಿ ಕಲ್ಪತರು ವಿದ್ಯಾಸಂಸ್ಥೆ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಸುತ್ತಮುತ್ತ ಜಿಲ್ಲೆಗಳಲ್ಲಿ ಶಿಕ್ಷಣಕ್ಕಾಗಿ ಮೈಸೂರು, ಬೆಂಗಳೂರನ್ನು ಹುಡುಕಿ ಹೋಗುವ ಸಂದರ್ಭದಲ್ಲಿಕಲ್ಪತರು ವಿದ್ಯಾಸಂಸ್ಥೆಯು ಸ್ಥಾಪನೆಯಾಗಿದ್ದರಿಂದತಿಪಟೂರು ಶಿಕ್ಷಣ ಕಾಶಿಯಾಗಿ ಮಾರ್ಪಟ್ಟುಇಲ್ಲಿಗೆ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಮಂಡ್ಯ ಮುಂತಾದ ಜಿಲ್ಲೆಗಳಿಂದ ಶಿಕ್ಷಣವನ್ನು ಅರಿಸಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹವನ್ನು ನೀಡಿದೆ. ಈಗ ತಿಪಟೂರಿನಲ್ಲಿಮೆಡಿಕಲ್‍ಕಾಲೇಜೊಂದನ್ನು ಬಿಟ್ಟುಇಂಜಿನಿಯರಿಂಗ್, ಡಿಪ್ಲೋಮ, ಪದವಿ, ಸ್ನಾತಕೋತ್ತರಪದವಿ ಕಾಲೇಜುಗಳು ಸೇರಿದಂತೆ ಉನ್ನತ ವಿದ್ಯಾಭ್ಯಾಸದಕೇಂದ್ರವಾಗಿದೆ.

      ಹೆಚ್ಚಿನ ಜೀವಗಳ ರಕ್ಷಣೆಗೆ ಸಹಕಾರಿ:

      ಈ ಎಲ್ಲಾ ತಾಲ್ಲೂಕುಗಳಿಂದ ಜಿಲ್ಲಾಸ್ಪತ್ರೆಗೆ ಸಾಗಬೇಕಾದರೆ 2 ರಿಂದ 3 ಗಂಟೆಗಳ ಸಮಯವನ್ನು ಕಳೆಯಲೇ ಬೇಕು. ಅಪಘಾತದಂತಹ ಸಂದರ್ಭದಲ್ಲಿ ದಾರಿ ಮಧ್ಯದಲ್ಲೇ ಹೆಚ್ಚು ಪ್ರಾಣಹಾನಿಯಾಗುತ್ತಿದ್ದೆ.ಇಂತಹ ಸಂದರ್ಭದಲ್ಲಿತಿಪಟೂರುಜಿಲ್ಲೆಯಾದರೆ ಬಡವರಿಗೆ ಹೆಚ್ಚಿನಚಿಕಿತ್ಸೆಯಜೊತೆಗೆ ಪ್ರಾಣಾಪಾಯದತೊಂದರೆ ನೀಗಿ ಸಿ.ಟಿ.ಸ್ಕ್ಯಾನ್ ಮತ್ತಿತರರ ಸೌಲಭ್ಯಗಳು ದೊರೆತು ಬಡವರಿಗೆ ಸೂಕ್ತವಾದ ಸಹಾಯವಾಗುತ್ತದೆಎಂದುಅಜ್ಜಿಯೊಬ್ಬರು ನುಡಿಯುತ್ತಾರೆ.

  ಅವಳಿ ನಗರದ ಸೊಬಗು:

      ತಿಪಟೂರು ಜಿಲ್ಲಾ ಕೇಂದ್ರವಾದರೆ ಅರಸೀಕೆರೆ ಮತ್ತುತಿಪಟೂರು ಮಧ್ಯೆ ಇರುವರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಕೈಗಾರಿಕೆಗಳು ಸ್ಥಾಪನೆಯಾದರೆ ಸಾವಿರಾರುಜನರಿಗೆ ಉದ್ಯೋಗಸಿಕ್ಕು ಜಿಲ್ಲೆಯುಅಭಿವೃದ್ಧಿಯಾಗುತ್ತದೆ. ಇದರಿಂದ ರಾಜ್ಯದಲ್ಲಿ ಹೊಸದೊಂದು ವಾಣಿಜ್ಯನಗರ ಸೃಷ್ಟಿಯಾಗುತ್ತದೆ ಎಂಬುದು ಜನಾಭಿಪ್ರಾಯವಾಗಿದೆ.

      ಜವಳಿ ಉದ್ಯಮ:ಒಂದುಕಾಲದಲ್ಲಿಕೈಮಗ್ಗವನ್ನುಹೆಚ್ಚಾಗಿ ಹೊಂದಿದ್ದು ಈಗ ಪವರ್‍ಲೂಮ್‍ನಲ್ಲಿಹೆಸರುಮಾಡಿದ್ದು ದಿನನಿತ್ಯ ಲಕ್ಷಾಂತರ ರೂಪಾಯಿಗಳ ರೇಷ್ಮೆ ಮತ್ತಿತರ ವಿಧದ ಸೀರೆಗಳನ್ನು ನೇಯ್ದುರಾಜಧಾನಿ ಬೆಂಗಳೂರಿಗೆ ತಲುಪಿಸುತ್ತಿದ್ದಾರೆ. ಹಾಗೇಯೆತಾಲ್ಲೂಕಿನಲ್ಲಿ ದೇವಾಂಗ ಜನಾಂಗದವರು ಹೆಚ್ಚಾಗಿರುವ ಕೋಟೆನಾಯಕನಹಳ್ಳಿ, ಹಿಂಡಿಸ್ಕೆರೆ, ಮಂಜುನಾಥನಗರ, ಹೊನ್ನವಳ್ಳಿ, ಅಣ್ಣಾಪುರ, ಮುಂತಾದ ಊರುಗಳಲ್ಲಿ ಹೆಚ್ಚಿನಕೈಮಗ್ಗದ ಉದ್ಯಮಗಳಿದ್ದು ರಾಜ್ಯ ಸರ್ಕಾರಕ್ಕೆಉತ್ತಮಆದಾಯವನ್ನುತರುತ್ತಿದ್ದಾರೆ.

      ಏನೇ ಆದರೂ ಸಹ ತಿಪಟೂರು ನಾಯಕರುಗಳು ಪಕ್ಷಬೇಧವನ್ನು ಮರೆತು, ಎಲ್ಲಾ ಸಂಘ, ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳು ಒಟ್ಟಾಗಿ ಹೋರಾಡಿದಾಗ ಮಾತ್ರ ತಿಪಟೂರು ಜಿಲ್ಲಾಕೇಂದ್ರವಾಗಲು ಸಾಧ್ಯವಾಗುತ್ತದೆಎಂದುಜನರಅಭಿಪ್ರಾಯವಾಗಿದ್ದು ಇಂದುತಿಪಟೂರಿಗೆ ವಿವಿಧ ಕಾರ್ಯಕ್ರಮಗಳಿಗಾಗಿ ಬರುತ್ತಿರುವ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರವನ್ನುಕೊಡಲುಎಲ್ಲರೂತಯಾರಾಗಿದ್ದಾರೆ.

ತುಮಕೂರುಜಿಲ್ಲೆಯು ಬಹಳವಿಸ್ತಾರವಾಗಿದ್ದು ದೊಡ್ಡಜಿಲ್ಲೆಯಾಗಿದೆ. ಇದನ್ನು ವಿಭಜಿಸುವ ಅಗತ್ಯವಿದೆ.ಪಟೂರುತಾಲ್ಲೂಕುಜಿಲ್ಲೆಗೆ ಬೇಕಾಗಿರುವಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ.1949ರಲ್ಲೇ ಸ್ಥಾಪನೆಯಾದ ತಿಪಟೂರಿನಕೊಬ್ಬರಿ ಮಾರುಕಟ್ಟೆ ವಿಶ್ವಮಟ್ಟದಲ್ಲಿ ಹೆಸರಾಗಿದ್ದು, ತುಮಕೂರು ನಂತರ ವಿದ್ಯಾಂಕೇಂದ್ರವಾಗಿರುವುದಲ್ಲದೇ ಜಿಲ್ಲಾಕೇಂದ್ರಗಳಲ್ಲಿ ದೊರೆಯುವಆರೋಗ್ಯ ಸೇವೆಗಳು ಇಲ್ಲಿಯೇ ಸಿಗುತ್ತಿದ್ದು ಜಿಲ್ಲಾಕೇಂದ್ರವಾಗಲು ಪ್ರಶಸ್ತ್ಯವಾಗಿದೆ.

– ಬಿ.ಸಿ.ನಾಗೇಶ್ ಶಾಸಕ

      ತಿಪಟೂರುಜಿಲ್ಲಾಕೇಂದ್ರಕ್ಕೆ ನನ್ನ ಮೊದಲ ಆದ್ಯತೆಯಾಗಿದೆ. ತಿಪಟೂರುಜಿಲ್ಲಾಕೇಂದ್ರವಾದರೆ ಸ್ಥಳೀಯವಾಗಿ ಹೆಚ್ಚಿನಅಭಿವೃದ್ಧಿ ಸಾಧ್ಯವಾಗುತ್ತದೆ ವಿದ್ಯಾಕ್ಷೇತ್ರವಾದತಿಪಟೂರು ಈಗಾಗಲೇ ಕೊಬ್ಬರಿಗೆ ವಿಶ್ವಪ್ರಸಿದ್ದಿಯಾಗಿದ್ದು ಮುಂದೆ ವಾಣಿಜ್ಯ ಕೇಂದ್ರವಾಗುವುದರೊಂದಿಗೆ ದೇಶದಅಭಿವೃದ್ಧಿಗೆ ಪೂರಕವಾಗುತ್ತದೆ.

ಕೆ.ಷಡಕ್ಷರಿ, ಮಾಜಿ ಶಾಸಕ

      ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಲ್ಲಿ ತುಮಕೂರು ವಿಸ್ತಾರವಾಗಿದ್ದುಅಧಿಕಾರ ವಿಕೇಂದ್ರಿಕರಣಮಾಡಿ ತಳಮಟ್ಟದಿಂದ ಅಭಿವೃದ್ಧಿಯನ್ನು ಮಾಡಲುಜಿಲ್ಲೆಯಲ್ಲಿತಿಪಟೂರುನ್ನುಜಿಲ್ಲಾಕೇಂದ್ರವನ್ನಾಗಿ ಮಾಡಿತಿಪಟೂರು ಮತ್ತು ಅರಸೀಕೆರೆಯನ್ನು ಅವಳಿ ನಗರವನ್ನಾಗಿ ಮಾಡಿದರೆಒಂದು ಹೊಸ ವಾಣಿಜ್ಯ ಕೇಂದ್ರಕ್ಕೆ ದಾರಿಮಾಡಿಕೊಟ್ಟಂತಾಗುವುದಲ್ಲದೇ ಬಹುತೇಕರಿಗೆ ಉದ್ಯೋಗಾವಾಶಗಳು ಸಿಕ್ಕು ದೇಶವುಅಭಿವೃದ್ಧಿಯಾಗುತ್ತದೆ.

-ಲೋಕೇಶ್ವರ್. ಬಿ.ಜೆ.ಪಿ ಮುಖಂಡರು

      ನಮ್ಮ ಹುಳಿಯಾರಿನಿಂದ ತುಮಕೂರು ಬಹಳ ದೂರದಲ್ಲಿದೆ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿಯನ್ನು ಹೊಂದಿದ್ದು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು, ನಮ್ಮ ಭಾಗದ ಕೆಲವು ಹಳ್ಳಿಗಳು ಈಗಲೂ ಕೆಲವು ಮೂಲಭೂತ ಸೌಕರ್ಯಗಳನ್ನೇ ಕಾಣದಾಗಿವೆ. ಹುಳಿಯಾರನ್ನು ತಾಲ್ಲೂಕುಕೇಂದ್ರವನ್ನಾಗಿ ಮಾಡಿತಿಪಟೂರುನ್ನುಜಿಲ್ಲಾಕೇಂದ್ರವನ್ನಾಗಿ ಮಾಡಿದರೆ ನಮಗೂ ಜಿಲ್ಲೆಗೂ ಹತ್ತಿರವಾಗುವುದರಿಂದಅಭಿವೃದ್ಧಿ ಸಾಧ್ಯವಾಗುವುದಲ್ಲದೇರೈತರಿಗೂ ಮತ್ತು ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗುತ್ತದೆ.

-ಕೆಂಕೆರೆ ಸತೀಶ್, ಅಧ್ಯಕ್ಷ, ತಿಪಟೂರುಜಿಲ್ಲಾ ಹೋರಾಟ ಸಮಿತಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap