ತಿಪಟೂರು : ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

 ತಿಪಟೂರು : 

      ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನೌಕಕರು ನಡೆಸುತ್ತಿರುವ ಪ್ರತಿಭಟನೆಯಿಂದ ಇಂದು ನಗರದಲ್ಲಿ ಬೆಳಿಗ್ಗೆ ಹಿಂದಲೇ ಪ್ರಯಾಣಿಕರಿಗೆ ಬಿಸಿ ತಟ್ಟಿದ್ದು ಸೂಕ್ತ ಬಸ್ ಇಲ್ಲದೆ ಆಟೋ, ಖಾಸಗಿ ವಾಹನಗಳ ಮೂಲಕ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

      ಸದಾ ಜನಜಂಗುಳಿಯಿಂದ ಗಿಜಿ ಗುಡುತ್ತಿದ್ದ ನಗರದ ಬಸ್ ನಿಲ್ದಾಣವು ಇಂದು ಹಾಳು ಹಂಪೆಯಂತೆ ಕಂಗೊಳಿಸುತ್ತಿತ್ತು. ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳಿಗಾಗಿ ಮತ್ತೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸುತ್ತಿರುವುದು ಇಂದಿನಿಂದ ಪ್ರಾರಂಭಿಸಿದ್ದು ಪ್ರಯಾಣಿಕರಿಗೆ ಬಿಸಿ ತಟ್ಟಲಾರಂಭಿಸಿದೆ. ಇದರ ಮದ್ಯೆ ಸಾರಿಗೆ ಸಂಸ್ಥೆಯ ನೌಕರರು ನಾವು ಕಳೆದ ಬಾರಿ ಮುಷ್ಕರ ನಡೆಸಿದಾಗ 100 ದಿನಗಳೊಳಗಾಗಿ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆಂದು ತಿಳಿಸಿದ್ದ ಸರ್ಕಾರ ಈಗ ಚುನಾವಣೆ ನೀತಿ ಸಂಹಿತೆ ಹಾಗೂ ಇನ್ನಿತರೆ ನೆಪಗಳನ್ನು ಹೇಳಿಕೊಂಡು ದಿನಗಳನ್ನು ಮುಂದೆಹಾಕುತ್ತಲೇ ಇದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದರೆ ನಾವೇಕೆ ಪ್ರತಿಭಟೆಯನ್ನು ಮಾಡುತ್ತಿದ್ದೆವು, ಪ್ರಜೆಗಳಿಗೆ ತೊಂದರೆಯಾಗುತ್ತದೆ ಎಂದು ಗೊತ್ತಿದ್ದರು ನಮ್ಮ ಸಮಸ್ಯೆಗಳಿಗೆ ಸ್ವಂಧಿಸದ ಸರ್ಕಾರ ಈಗ ಪ್ರಜೆಗಳ ಸಮಸ್ಯೆ ಅರಿವಾಗುತ್ತಿದೆಯೆ , ನಾವು ಸಹ ಮನುಷ್ಯರೇ ನಮ್ಮ ಕಷ್ಟಗಳನ್ನು ಸರ್ಕಾರ ಸ್ವಲ್ಪವಾದರು ಆಲಿಸಲಿ ಎಂದು ತಿಳಿಸುತ್ತಾರೆ.

      ಒಟ್ಟಾರೆ ಸರ್ಕಾರ ಮತ್ತು ನೌಕರರ ನಡುವಿನ ಗುದ್ದಾಟದಲ್ಲಿ ಪ್ರಯಾಣಿಕರ ಪಾಡು ಪಾರದಾಡುವ ಸ್ಥಿತಿಯಂತೆ ದಂತಾಗಿದ್ದು. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು, ರೈತರಿಗೆ, ಹಾಗೂ ರೋಗಿಗಳು ಒಂದು ದಿನ ಹೆಚ್ಚಿನ ಹಣವನ್ನು ಕೊಟ್ಟುತಿರುಗಾಡಬಹುದು ಆದರೆ ಇಂದಿನ ಕೊರೋನಾ ಸಂಕಷ್ಟದ ಸರಮಾಲೆಯಲ್ಲಿ ಸಿಲುಕಿರುವ ಪ್ರಜೆಗಳು ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರವು ಇನ್ನುಂದು ಬರೆಯನ್ನು ಎಳೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap