ತಿಪಟೂರು :
ಕಳೆದ ವಾರದಿಂದ ಕೊರೋನಾ ಸೊಂಕು ಏರುತ್ತಲೆ ಸಾಗುತ್ತಿತ್ತು ಕಳೆದ ಎರಡು ದಿನ ದಿಂದ ಇಳಿಕೆಯತ್ತ ಸಾಗುತ್ತಿದ್ದು ಇಂದು 53 ಸೊಂಕಿತರು ದೃಢಪಟ್ಟಿದೆ.
ತಾಲ್ಲೂಕಿನಲ್ಲಿ 53 ಕೊರೋನಾ ಸೊಂಕಿತರು ಹೊಸದಾಗಿ ಕಂಡುಬಂದಿದ್ದು ಇಂದು 78 ಜನರು ಸೊಂಕಿನಿಂದ ಮುಕ್ತವಾದರು ಒಟ್ಟು 307 ಜನರು ಸೊಂಕಿತರು ತಾಲ್ಲೂಕಿನಲ್ಲಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷಾ ಕೇಂದ್ರದಲ್ಲಿ ಯಾವುದೆ ಸಾಮಾಜಿಕ ಅಂತರ ವಿಲ್ಲದೆ ಎಲ್ಲೆಂದರಲ್ಲಿ ಕುಳಿತಿದ್ದು ಕಂಡು ಬಂದಿದ್ದಲ್ಲದೆ ಬೇಗೆಬೇಗೆ ಪರೀಕ್ಷಿಸಿ ಕಳುಹಿಸ ಬೇಕೆಂದು ಪರೀಕ್ಷಾರ್ಥಿಗಳ ಸಂಬಂಧಿಕರು ಕೂಗಾಡುತ್ತಿದ್ದರು.
ಗರ್ಭಿಣಿಯರಿಗೆ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಪ್ರತ್ಯೇಕ ಸರದಿ ಮಾಡಿ :
ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯರು ಯಾವಾಗಲು ಜಾಗರೂಕರಾಗಿರುತ್ತಾರೆ ಆದರೂ ಸಹ ಗರ್ಭಿಣಿಯರಿಗೆ ಹೆರಿಗೆಗೆ ಮೊದಲು ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ.
ಕೋವಿಡ್ ಪರೀಕ್ಷಿಸಲು ಅವರಿಗೂ ಸಹ ಒಂದೇ ಸರದಿ ಸಾಲಿನಲ್ಲಿ ನಿಲ್ಲಿಸುತ್ತಿದ್ದು ಅಕಸ್ಮಾತ್ ಯಾರಿಂದಲಾದರೂ ಸೊಂಕು ಹರಡಿದರೆ ಆಗುವ ಅಪಾಯಕ್ಕೆ ಹೊಣೆಯಾರಾಗುತ್ತಾರೆ ಎಂಬುದನ್ನು ಗಮನಿಸಿ ಮೊದಲು ಗರ್ಭಿಣಿಯರಿಗೆ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಪ್ರತ್ಯೇಕ ಸರದಿಯನ್ನು ಮಾಡಬೇಕಾಗಿದೆ.
ಸೊಂಕಿತರು ಕಡಿಮೆ ಯಾಗುತ್ತಿದ್ದಾರೆಂದು ಮೈಮರೆಯದಿರಿ:
2 ದಿನಗಳಿಂದ ಸೋಂಕಿತರು ಕಡಿಮೆ ಯಾಗುತ್ತಿದ್ದಾರೆ ಎಂದು ಮೈಮರೆಯದಿರಿ ಏಕೆಂದರೆ ಗುರುವಾರದಿಂದ ಸರ್ಕಾರದ ನಿಯಮಗಳು ಕಟ್ಟುನಿಟ್ಟಾಗಿರುವುದರಿಂದ ಜನರು ಸಂಚಾರ ಕಡಿಮೆಯಾಗಿದ್ದು, ಹೆಚ್ಚಿನ ಜನರು ಪರೀಕ್ಷೆಗೆ ಬರದೆ ಇರುವುದರಿಂದ ಸೊಂಕಿತರು ಕಡಿಮೆಯಾಗಿದ್ದಾರೆ.
ನೊಂದಣಿಮಾಡಿಸಲು ಬರುತ್ತಿರುವ ಕೋವಿಡ್ ಸೊಂಕಿತರು: ಹೊರರೋಗಿ ಹಾಗೂ ಕೋವಿಡ್ ಪರೀಕ್ಷೆ ಮಾಡಿಸಲು ಬರುತ್ತಿರುವರಿಗೆ ಆಸ್ಪತ್ರೆಯ ಒಳಗಡೆ ಒಂದೆ ಕೇಂದ್ರವಿದ್ದು ಒಬ್ಬರೆ ಸಿಬ್ಬಂದಿ ಇದ್ದು ಉದ್ದದ ಸಾಲು ಇದ್ದೇ ಇರುತ್ತದೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಓಳಗೆ ಬರುವ ರೋಗಿಗಳಿಗೆ ಯಾವುದೆ ಸ್ಯಾನಿಟೈಸರ್ ಇಲ್ಲ ಇನ್ನೂ ಸಾಮಾಜಿಕ ಅಂತರವನ್ನು ಕೇಳುವಂತೇಯೆ ಇಲ್ಲದೆ ಇರುವುದು ವಿಪರ್ಯಾಸವಾಗಿದ್ದು ಇದನ್ನು ವೈದ್ಯಾಧಿಕಾರಿಗಳು ಸರಿಪಡಿಸದೆ ಇದ್ದರೆ ಸಾರ್ವಜನಿಕ ಆಸ್ಪತ್ರೆಯೆ ಕೊರೋನೊ ಹರಡುವ ಮುಖ್ಯ ಕೇಂದ್ರವಾಗುವುದರಲ್ಲಿ ಅನುಮಾನವೇ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
