ತಿಪಟೂರು :
ಕೋವಿಡ್ ವ್ಯಾಕ್ಸಿನ್ ಬಂದ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಕರೆದುಕೊಂಡು ಬಂದರು ನನಗೆ ಈಗ ಆಗುವುದಿಲ್ಲ ನಾಳೆ ಹಾಕಿಸಿಕೊಳ್ಳುತ್ತೇನೆ ಎಂದು ಕಾರಣ ಹೇಳುತ್ತಿದ್ದ ಜನರು ಯಾವಾಗ ಕೊರೋನಾ 2ನೇ ಅಲೆ ಆರ್ಭಟ ಹೆಚ್ಚಾದ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕ ಆಸ್ಪತ್ರೆಗಳತ್ತ ದಾಂಗುಡಿ ಇಡುತ್ತಿದ್ದಾರೆ.
ಸಾರ್ವಜನಿಕರೇನು ಸಾರ್ವಜನಿಕ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದಾರೆ ಆದರೆ ಲಸಿಕೆಯ ತೀರ್ವವಾದ ಅಭಾವದ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಂದ ಬಹುಪಾಲು ಜನರು ಲಸಿಕೆ ಇಲ್ಲದೆ ಬಂದ ದಾರಿಗೆ ಸುಂಕುವಿಲ್ಲವೆಂದು ವಾಪಸ್ಸಾಗುತ್ತಿದ್ದಾರೆ.
ಮುಖ್ಯವಾಗಿ ಬೆಳಿಗ್ಗೆಯಿಂದಲೆ ಜನರು ಆಸ್ಪತ್ರೆಗೆ ಆಗಮಿಸುತ್ತಿರುತ್ತಾರೆ ಈ ಸಂದರ್ಭದಲ್ಲಿ ಯಾವುದೆ ಸಾಮಾಜಿಕ ಅಂತರವಿಲ್ಲದೆ ಸರದಿಯಲ್ಲಿ ನಿಲ್ಲುವುದರಿಂದ ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡು ಹೋಗಲು ಬಂದವರು ಕೊರೋನಾವನ್ನು ತೆಗೆದುಕೊಂಡು ಹೋಗುವ ಸಂಭವವೆ ಹೆಚ್ಚಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ