ತಿಪಟೂರಿನ ಯೋಧ ಜಯರಾಮ್‍ನಾಯಕ್‍ಗೆ ಪೋಲೀಸ್ ಮೆಡಲ್ ಅವಾರ್ಡ್!!

 ತಿಪಟೂರು :

     ತಿಪಟೂರಿನ ಯೋಧ ಹವಲ್ದಾರ್ ಜಯರಾಮ್‍ನಾಯಕ್‍ಗೆ ಪೋಲೀಸ್ ಮೆಡಲ್ ಗ್ರಾಲೆಂಟ್ರಿ ಪ್ರಶಸ್ತಿ ಲಭಿಸಿದ್ದು, ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.

      ಜಯರಾಮ್‍ನಾಯಕ್ ಅವರು ತಾಲ್ಲೂಕಿನ ಕೊಬ್ಬರಿ ದೊಡ್ಡಯ್ಯನಪಾಳ್ಯದ ಮೂರ್ತಿನಾಯಕ್ ಮತ್ತು ಗೌರಮ್ಮ ದಂಪತಿಗಳ ಮಗನಾಗಿದ್ದು, ಮೊದಲಿನಿಂದಲೂ ಕ್ರಿಯಾಶೀಲರಾಗಿದ್ದು, ದೇಶಸೇವೆ ಮಾಡಲೇಬೇಕೆಂಬ ಛಲತೊಟ್ಟು 1998ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ದೇಶಕ್ಕಾಗಿ ಸೇವೆಸಲ್ಲಿಸುತ್ತಿದ್ದಾರೆ.

ಉಗ್ರರನ್ನು ಸದೆಬಡಿದಿದ್ದ ವೀರ ಸೇನಾನಿ :

      ಹವಲ್ದಾರ್ ಜಯರಾಮ್‍ನಾಯಕ್ ಅವರು ತಮ್ಮ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದು, ಹಲವಾರು ಕಾರ್ಯಚರಣೆಗಳಲ್ಲಿ ಭಾಗವಹಿಸಿದ್ದ ಅನುಭವ ಇದೆ. 2020ರ ಜನವರಿ 20ರಂದು ಜಮ್ಮು-ಕಾಶ್ಮೀರದ ಕುಲ್ಗಾಂಮ್ ಜಿಲ್ಲೆಯ ಲಕ್ಕಡಿಪುರ್ ಗ್ರಾಮದಲ್ಲಿ ಜೈಷೆ ಮೊಹ್ಮದ್ ಸಂಘಟನೆಯ ಆತಂಕವಾದಿಗಳು ಅಡಗಿಕುಳಿತಿರುವ ಸೂಚನೆಯ ಮೇರೆಗೆ 18ನೇ ಬೆಟಾಲಿಯನ್ ಸೈನಿಕರು 2ನೇ ಕಮಾಂಡಿಗ್ ಆಫೀಸರ್ ಮಾಯಾಂಕ್ ತಿವಾರಿಯ ಸಹಚರನಾಗಿ ಪಾಲ್ಗೊಂಡ ಹವಲ್ದಾರ್ ಜಯರಾಮ್ ನಾಯಕ್ ಅವರ ಗುಂಪಿನ ಮೇಲೆ ಉಗ್ರರು ತೀವ್ರವಾದ ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಎದೆಗುಂದದೇ ಉಗ್ರರನ್ನು ಹಿಡಿದು ದೇಶ ರಕ್ಷಿಸಿದ 2ನೇ ಕಮಾಂಡಿಗ್ ಆಫೀಸರ್ ಮಾಯಾಂಕ್ ತಿವಾರಿಯವರ ಸಹಚರನಾಗಿ ಪಾಲ್ಗೊಂಡ ಹವಲ್ದಾರ್ ಜಯರಾಮ್ ನಾಯಕ್‍ರವರಿಗೆ ಈಗ ರಾಷ್ಟ್ರಪತಿ ಪದಕದ ಗರಿ ಮೂಡಿದೆ.

ಇದೇ ತಿಂಗಳು ನಗರಕ್ಕೆ ಆಗಮನ :

ಹವಲ್ದಾರ್ ಜಯರಾಮ್ ನಾಯಕ್ ಅವರು ಜಮ್ಮ-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತೆಗೆದಿರುವ ಚಿತ್ರ

     ರಾಜ್ಯದಿಂದ ಸಿಗಬೇಕಾದ ಗೌರವಗಳು ತನ್ನ ಸೇವೆಗೆ ಸಿಗಲಿಲ್ಲವೆಂಬ ಬೇಸರ ಇವರಿಗಿದ್ದು, ದೇಶಕ್ಕಾಗಿ ಹಾಗೂ ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುವ ಯೋಧರಿಗೆ ಅವರ ಸೇವೆಯನ್ನು ಗುರ್ತಿಸುವ ಕೆಲಸವನ್ನು ನಾವು ಮಾಡಬೇಕು. ತಮ್ಮ ಜೀವ ಮತ್ತು ಜೀವನವನ್ನೇ ಪಣಕ್ಕಿಟ್ಟು ಹೋರಾಡುವ ಅವರಿಗೆ ಗೌರವಗಳು ದೊರೆಯುತ್ತಿದ್ದರೆ ಕುಟುಂಬದ ಸದಸ್ಯರ ಸಂಪರ್ಕದಿಂದ ದೂರವೇ ಇರುವ ಅವರುಗಳಿಗೆ ಆತ್ಮ ತೃಪ್ತಿಸಿಗುವ ಕಾರ್ಯವನ್ನು ನಾವುಗಳು ಮಾಡಬೇಕಾಗಿದ್ದು, ಇದೇ ತಿಂಗಳ 20ರ ನಂತರ ಹವಲ್ದಾರ್ ಜಯರಾಮ್‍ನಾಯಕ್ ತಮ್ಮ ಹುಟ್ಟೂರಿಗೆ ಆಗಮಿಸಲಿದ್ದಾರೆ ಆ ವೇಳೆ ಇವರಿಗೆ ಸಲ್ಲಬೇಕಾದ ಗೌರಗಳು ಸಲ್ಲಲ್ಲಿ ಎಂದು ಜನರು ಬಯಸುತ್ತಿದ್ದಾರೆ.

      ತಮ್ಮ ಪ್ರಾಣದ ಹಂಗನ್ನು ತೊರೆದು ದೇಶವನ್ನು ಕಾಯುವ ಯೋಧರು ಅಲ್ಲಿನ ಅನೇಕ ನಾಗರಿಕರ ಪ್ರಾಣವನ್ನು ಕಾಪಾಡಿದ್ದಾರೆ. ಇಂತಹುದೇ ಅನೇಕ ಸಂದರ್ಭಗಳಲ್ಲಿ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ, ದೇಶದ ಜನರಿಗಾಗಿ ಹೋರಾಡಿದ್ದಾರೆ. ಈ ಸೇವೆಗೆ ರಾಷ್ಟ್ರ ಪ್ರಶಸ್ತಿಗೆ ಬಾಜನರಾದ ನನ್ನ ಸ್ನೇಹಿತ ಎಂದು ಹೇಳಿಕೊಳ್ಳುವ ಸಂತೋಷವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ.
-ಶ್ರೀನಿವಾಸ್, ಜಯರಾಮ್ ನಾಯಕ್ ಸ್ನೇಹಿತ, ನಗರಸಭೆ ಸದಸ್ಯ, ತಿಪಟೂರು

 

 

Recent Articles

spot_img

Related Stories

Share via
Copy link