ಟೋಕಿಯೊ :
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೇನ್ ಬುಧವಾರ ಮಹಿಳೆಯರ ವೆಲ್ಟರ್ ವೈಟ್ (64-69 ಕೆಜಿ) ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
"Congratulations to Assam’s daughter Lovlina Borgohain for bringing home bronze medal in #Olympics boxing. Your name will be etched in golden letters in Assam's history. Entire nation's proud of her phenomenal achievement" tweets Assam CM HB Sarma
(Pic source:HB Sarma's Twitter) pic.twitter.com/HxZ4vip6zQ
— ANI (@ANI) August 4, 2021
ಇಂದು ನಡೆದ ಸೆಮಿ ಫೈನಲ್ ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋಲನುಭವಿಸಿದರು. ಈ ಮೂಲಕ ಲೊವ್ಲಿನಾ ಬೊರ್ಗೋಹೇನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ಟೋಕಿಯೊ ಒಲಿಂಪಿಕ್ಸ್ ನ ಭಾರತದ ಮೂರನೇ ಪದಕವಾಗಿದೆ.
ಇದಕ್ಕೂ ಮುನ್ನ ಟೋಕಿಯೋ ಒಲಂಪಿಕ್ಸ್ ಕ್ರೀಡಾ ಕೂಟದ ಮಹಿಳಾ ಬಾಕ್ಸಿಂಗ್ನಲ್ಲಿ ವಾಲ್ಟರ್ ಬೆಲ್ಟ್ 64 ರಿಂದ 69 ಕೆಜಿ ವಿಭಾಗದಲ್ಲಿ ನಡೆದ ಕ್ವಾರ್ಟರ್ಫೈನಲ್ ಕಾದಾಟದಲ್ಲಿ ಚೈನೀಸ್ ತೈಪೆಯ ಮಾಜಿ ಚಾಂಪಿಯನ್ ನಿಯೆನ್ ಚಿನ್ ಚೆನ್ ಅವರನ್ನು ಲವ್ಲಿನಾ ಬೊರ್ಗೊಹೈನ್ ಅವರು ಸೋಲಿಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದರು. ಮೊದಲಿಗೆ ಮುಯಿತೈ ಪಟುವಾಗಿದ್ದ 23 ವರ್ಷದ ಲವ್ಲಿನಾ ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ.
Well fought @LovlinaBorgohai! Her success in the boxing ring inspires several Indians. Her tenacity and determination are admirable. Congratulations to her on winning the Bronze. Best wishes for her future endeavours. #Tokyo2020
— Narendra Modi (@narendramodi) August 4, 2021
ಪದಕ ಗೆದ್ದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್’ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
