ಇಂದಿನಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಬೆಂಗಳೂರು:

    ವಾಹನ ಸವಾರರಿಗೆ ಬಿಗ್ ಶಾಕ್ ಎನ್ನುವಂತೆ ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ- ಹಾಸನ  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ದರ ಏರಿಕೆಯಾಗಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ  ಈ ಮಾಹಿತಿ ನೀಡಲಾಗಿದ್ದು, ಸೆಪ್ಟೆಂಬರ್ 1, 2025ರ ನಾಳೆಯಿಂದ ಜಾರಿಗೆ ಬರುವಂತೆ ಟೋಲ್ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿತ್ತು. ಅದರಂತೆ ನಿನ್ನೆ ಮಧ್ಯರಾತ್ರಿಯಿಂದ ಟೋಲ್ ದರ ಏರಿಕೆಯಾಗಲಿದೆ.

    ಇಂದು ಮಧ್ಯರಾತ್ರಿಯಂದಲೇ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್-75ರಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಿದೆ. ಹೀಗಾಗಿ ಲಘು ವಾಹನಗಳಿಗೆ ರೂ.10 ರಿಂದ 15ರಷ್ಟು, ಭಾರೀ ವಾಹನಗಳಿಗೆ ರೂ.50 ರಿಂದ 100 ರೂಪಾಯಿಯಷ್ಟು ಟೋರ್ ದರ ಏರಿಕೆಯ ಬಿಸಿ ತಟ್ಟಲಿದೆ.

   ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್‌ ಟೋಲ್​ಗಳಲ್ಲಿ ಏರಿಕೆಯಾಗಿದೆ. ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್​ಗಳಲ್ಲಿ ವಾಹನ ಸವಾರರಿಗೆ ಹೆಚ್ಚಿನ ಸುಂಕ ಹೊರೆ ಎದುರಾಗಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕ ಮುಖ ಸಂಚಾರಕ್ಕೆ 5 ರೂಪಾಯಿ, ದ್ವಿಮುಖ ಸಂಚಾರಕ್ಕೆ 10 ರೂಪಾಯಿ ದರ ಏರಿಕೆ ಮಾಡಲಾಗಿದೆ.

   ಈಗ ಇರುವ ದರಗಳೆಂದರೆ, ಫಾಸ್​ಟ್ಯಾಗ್ ಇರುವ ಕಾರು, ಜೀಪು, ವ್ಯಾನ್ ಹಾಗೂ ಹಗುರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 55 ರೂ ಇದೆ. ಇವತ್ತು ಮಧ್ಯರಾತ್ರಿಯಿಂದ ಇದರ ದರ 60 ರೂಗೆ ಏರಿಕೆ ಆಗುತ್ತದೆ. ದಿನದ ಸಂಚಾರವು 85 ರೂನಿಂದ 90 ರೂಗೆ ಏರಿಕೆ ಆಗುತ್ತಿದೆ. ಫಾಸ್​ಟ್ಯಾಗ್ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಟೋಲ್ ದರ 110 ರೂನಿಂದ 120 ರೂಗೆ ಏರಿಕೆ ಆಗುತ್ತಿದೆ. ಲೈಟ್ ಕಮರ್ಷಿಯಲ್ ವಾಹನ ಹಾಗೂ ಸರಕು ಸಾಗಣೆ ವಾಹನಗಳಾದರೆ ಏಕಮುಖ ಸಂಚಾರಕ್ಕೆ 100 ರೂ, ದಿನದ ಸಂಚಾರಕ್ಕೆ 155 ರೂ ಟೋಲ್ ಏರಿಸಲಾಗುತ್ತಿದೆ. 

   ಹೆದ್ದಾರಿಯಲ್ಲಿ ಟೋಲ್ ದರಗಳನ್ನು ಏರಿಸುವುದರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ. ಸಾಗಣೆ ವೆಚ್ಚ ಇತ್ಯಾದಿಗಳು ಏರಿಕೆ ಆಗಲಿವೆ. ಇದರ ಪರಿಣಾಮ ಬೇರೆ ಬೇರೆ ಸ್ತರಗಳಲ್ಲೂ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಘು ವಾಣಿಜ್ಯ ಹಾಗೂ ಸರಕು ವಾಹನಗಳು ಈಗಿನ ದರ ಏಕಮುಖ 100 ಹಾಗೂ ದಿನದ ಸಂಚಾರ 155 ದರ ಏರಿಕೆಯಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಇದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

Recent Articles

spot_img

Related Stories

Share via
Copy link