ಹುಳಿಯಾರು:
ಚಲಿಸುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿ ನಾಲ್ವರಿಗೆ ಗಾಯಗಳಾದ ಘಟನೆ ಹಂದನಕೆರೆ ಹೋಬಳಿ ಬೆಳಗೀಹಳ್ಳಿ ಬಳಿ ಭಾನುವಾರ ಮಧ್ಯಾಹ್ನ ಜರುಗಿದೆ.
ಹಂದನಕೆರೆ ಸಮೀಪದ ಕಾಮಲಾಪುರದ ವಾಲ್ಕು ವರ್ಷದ ಶ್ರೇಯಸ್ ಸಾವನ್ನಪ್ಪಿದ ದುರ್ಧೈವಿಯಾದ್ದಾನೆ. ಅರಸೀಕೆರೆ ತಾಲೂಕು ದುಮ್ಮೇನಹಳ್ಳಿ ಗ್ರಾಮದಿಂದ ಹತ್ತದಿನೈದು ಮಂದಿ ಟ್ರಾಕ್ಟರ್‍ನಲ್ಲಿ ಬೆಳಗುಲಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬರುತ್ತಿರುವಾಗ ಬೆಳಗಿಹಳ್ಳಿ ಬಳಿ ಟ್ರಾಕ್ಟರ್ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ.
ಪರಿಣಾಮ ಟ್ರಾಕ್ಟರ್‍ನ ಟ್ರೇಲರ್‍ನ ಕಂಬಿಯಿಂದ ಶ್ರೇಯಸ್ ತಲೆಗೆ ಪೆಟ್ಟು ಬಿದ್ದು ತೀರ್ವ ರಕ್ತಸ್ತ್ರಾವವಾದ ಪರಿಣಾಮ ಶ್ರೇಯಸ್ ಸ್ಥಳದಲ್ಲೇ ನಿಧನರಾಗಿದ್ದಾಳೆ. ಗಾಯಗೊಂಡ ನಾಲ್ವರನ್ನು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂದನಕೆರೆ ಪಿಎಸ್‍ಐ ಯೋಗೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿವರ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ