ತುಮಕೂರು : ಅಪರೂಪದ ತೋಳಹಾವು ಸೆರೆ

ತುಮಕೂರು :

      ತುಮಕೂರಿನ ಹೊರವಲಯದ ಮನೆಯೊಂದರಲ್ಲಿದ್ದ ತೋಳಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ರವಾನಿಸಲಾಗಿದೆ. ವಾರ್ಡ್‍ನಂ.1 ರ ರಂಗಾಪುರ ಗ್ರಾಮದ ವಿನಯ್ ಎಂಬುವರ ಮನೆಯಲ್ಲಿ ಶನಿವಾರ ರಾತ್ರಿ ತೋಳಹಾವು (ಲೈಕೋಡಾನ್ ಸ್ಟೈಟಸ್) ಕಾಣಿಸಿಕೊಂಡಿತ್ತು.

      ಈ ಬಗ್ಗೆ ಮಾಹಿತಿ ತಿಳಿದ ವನ್ಯಜೀವಿ ಜಾಗೃತ ಸಂಸ್ಥೆ ವರಾಂಗಲರ್ ಫೌಂಡೇಷನ್‍ನ ಉರುಗತಜ್ಞ ಗುರುಕಿರಣ್ ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಗುರುತಿಸಿದರು. ಅದನ್ನು ಸೆರೆ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟು ಬಂದರು.

      ಯಾವುದೇ ಪ್ರಾಣಿಗಳು, ಹಾವುಗಳು ಕಂಡುಬಂದರೆ ದೂರವಾಣಿ 9916790692 ಇಲ್ಲಿಗೆ ಕರೆ ಮಾಡುವಂತೆ ಉರಗ ತಜ್ಞ ದಿಲೀಪ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link