ತುಮಕೂರು : ಕೋವಿಡ್ ಲಸಿಕಾ ಕೇಂದ್ರಕ್ಕೆ ಶಾಸಕರ ಭೇಟಿ

 ತುಮಕೂರು : 

     ನಗರದ ಸಪ್ತಗಿರಿ ಬಡಾವಣೆ, ವಿಜಯನಗರದ ನಳಂದ ಕಾನ್ವೆಂಟ್‍ನ ಬಳಿ ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ವಿಷ್ಣುವರ್ಧನ, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್ ಹಾಗೂ ಪ್ರೈಮರಿ ಹೆಲ್ತ್‍ಕೇರ್ ಸೆಂಟರ್‍ನ ಡಾ. ಸುಭಾಷ್ ಹಾಗೂ ಅವರ ಸಿಬ್ಬಂದಿಯವರ ಸಹಯೋಗದೊಂದಿಗೆ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ ನೀಡಿ ಲಸಿಕೆ ಪಡೆಯುವ ಜನರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕಳೆದ ಎರಡು ದಿನಗಳಿಂದ ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಈ ಭಾಗದಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರಿದ್ದು, ತುಮಕೂರು ನಗರದಲ್ಲಿ ಇದು ಸಹ ಒಂದು ಕೋವಿಡ್ ಹಾಟ್‍ಸ್ಪಾಟ್ ಆಗಿದ್ದು, 4 ಸಾವಿರಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಇದೆ ಹಾಗೂ 32 ರಿಂದ 40 ಜನ ಕೋವಿಡ್‍ನಿಂದ ಮರಣ ಹೊಂದಿರುತ್ತಾರೆ. ಈ ಭಾಗದಲ್ಲಿ ಕೋವಿಡ್ ಲಸಿಕೆ ಅಗತ್ಯವಿದ್ದು, ಲಸಿಕೆ ಪಡೆದರೆ ಆದಷ್ಟು ಕೊರೋನ ಎಂಬ ಹೆಮ್ಮಾರಿಯನ್ನ ಎದುರಿಸಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

     ಈ ಭಾಗದ ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ವಿಷ್ಣುವರ್ಧನ ಅವರ ನೇತೃತ್ವದಲ್ಲಿ ಟಿ.ಹೆಚ್.ಸಿ ಹಾಗೂ ಟಿ.ಹೆಚ್.ಓ ಅವರಿಗೆ ಸಮಾನಾಂತರವಾಗಿ ಅಗತ್ಯವಿರುವಂತಹ ವಸ್ತುಗಳನ್ನ ಒದಗಿಸಿಕೊಟ್ಟಿದ್ದಾರೆ. ಇಲ್ಲಿ ಬರುವ ಜನರಿಗೆ ಯಾವುದೇ ಕೊರತೆಯಿಲ್ಲದೇ ವ್ಯವಸ್ಥಿತವಾಗಿ ಲಸಿಕೆ ಹಾಕಲಾಗುತ್ತಿದೆ. ನಗರದ ವಿಚಾರಕ್ಕೆ ಬಂದಾಗ ಮುಂಬರುವ ದಿನಗಳಲ್ಲಿ ಹೆಚ್ಚಿನ ಡೋಸ್‍ಗಳು ಬಂದಾಗ ಸಾರ್ವಜನಿಕ ಆಸ್ಪತ್ರಯನ್ನ ಹೊರತುಪಡಿಸಿ, ನಗರದ ಎರಡು ಮೂರು ವಾರ್ಡ್‍ಗಳನ್ನ ಕ್ಲಬ್ ಮಾಡಿ ಲಸಿಕೆ ನೀಡಲು ಸೂಕ್ತವಾದ ವ್ಯವಸ್ಥಿತವಾದ ಸ್ಥಳವನ್ನ ಗುರುತಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆ ಭಾಗದ ಪಾಲಿಕೆ ಸದಸ್ಯರುಗಳ ನೇತೃತ್ವದಲ್ಲಿ ಆಯುಕ್ತರು, ಮಹಾಪೌರರು, ಉಪಮಹಾಪೌರರು ಸೇರಿ ಟಿ.ಹೆಚ್.ಓ ಹಾಗೂ ಪಿ.ಹೆಚ್.ಸಿ ಅಧಿಕಾರಿಗಳಿಗೆ ಸಂಪೂರ್ಣವಾದ ಸಹಕಾರವನ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಪತ್ರಿನಿತ್ಯ ಲಸಿಕೆ ಪಡೆಯುವ ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳದೇ ಆದ್ಯತೆ ಮೇರೆಗೆ 45 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಲಸಿಕೆ ಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ವಿಷ್ಣುವರ್ಧನ, ತಾಲ್ಲೂಕು ಆರೋಗ್ಯಾಧಿಕಾರಿಗಳಾದಂತಹ ಮೋಹನ್ ಹಾಗೂ ಪ್ರೈಮರಿ ಹೆಲ್ತ್‍ಕೇರ್ ಸೆಂಟರ್‍ನ ಡಾ. ಸುಭಾಷ್ ಹಾಗೂ ಅವರ ಸಿಬ್ಬಂದಿಯವರು, ನೋಡಲ್ ಆಫೀಸರ್ ಅರುಣ್ ಕುಮಾರ್, ಸ್ವಯಂ ಸೇವಕ ಕಿಶೋರ್, ಬಿಜೆಪಿ ಮುಖಂಡರಾದ ಚೇತನ್, ಪ್ರವೀಣ್, ನಾಗೇಶ್, ಆಟೋ ಶ್ಯಾಮ್, ಬಿ.ಕೆ.ಎಸ್ ಆರಾಧ್ಯ ಹಾಗೂ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap