ತುಮಕೂರು :

ಕೊರೊನಾ ಕಟ್ಟಿಹಾಕಲು ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ.ಆದರೆ ಪೊಲೀಸರಿಗೆ ಒಂದಲ್ಲ ಒಂದು ಸುಳ್ಳು ಹೇಳಿ ಜನ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಮುಂದೆ ತುಮಕೂರು ಜನರ ಸುಳ್ಳು ಹೇಳಲು ಆಗಲ್ಲಾ,.. ಬೀದಿ .. ಗಲ್ಲಿ ಗಳಲ್ಲಿ ಓಡಾಡೋ ಜನರು ಇನ್ನೂ ಮುಂದೆ ಹುಷಾರಾಗಿ ಹೆಜ್ಜೆಇಡಬೇಕು.ಯಾಕೆ ಅಂದರೆ ಪೊಲೀಸ್ ಕಾಲ್ನಡಿಗೆ ಗಸ್ತು ತಿರುಗಲಿದ್ದಾರೆ.
ಈ ನೂತನ ಪ್ರಯೋಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕೋನ ವಂಶಿ ಕೃಷ್ಣ ಐಪಿಎಸ್ ರವರು ಮೆಳೆಕೋಟೆ ರಸ್ತೆಯಿಂದ ಬುಧವಾರ ಸಂಜೆ ಚಾಲನೆ ನೀಡಿದರು.
ಜಿಲ್ಲೆ ಎಲ್ಲಾ ಪೊಲೀಸ್ ಠಾಣೆಗಳಿಂದ ಐದು ಜನರ ತಂಡ ರಚಿಸಿ ಕೋವಿಡ್ 19 ರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಮುನ್ನೆಚ್ಚರಿಕೆ, ಹಾಗೂ ಮಾಸ್ಕ್ ಧರಿಸಿಕೂಳ್ಳದಿರುವವರ ಮೇಲೆ ದಂಡ ಕೂಡ ಹಾಕಲಾಗುತ್ತದೆ. ನಗರದ ಪ್ರಮುಖ ರಸ್ತೆ ಗಳಲ್ಲಿ ಚೆಕ್ ಪಾಯಿಂಟ್ ಹಾಕಲಾಗಿದ್ದು ಇಲ್ಲಿ ರಸ್ತೆಯಲ್ಲಿ ವಾಹನಗಳಲ್ಲಿ ಸುಮ್ಮನೆ ತಿರುಗುತ್ತಿರುವ ವಿಚಾರಣೆ ಮತ್ತು ದಂಡ ಹಾಕಲಾಗುತ್ತದೆ ಎಂದು ಎಸ್ಪಿ ವಂಸಿಕಷ್ಣ ಹೇಳಿದರು.
ಈ ಕಾಲ್ನಡಿಗೆ ಗಸ್ತಿನಲ್ಲಿ ಅಡಿಷನಲ್ ಎಸ್ಪಿ ಟಿ.ಜೆ.ಉದೇಶ, ಹಾಗೂ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








