ಅಕ್ಟೋಬರ್ 15 ಮಹಿಳಾ ರೈತದಿನಾಚರಣೆಗೆ ಸಿದ್ಧತೆ.

0
30

ತುಮಕೂರು:

     ಸಹಜ ಬೇಸಾಯ ಶಾಲೆ ಸಂಖ್ಯೆಗೆ ಎದರುವುದಿಲ್ಲ, ಸಮಸ್ಯೆಗಳನ್ನು ಮೆಟ್ಟಿ ಮುನ್ನುಗ್ಗುತ್ತಿದ್ದೇವೆ. ಇದು ಒಂದು ಸುಧೀರ್ಘ ಪಯಣ ಮುಖಾಮುಖಿ ಚರ್ಚೆ ಮೂಲಕ ಸಮಸ್ಯೆ ನಿವಾರಿಸಿಕೊಂಡು ಪರಿಹಾರ ಕಂಡುಕೊಂಡು ಅನೌಪಚಾರಿಕವಾಗಿ ಅಷ್ಟೇ ಗಂಭೀರವಾಗಿ ಮುನ್ನುಗ್ಗೋಣ. ಸಹಜ ಬೇಸಾಯ ನಮ್ಮ ಸಂಸ್ಕತಿಯಾಗಲಿ, ಪ್ರತಿ ಸಹಜ ಬೇಸಾಯ ತೋಟವು ಒಂದೊಂದು ಬೀಜದ ರೀತಿ ಸ್ಪೋಟಗೊಂಡು ಹೆಚ್ಚಾಗುತ್ತಾ ಹೋಗಲಿ ಅದೇ ನಮ್ಮ ಗುರಿ, ಇದು ಒಂದು ಚಳುವಳಿ ದ್ವೀಪಗಳ ಸೃಷ್ಟಿ ನಮ್ಮ ಗುರಿ ಹಾಗಬಾರದು ಎಂದು ಸಿ.ಯತಿರಾಜು ಸಹಜ ಬೇಸಾಯಗಾರರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

      ಹುಳಿಯಾರು ಸಮೀಪದ ಸುವರ್ಣಮ್ಮ ಸಿದ್ದಬಸಪ್ಪ ಎನ್ನುವ ರೈತ ಮಹಿಳೆಯ ಮನೆಹತ್ತಿರ ನಡೆದ ಸಹಜ ಬೇಸಾಯಗಾರರ ಜಿಲ್ಲಾ ಸಮಾವೇಶದಲ್ಲಿ ಜಿಲ್ಲೆಯ ಶಿರಾ, ಪಾವಗಡ, ಕುಣಿಗಲ್, ಚಿ.ನಾ.ಹಳ್ಳಿ, ತುಮಕೂರು ತಾಲೋಕುಗಳಿಂದ ಬಂದಿದ್ದ ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಒಬ್ಬೊಬ್ಬರಾಗಿ ಹೇಳಿಕೊಂಡರು. ಅದರಲ್ಲಿ ನೀರಿನ ಸಮಸ್ಯೆ, ಗಿಡಗಳ ಬೆಳವಣಿಗೆ ಕುಂಟಿತತೆ, ಜೀವಾಮೃತ ತಯಾರಿ, ಮಾರುಕಟ್ಟೆ, ಸಜೀವ ಹೊದಿಕೆ, ದೇಸಿ ಬೀಜಗಳು ಇತ್ಯಾಧಿ ಸಮಸ್ಯೆಗಳಿದ್ದವು. ಅವುಗಳೆಲ್ಲವನ್ನು ಕೃಷಿವಿಜ್ಞಾನಿ ಡಾ.ಮಂಜುನಾಥ್ ಒಂದೊಂದಾಗಿ ನಿವಾರಿಸುವ ತಂತ್ರಗಳ ಕುರಿತು ತಿಳಿಸಿದರು. ಮೂರು ತಿಂಗಳುಗಳಿಗೊಮ್ಮೆ ಎಲ್ಲಾ ಸಹಜ ಬೇಸಾಯಗಾರರು ಒಂದೆಡೆ ಸೇರಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.

      ಡಾ.ಮಂಜುನಾಥ್ ಮಾತನಾಡುತ್ತಾ ಮಣ್ಣಿನ ಆರೋಗ್ಯ ವೃದ್ಧಿಸುವುದು ಬಹಳ ಮುಖ್ಯವಾದ ಕೆಲಸ, ನೀರು ಎಂದಿಗೂ ಸಮಸ್ಯೆಯಲ್ಲ, ವಿವಿಧ ದೇಸಿ ತರಕಾರಿ ಬೀಜಗಳನ್ನು ನಿಮ್ಮ ಹೊಲಗಳಲ್ಲಿ ಬೀಜದುಂಡೆ ಮಾಡಿ ಎರಚಿ ಮಳೆಬರುತ್ತಿರವುದರಿಂದ ಸೋಕ್ತ ಸಮಯ, ದೇಸಿ ಬೀಜಗಳನ್ನು ಸಂರಕ್ಷಿಸಿ ಹಂಚಿಕೊಳ್ಳ ಬೇಕು ಹೀಗೆ ಮುಂತಾದ ಪರಿಹಾರಗಳನ್ನು ರೈತರಿಗೆ ನೀಡಿದರು. ಅಕ್ಟೋಬರ್ 15 ರಂದು ಪಾವಗಡ ತಾಲೋಕಿನ ನಾಗಲ ಮಡಿಕೆಯಲ್ಲಿ ಮಹಿಳಾ ರೈತ ದಿನಾಚರಣೆಯನ್ನು ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

      ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕರಾದ ಸಿದ್ದಬಸಬ್ಬ ನವರು ಸಹಜ ಬೇಸಾಯ ನಮಗೆ ತುಂಬಾ ಖುಷಿಕೊಟ್ಟಿದೆ, ಲಕ್ಷ-ಲಕ್ಷ ಖರ್ಚು ಮಾಡಿ ವಿಷಯುಕ್ತ ಬೆಳೆ ಬೆಳೆದು ಗ್ರಾಹಕರಿಗೆ ಕೊಡುವುದು ಪಾಪ ಮಾಡಿದಂತೆ, ಆದರಿಂದಲೇ ನಾನು ದಾಳಿಂಬೆ ಬೆಳೆಯಲಿಲ್ಲ. ಸಹಜ ಬೇಸಾಯ ಮಾಡುತ್ತಿರುವುದರಿಂದ ನಮ್ಮ ತೋಟ ದಿನೇ ದಿನೇ ಕಂಗೊಳಿಸುತ್ತಿದೆ. ಎಲ್ಲರೂ ಇದೇ ರೀತಿ ಸಹಜ ಬೇಸಾಯ ಗಾರರಾದರೆ ದೇಶಕ್ಕೆ ಒಳಿತು, ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಮಾತನಾಡಿದರು.

      ಕಾರ್ಯಕ್ರಮವನ್ನು ರಾಮಕೃಷ್ಣಪ್ಪ ನಡೆಸಿಕೊಟ್ಟರು, ಎನ್.ಇಂದಿರಮ್ಮ ದಾಖಲಿಸಿಕೊಂಡರು. ಡಾ.ನಾಗೇಂದ್ರ, ಪ್ರೀತಮ್.ಸಿ.ರಾಜ್, ರವೀಶ್, ರೂಪ, ಸ್ವಾತಿ ಬಾಲಾಜಿ, ಮಧುಸೂದನ.ಕೆ.ಪಿ ವಿವೇಕ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here