ತುಮಕೂರು :
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ವಿವಿಧ ವಿವಿ ಕುಲಪತಿಗಳ ನೇತೃತ್ವದಲ್ಲಿ ವಿಷಯವಾರು ತಜ್ಞರ ಸಮಿತಿಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಚಿಸಿದ್ದು, ಸಾಮಾಜಿಕ ವಿಜ್ಞಾನ ವಿಷಯದ ಸಮಿತಿಗೆ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರನ್ನು ಅಧ್ಯಕ್ಷರಾಗಿ ನಿಯೋಜಿಸಲಾಗಿದೆ.ಈ ಎಲ್ಲ ಸಮಿತಿಗಳು ಜೂನ್ 30ರೊಳಗೆ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಅಧ್ಯಕ್ಷರಾಗಿರುವ ಸಾಮಾಜಿಕ ವಿಜ್ಞಾನ ಸಮಿತಿ ಸದಸ್ಯರಾಗಿ, ಪ್ರೊ.ಬಿ.ಪಿ.ವೀರಭದ್ರಪ್ಪ, ಪ್ರೊ.ಬಿ.ಕೆ.ತುಳಸೀಮಾಲಾ, ಪ್ರೊ.ಎನ್.ಆರ್.ಭಾನುಮೂರ್ತಿ, ಪ್ರೊ.ಹರೀಶ್ ರಾಮಸ್ವಾಮಿ, ಪ್ರೊ.ಜಿ.ಸರ್ವಮಂಗಳ, ಪ್ರೊ.ವಿ.ಎ.ಅಮಿನಾಭಾವಿ, ಪ್ರೊ.ಎ.ರಾಮೇಗೌಡ, ಪ್ರೊ.ಸಂಗೀತಾ ಮನೆ, ಪ್ರೊ. ಎನ್.ನರಸಿಂಹಮೂರ್ತಿ, ಪ್ರೊ.ನಿರಂಜನ, ಪ್ರೊ.ಆರ್.ಆನ್. ಮನಗೊಳಿ, ಪ್ರೊ.ಗೋಪಾಲಕೃಷ್ಣ ಜೋಶಿ ನಿಯುಕ್ತಿಗೊಂಡಿದ್ದಾರೆ.
ಉಳಿದಂತೆ ಭಾಷೆ ಮತ್ತು ಭಾಷಾಶಾಸ್ತ್ರ ವಿಷಯ ಸಮಿತಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ (ಅಧ್ಯಕ್ಷರು), ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ ವಿಷಯ ಸಮಿತಿಗೆ ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ (ಅಧ್ಯಕ್ಷರು), ವಿಜ್ಞಾನ ಮತ್ತು ಗಣಿತ ಶಾಸ್ತ ವಿಷಯ ಸಮಿತಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ (ಅಧ್ಯಕ್ಷರು), ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ ವಿಷಯ ಸಮಿತಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ (ಅಧ್ಯಕ್ಷರು), ಕೃಷ್ಣ ಜೋಶಿ (ಸದಸ್ಯರು) ಭೂ ವಿಜ್ಞಾನ ವಿಷಯ ಸಮಿತಿಗೆ ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಂ.ಪಠಾಣ್ (ಅಧ್ಯಕ್ಷರು),ವಾಣಿಜ್ಯ ಮತ್ತು ನಿರ್ವಹಣೆ ವಿಷಯ ಸಮಿತಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿಎಸ್.ಯಡಪಡಿತ್ತಾಯ (ಅಧ್ಯಕ್ಷರು), ಎಂಜಿನಿಯರಿಂಗ್ ಸಮಿತಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದು ಪ್ರೊ.ಗೋಪಾಲಕೃಷ್ಣ ಜೋಶಿ ಅವರು ಎಲ್ಲ ವಿಷಯ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ