ಈಶ್ವರಪ್ಪಗೆ ಡಿಸಿಎಂ ಹುದ್ದೆ ಕಲ್ಪಿಸಿ ; ಕುರುಬ ಮುಖಂಡರು, ಶ್ರೀಗಳ ಆಗ್ರಹ

 ತುಮಕೂರು : 

     ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯಲು ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸಿದ ಹಿಂದುಳಿದ ವರ್ಗಗಳ ಮುಖಂಡ ಕೆ.ಎಸ್.ಈಶ್ವರಪ್ಪ ಕಾರಣರಾಗಿದ್ದು, ಅವರನ್ನು ಸಂಪುಟಪುನರ್‍ರಚನೆಯಲ್ಲಿ ಉಪಮುಖ್ಯಮಂತ್ರಿ ಮಾಡಬೇಕು ಎಂದು ಪಕ್ಷದ ವರಿಷ್ಠರನ್ನು ತುಮಕೂರು ಜಿಲ್ಲೆಯ ಕುರುಬ ಸಮುದಾಯದ ಸಂಘಟನೆಗಳು ಬಿಂದುಶೇಖರ್ ಒಡೆಯರ್ ಶ್ರೀಗಳ ನೇತೃತ್ವದಲ್ಲಿ ಒತ್ತಾಯಿಸುತ್ತಿರುವುದಾಗಿ ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಹಾಗೂ ತೆಂಗು ನಾರು ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು. 

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ರಾಜಕಾರಣ ಕೇಂದ್ರಿತವಾಗಿರುವುದು ಜಾತಿಯಲ್ಲಿಯೇ, ಜಾತಿ ಇಲ್ಲದೇ ರಾಜಕೀಯ ಮಾಡಲು ಸಾಧ್ಯವಿಲ್ಲ ಹಾಗಾಗಿ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತದೆ ಅನ್ಯಮಾರ್ಗವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಪಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂತೋಷ್ ಜೀ ಅವರನ್ನು ಬೇಟಿ ಮಾಡಿ ಕುರುಬರ ಸಂಘದಿಂದ ಮನವಿ ಸಲ್ಲಿಸಲಾಗುವುದು ಎಂದು ನುಡಿದರು.

     ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಅವರು ಮಾತನಾಡಿ, ರಾಜ್ಯದ ದೊಡ್ಡ ಸಮುದಾಯದ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ನಾಯಕನಿಗೆ ಮುಖ್ಯಮಂತ್ರಿ ಅನ್ನು ಮಾಡಲಿಲ್ಲ, ಕನಿಷ್ಠ ಉಪಮುಖ್ಯಮಂತ್ರಿಯಾಗಿ ಮಾಡಲಿ ಎಂದು ಮನವಿ ಮಾಡಿದರು.

     ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ: ತುಮಕೂರು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಗರುಡಯ್ಯ ಮಾತನಾಡಿ, ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಜೋಡೆತ್ತುಗಳಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದರು, ಅವರ ಶ್ರಮಕ್ಕೆ ತಕ್ಕನಾದ ಸ್ಥಾನಮಾನವನ್ನು ಪಕ್ಷ ಕಲ್ಪಿಸಬೇಕಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವಹಿಂದುಳಿದ ವರ್ಗಗಳ ನಾಯಕರಕೊಡುಗೆ ಅಪಾರವಾಗಿದೆ. ಆದರೆ ಪಕ್ಷದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳಿಗೆ ಅಷ್ಟಾಗಿ ಸ್ಥಾನ ಮಾನ ಸಿಗುತ್ತಿಲ್ಲ ಎಂದರು. 

     ಮಾಜಿ ಎಪಿಎಂಸಿ ಅಧ್ಯಕ್ಷ ಓಂ ನಮೋ ನಾರಾಯಣ ಮಾತನಾಡಿ ಯಡಿಯೂರಪ್ಪ ನಂತರ ಈಶ್ವರಪ್ಪ ಅವರಿಗೆ ಈ ಹಿಂದೆಯೂ ಅಧಿಕಾರ ನೀಡಲಿಲ್ಲ, ಪಕ್ಷದಲ್ಲಿ ಹಿರಿಯರಾಗಿರುವ ಈಶ್ವರಪ್ಪ ಅವರಿಗೆ ಸಮುದಾಯದ ಪರವಾಗಿ ಸಿಎಂ ಹುದ್ದೆ ನೀಡಬೇಕಿತು. ಹಿರಿತನವನ್ನು ಆಧರಿಸಿ ಡಿಸಿಎಂ ನೀಡಬೇಕು, ಉತ್ತಮ ಖಾತೆ ನೀಡಬೇಕೆಂದು ಆಗ್ರಹಿಸಿದರು.

     ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಆರ್‍ಎಂಸಿ ರಾಜು, ಉಪಾಧ್ಯಕ್ಷ ಕುಮಾರಸ್ವಾಮಿ, ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು, ಮಾಜಿ ಸದಸ್ಯ ಇಂದ್ರಕುಮಾರ್, ನಾಗಭೂಷಣ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಶಂಕರ್, ಟಿ.ಇ.ರಘುರಾಂ, ಕಾಳಿದಾಸ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜು, ಗೂಳೂರು ಕೃಷ್ಣಮೂರ್ತಿ, ಯೋಗೀಶ್, ಆದಿನಾರಾಯಣ್, ರಮೇಶ್, ಸಂಘಟನಾ ಕಾರ್ಯದರ್ಶಿ ಮಧುಗಿರಿ ಬಾಬು ಸೇರಿದಂತೆ ಇತರರಿದ್ದರು.

ಬಿಜೆಪಿಗೆ ಈಶ್ವರಪ್ಪ ಕಿಡ್ನಿಯಿದ್ದಂತೆ :

      ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಷ್ಟೇ ಶ್ರಮ ಕೆ.ಎಸ್.ಈಶ್ವರಪ್ಪ ನವರದ್ದೂ ಇದೆ, ಎಂದೂ ಪಕ್ಷ ಬಿಟ್ಟು ಹೋಗದೇ ಪಕ್ಷ ನಿಷ್ಠೆ ತೋರಿದ್ದಾರೆ. ಬಿಜೆಪಿಗೆ ಬ್ರೈನ್ ಹಾಗೂ ಲಿವರ್‍ನಂತಿದ್ದವರು ಯಡಿಯೂರಪ್ಪ ಮತ್ತು ಈಶ್ವರಪ್ಪ. ಸದ್ಯ ಬೊಮ್ಮಾಯಿ ಹೃದಯವಾದರೆ ಈಶ್ವರಪ್ಪ ಕಿಡ್ನಿ ಯಾಗಿ ಕೆಲಸ ಮಾಡಿದ್ದಾರೆ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರು ಕನಿಷ್ಠ ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಶ್ರೀ ರೇವಣ ಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್ ಒಡೆಯರ್ ಬಿಜೆಪಿವರಿಷ್ಠರನ್ನು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link