ವಚನ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳಲ್ಲಿ ಕಡೆಗಣಿಸಲಾಗುತ್ತಿದೆ”

        12ನೇ ಶತಮಾನದಲ್ಲಿ ರಚನೆಯಾದ ವಚನ ಸಾಹಿತ್ಯವನ್ನು ಒಂದು ಧರ್ಮಕ್ಕೆ ಜಾತಿಗೆ ಸೀಮಿತಗೊಳಿಸಿ ಅಧ್ಯಯನ ಮಾಡುವುದು ಸರಿಯಲ್ಲ. ಹಿಂದೆ ವಿಶ್ವವಿದ್ಯಾನಿಲಯಗಳಲ್ಲಿ ಈ ಸಾಹಿತ್ಯದ ಬಗ್ಗೆ ಆಳವಾದ ಸಂಶೋಧನೆಗಳು ಜರುಗಿದ್ದವು. ಆದರೆ ಇಂದು ಈ ಸಾಹಿತ್ಯದ ಬಗ್ಗೆ ವಿಶ್ವವಿದ್ಯಾನಿಲಯಗಳು ನಿರ್ಲಕ್ಷ್ಯ ಮನೋಭಾವ ತಾಳಿವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಚಂದ್ರಶೇಖರಯ್ಯ ನುಡಿದರು.

      ಅವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಸವೇಶ್ವರ ಪೀಠ ಮತ್ತು ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು ನಗರದಲ್ಲಿ ಏರ್ಪಡಿಸಿದ್ದ ಡಾ.ಹೆಚ್.ತಿಪ್ಪೇರುದ್ರಸ್ವಾಮಿಯವರ ಶರಣಕೇಂದ್ರಿತ ಕಾದಂಬರಿಗಳನ್ನು ಕುರಿತ ಒಂದು ದಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

      ಬೇರೆ ಭಾಷೆಯ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಬದಲು ಕನ್ನಡ ಸಾಹಿತ್ಯದ ಮೇರು ಕೃತಿಗಳನ್ನು ಇಂಗ್ಲೀಷ್ ಭಾಷೆಗೆ ತರ್ಜಿಮೆ ಮಾಡಿದರೆ ಕನ್ನಡ ನಾಡುನುಡಿ ಸಂಸ್ಕತಿಯನ್ನು ವಿಶ್ವಕ್ಕೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಟಿ.ಕೆ.ನಂಜುಂಡಪ್ಪನವರು ಡಾ.ಹೆಚ್.ತಿಪ್ಪೆರುದ್ರಸ್ವಾಮಿಯವರು ಐತಿಹಾಸಿಕ ಕಾದಂಬರಿಗಳನ್ನು ಮೂಲ ಇತಿಹಾಸಕ್ಕೆ ಧಕ್ಕೆಯಾಗದಂತೆ ಬರೆಯುವುದರಲ್ಲಿ ಪಳಗಿದ ವ್ಯಕ್ತಿ. ಶರಣಸಾಹಿತ್ಯದ ಬಗ್ಗೆ ಆಳವಾದ ಜ್ಞಾನ ಹೊಂದಿದ ಅವರು ಕಥೆ ಕಾದಂಬರಿಗಳ ಮೂಲಕ ಜನ ಸಾಮಾನ್ಯರಿಗೆ ಶರಣರನ್ನು ಪರಿಚಯಸಿದ ಮಹಾಜ್ಞಾನಿ ಎಂದರು.

       ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಡಿ.ಎನ್.ಯೋಗೀಶ್ವರಪ್ಪನವರು ವಿದ್ವತ್‍ವಲಯದಲ್ಲಿ ಗುಂಪುಗಾರಿಕೆ, ಜಾತಿ ಮನೋಭಾವ ಹೆಚ್ಚಾಗುತ್ತಿದ್ದು ಮತ್ತೊಬ್ಬರನ್ನು ಟೀಕಿಸುವ ಪರಿಪಾಠ ಹೆಚ್ಚಾಗಿದೆ. ಅಲ್ಲದೆ ಪ್ರತಿಯೊಂದು ಕ್ಷೇತ್ರದ ಸಾಹಿತ್ಯವನ್ನು ಕಾಮಾಲೆ ಕಣ್ಣುಗಳಿಂದಲೇ ನೋಡುವವರ ಸಂಖ್ಯೆ ಹೆಚ್ಚಾಗಿದ್ದು ಇಂದು ಎಲ್ಲಾ ಸಾಹಿತ್ಯಗಳಿಗಿಂತಲೂ ಕಾಮಾಲೇ ಸಾಹಿತ್ಯ ರಚನೆಯೇ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.

        ಕರ್ನಾಟಕದಲ್ಲಿ ವಿಶಿಷ್ಟವಾದ ಶರಣ ಸಂಸ್ಕತಿಯ ಹುಟ್ಟಿಗೆ ಕಾರಣರಾದ ಬಸವಣ್ಣನನ್ನು ಕನ್ನಡ ಸಂಸ್ಕತಿಯ ಮೂಲ ಪುರುಷ ಗೆನೆನ್ನಬಹುದು . ಆದ್ದರಿಂದ ಎಲ್ಲರೂ ಅವರನ್ನು ಕರ್ನಾಟಕದ ಸಾಂಸ್ಕತಿಕ ನಾಯಕನನ್ನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಡಾ.ತಿಪ್ಪೇರುದ್ರಸ್ವಾಮಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವಿದ್ವಾಂಸರಾಗಿದ್ದು, ಅವರ ಕೃತಿ ಕರ್ನಾಟಕ ಸಂಸ್ಕøತಿ ಸಮೀಕ್ಷೆ 15 ಬಾರಿ ಪುನರ್ ಮುದ್ರಣ ಕಂಡಿದ್ದು ದಾಖಲೆಯಾಗಿದೆ. ಆದರೆ ಇಂತಹ ಅಮೂಲ್ಯ ಕೃತಿ ರಚಿಸಿದ ಅವರನ್ನು ವಿಶ್ವವಿದ್ಯಾನಿಲಯಗಳು ಸರಿಯಾಗಿ ನಡೆಸಿಕೊಳ್ಳದೆ ಅನಗತ್ಯ ತೊಂದರೆ ನೀಡಿದವು ಎಂದರು.

       ವೇದಿಕೆಯಲ್ಲಿ ಡಾ.ಹೆಚ್.ತಿಪ್ಪೇರುದ್ರಸ್ವಾಮಿಯವರ ಮಗಳಾದ ಡಾ.ಶೈಲಜಾ ಸಿದ್ಧಗಂಗಾ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಹಾಜರಿದ್ದರು. ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಡಾ.ಬಿ.ನಂಜುಂಡಸ್ವಾಮಿ, ಡಾ.ಬಿ.ಎಸ್.ಸುಧೀರ್, ಡಾ.ಮೈಸೂರು ಕೃಷ್ಣಮೂರ್ತಿ, ಡಾ.ಡಿ.ವಿ.ಪರಮಶಿವಮೂರ್ತಿ, ಶ್ರೀಯುತ ವೀರಭದ್ರಯ್ಯ, ಪ್ರೊ.ಚಂದ್ರಪ್ಪ, ತಿಪ್ಪೇರುದ್ರಸ್ವಾಮಿಯವರ ವಿವಿಧ ಕೃತಿಗಳ ಬಗ್ಗೆ ಪ್ರಬಂಧ ಮಂಡಿಸಿದರು. ಡಾ.ಹೆಚ್.ಶೈಲಜ ಸಮಾರೋಪ ಭಾಷಣ ಮಾಡಿದರು. ಕಾವ್ಯ ಪ್ರಾರ್ಥಿಸಿದರು. ಕನ್ನಡ ವಿಭಾಗದ ಅಧ್ಯಾಪಕಿ ಶಕುಂತಲ.ಸಿ.ವಿ. ಸ್ವಾಗತಿಸಿದರು. ಪ್ರೊ.ಕೆ.ಸಿ.ಮಂಗಳ ವಂದಿಸಿದರು. ಶ್ರೀಮತಿ ಸೌಮ್ಯಶ್ರೀ.ಆರ್. ನಿರೂಪಣೆ ಮಾಡಿದರು. ಶ್ರೀಮತಿ ಶ್ವೇತ, ಶೀಲ ಡಾ.ಹೇಮಾವತಿ ವಿವಿಧ ಗೋಷ್ಠಿಗಳನ್ನು ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap