ತುಮಕೂರಿನ 11 ಮಂದಿ ರೈಫಲ್ ಮತ್ತು ಪಿಸ್ತೂಲ್ ಶೂಟರ್ಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ತುಮಕೂರು:
              ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರೈಫಲ್, ಪಿಸ್ತೂಲ್ ಶೂಟರ್ಸ್ ಕ್ರೀಡಾಪಟುಗಳಿಗೆ ಜಿಲ್ಲಾಡಳಿತದಿಂದ ಸನ್ಮಾನ ನವೆಂಬರ್ 19 ರಿಂದ ಡಿಸೆಂಬರ್ 3ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ರೈಫಲ್ ಮತ್ತು ಪಿಸ್ತೂಲ್ ಶೂಟರ್ಸ್ ಸ್ಪರ್ಧೆಗೆ ತುಮಕೂರಿನ ವಿವೇಕಾನಂದ ಸ್ಫೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ 11 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ 31 ರಂದು ಅಹಮದಾಬಾದ್‍ನಲ್ಲಿ ಆಯೋಜಿಸಲಾಗಿದ್ದ 30ನೇ ಅಖಿಲ ಭಾರತ ಪ್ರೀ ನ್ಯಾಷನಲ್‍ನಲ್ಲಿ ತುಮಕೂರು ಜಿಲ್ಲೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ರೈಫಲ್ ಶೂಟರ್ ವಿಭಾಗದಲ್ಲಿ ಕಿರಣ್ ನಂದನ್ 4 ನೇ ಸ್ಥಾನ, ರೋಹನ್ ಗೌಡ, ಪ್ರೀತಮ್, ಸುಹೇಲ್ ಮತ್ತು ಪುಷ್ಕರ್ ಆಯ್ಕೆಯಾಗಿದ್ದರೆ, ಪಿಸ್ತೂಲ್ ಶೂಟರ್ ವಿಭಾಗದಲ್ಲಿ ಧ್ಯಾನ್, ಮಾನ್ಯ, ಯಶಸ್, ಕಿಶನ್, ವಿಜಿತ್ ಶೆಟ್ಟಿ ಮತ್ತು ಶ್ರೀತೇಜ್ ಆಯ್ಕೆಯಾಗಿದ್ದಾರೆ.
ನವೆಂಬರ್ 19ರಿಂದ ನವದೆಹಲಿಯಲ್ಲಿ ರಾಷ್ಟ್ರಮಟ್ಟದ ರೈಫಲ್ ಮತ್ತು ಪಿಸ್ತೂಲ್ ಶೂಟರ್ಸ್ ಸ್ಪರ್ಧೆ ನಡೆಯಲಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳನ್ನು ವಿವೇಕಾನಂದ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಎನ್.ಎಸ್.ಜಯಕುಮಾರ್, ಪೋಷಕರಾದ ಡಾ.ವಿನಯ್‍ಬಾಬು, ಕಾರ್ಯದರ್ಶಿ ನಿಖಿಲ್ ಡಿ.ಗೌಡ ಮತ್ತು ತರಬೇತುದಾರ ಅನಿಲ್ ಅವರು ಅಭಿನಂದಿಸಿ, ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಬನ್ನಿ ಎಂದು ಶುಭ ಹಾರೈಸಿದರು.

ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ:
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 11 ಮಂದಿ ರೈಫಲ್ ಮತ್ತು ಪಿಸ್ತೂಲ್ ಶೂಟರ್ಸ್ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್ ವಾಡ್ ಮತ್ತಿತರೆ ಗಣ್ಯರು ಹಾಜರಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರೈಫಲ್ ಮತ್ತು ಪಿಸ್ತೂಲ್ ಶೂಟರ್ಸ್ ಕ್ರೀಡಾಪಟುಗಳನ್ನು ಅಭಿನಂದಿಸಿ, ರಾಷ್ಟ್ರಮಟ್ಟದಲ್ಲೂ ವಿಜೇತರಾಗಿ ತುಮಕೂರು ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link