ತುಮಕೂರು :
ವ್ಯಕ್ತಿಯೊಬ್ಬರಿಗೆ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಎಂಟು ಸಾವಿರ ರೂ. ಲಂಚ ಪಡೆದು ಗ್ರಾಮ ಲೆಕ್ಕಿಗರಿಗೆ ನೀಡಿದ ಗ್ರಾಮಸಹಾಯಕ ಮತ್ತು ಗ್ರಾಮಲೆಕ್ಕಿಗರು ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಭೀಮಸಂದ್ರದ ವ್ಯಕ್ತಿಯೊಬ್ಬರಿಂದ ತುಮಕೂರು ಕಸಬಾ ಖ I ಕಚೇರಿ ಬಳಿ ಹೆಗ್ಗೆರೆ ಗ್ರಾಮ ಸಹಾಯಕ ಎಚ್.ಎನ್ ಪ್ರಕಾಶ್ ಎಂಟು ಸಾವಿರ ರೂ. ಪಡೆದು ಗ್ರಾಮ ಲೆಕ್ಕಾಧಿಕಾರಿ ರಶ್ಮಿ ಎಂಬುವರಿಗೆ ನೀಡಿದರು. ಖಾತೆ ಮತ್ತು ಪಹಣಿ ವರ್ಗಾವಣೆ ಮಾaಡಿಕೊಡಲು 12,000 ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಆ ಪೈಕಿ 8 ಸಾವಿರ ರೂ. ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಇನ್ಸ್ಪೆಕ್ಟರ್ಗಳಾದ ವೀರೇಂದ್ರ, ವಿಜಯಲಕ್ಷ್ಮಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ