ತುಮಕೂರು :
ಕುಣಿಗಲ್ ತಾಲ್ಲೂಕು ಎನ್.ಎಚ್.75ನ ನಂಜೇಚನ್ನನಪಾಳ್ಯ ಬೈಪಾರ್ಸ್‍ನಲ್ಲಿ ರಾತ್ರಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಕಾರೊಂದು ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆಸಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ.
ಕಾರಿನ ಚಾಲಕ ಮಂಜು ಕೆ. ಆದಿಚುಂಚನಗಿರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಕಾರಿನ ಮಾಲೀಕ ಕೆ.ಎಸ್.ಜಯಶ್ರೀ ತಿಳಿಸಿದ್ದಾರೆ.
ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯಾಗಿದ್ದು, ಈತನ ವಾರಸುದಾರರು ಯಾರೆಂಬುದು ತಿಳಿದು ಬಂದಿಲ್ಲ. ಅಪಘಾತಕ್ಕೆ ಕಾರಣನಾದ ಕಾರಿನ (ಕೆಎ-42-ಎನ್.0592) ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ, ಅಪರಿಚಿತ ವ್ಯಕ್ತಿಯ ಪತ್ತೆ ಮಾಡಿಕೊಡಬೇಕೆಂದು ಕೋರಲಾಗಿದೆ. ಮೃತ ವ್ಯಕ್ತಿ ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಕುರುಚಲ ಗಡ್ಡ, ಮೀಸೆ ಬಿಟ್ಟಿರುತ್ತಾನೆ. ಈತ ಸಿಮೆಂಟೆ ಕಲ್ಲರ್‍ನ ಬಿಳಿ ಪಟ್ಟೆಗಳಿರುವ ತುಂಬು ತೋಳಿನ ಶರ್ಟ್, ಸಿಮೆಂಟ್ ಕಲರ್‍ನ ರೆಡಿಮೇಡ್ ಲಾಡಿ ನಿಕ್ಕರ್ ಧರಿಸಿದ್ದಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕುಣಿಗಲ್ ಪೊಲೀಸರನ್ನಾಗಲಿ ಅಥವಾ 9480802936 ಇಲ್ಲಿಗೆ ತಿಳಿಸುವಂತೆ ಕೋರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ