ವರ್ಷಕ್ಕೆ 2 ಕೋಟಿ ಉದ್ಯೋಗ ಕಳೆದಿದ್ದೇ ಮೋದಿ ಸಾಧನೆ

 ತುಮಕೂರು : 

      ದೇಶದ ಜನತೆಗೆ ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ 15 ಲಕ್ಷ ಹಣ, ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣವಾಪಸ್ಸಾತಿ ಹೀಗೆ ಹಲವು ಭರವಸೆ ನೀಡಿ ಅಧಿಕಾರಕ್ಕೇರಿದ ಮೋದಿ ಅವರು ಅದ್ಯಾವುದನ್ನು ಮಾಡಲಿಲ್ಲ. ಪ್ರತೀ ವರ್ಷ 2 ಕೋಟಿ ಹೊಸ ಉದ್ಯೋಗದ ಬದಲಿಗೆ 2 ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಸುಳ್ಳಿಗೆ ಆಸ್ಕರ್ ಪ್ರಶಸ್ತಿ ನೀಡುವಂತಿದ್ದರೆ ಅದನ್ನು ಪ್ರಧಾನಿಗೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವ್ಯಂಗ್ಯವಾಡಿದರು.

      ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸರ್ಕಾರದ ಮುಖ್ಯಮಂತ್ರಿಗಳಿಗೆ ಎಲ್ಲರನ್ನು ವಿಶ್ವಾಸದಲ್ಲಿತೆಗೆದುಕೊಂಡು ಹೋಗುವ ಶಕ್ತಿ ಇಲ್ಲ. ಬರೀ ಭ್ರಷ್ಟಾಚಾರವೇ ಈ ಸರ್ಕಾರದ ಸಾಧನೆಯಾಗಿದೆ. ಅಪ್ಪನ ಹೆಸರಲ್ಲಿ ಮಗ ಮುಖ್ಯಮಂತ್ರಿಯ ಅಧಿಕಾರ ಚಲಾಯಿಸಿ ಭ್ರಷ್ಟಾಚಾರ ವೆಸಗುತ್ತಿದ್ದಾರೆ. ಇದನ್ನು ಸ್ವತಃ ಅವರ ಪಕ್ಷದ ಮಂತ್ರಿಗಳು ಶಾಸಕರೇ ಆರೋಪಿಸುತ್ತಿದ್ದು, ಅಧಿಕಾರದಲ್ಲಿರುವ ನೈತಿಕತೆ ಕಳೆದುಕೊಂಡಿದ್ದಾರೆಂದರು.

     ವಿಪಕ್ಷ ನಾಯಕರು ಯಡಿಯೂರಪ್ಪ ಅವರ ಜೊತೆ ಶಾಮೀಲಾಗಿದ್ದಾರೆಂಬ ಕೇಂದ್ರ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಆಧಾರ ರಹಿತ. ನಿರ್ಧಿಷ್ಟ ಪ್ರಕರಣವಿದ್ದರೆ ಸಾಬೀತುಪಡಿಸಲಿ ಎಂದ ಸಲೀಂ ಅಹ್ಮದ್ ಅವರು ಕೋವಿಡ್ ಅಲೆಯಲ್ಲಿ 2ಸಾವಿರ ಕೋಟಿ ಲೂಟಿ ಮಾಡಿರುವ ಬಗ್ಗೆ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿ ಲೆಕ್ಕ ಕೇಳಿದರೂ ಈವರೆಗೆ ನೀಡಿಲ್ಲ. ಫಲಾಯನವಾದಿ ನೀತಿ ಅನುಸರಿಸುತ್ತಿದೆ. ಕೋವಿಡ್ 2ನೇ ಅಲೆಯ ಸಾವಿನಲ್ಲೂ ಸುಳ್ಳಿನ ಲೆಕ್ಕ ನೀಡುತ್ತಿದ್ದು, ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟ ಮಾಡಲಿದೆ ಎಂದರು.

 ಪಾರ್ಲಿಮೆಂಟ್‍ನಿಂದ ಪಂಚಾಯ್ತಿ ವರೆಗೆ ಕಾಂಗ್ರೆಸ್ ಸಹಾಯಹಸ್ತ :

      ಅಖಿಲ ಭಾರತಕಾಂಗ್ರೆಸ್ ಸಮಿತಿ ಮಾರ್ಗದರ್ಶನದಲ್ಲಿ ಜು.1 ರಿಂದ 30 ರ ವರೆಗೆರಾಜ್ಯದಎಲ್ಲಜಿಲ್ಲೆ, ತಾಲ್ಲೂಕು, ಪಂಚಾಯ್ತಿ ಮಟ್ಟದಲ್ಲಿಕೊರೊನಾದಿಂದ ನೊಂದವರಿಗೆ ಸಹಾಯ ಮಾಡುವ ಕಾರ್ಯಕ್ರಮ ಸಹ ಕೈಗೊಳ್ಳಲಾಗುತ್ತಿದೆ.ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಕ್ಷದ 10 ಜನ ಸೇರಿ ಮನೆ ಮನೆಗೆ ಹೋಗಿ ಕೊರೊನಾದಿಂದ ಮೃತಪಟ್ಟವರ ಮಾಹಿತಿ ಪಡೆದ 1 ತಿಂಗಳ ಕಾಲ ಸಹಾಯ ಮಾಡುವಕಾರ್ಯ ಮಾಡಲಾಗುವುದು ಎಂದುಸಲೀಂ ಅಹಮದ್ ಹೇಳಿದರು.

      ಕೊರೊನಾ ಸಂಕಷ್ಟ ಕಾಲದಲ್ಲಿರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಿಂದ 58 ಲಕ್ಷ ಮಾಸ್ಕ್, 32,5612 ಪಿಪಿಇ ಕಿಟ್, 84 ಲಕ್ಷ ಸ್ಯಾನಿಟೈಸರ್, 26 ಲಕ್ಷ ಫುಡ್‍ಕಿಟ್, 1343 ಆಂಬ್ಯುಲೆನ್ಸ್, 74 ಲಕ್ಷ ಮೆಡಿಕಲ್‍ಕಿಟ್, 24 ಲಕ್ಷಆಕ್ಸಿಜನ್ ಸಿಲಿಂಡರ್, 3551 ಆಮ್ಲಜನಕ ಸಾಂದ್ರಕಗಳನ್ನು ವಿತರಣೆ ಮಾಡಲಾಗಿದೆ. ಜತೆಗೆ 6 ಲಕ್ಷ ರೈತರು, ಕಾರ್ಮಿಕರಿಗೂ ಸಹಾಯ ಮಾಡಲಾಗಿದೆ. ಇದರೊಂದಿಗೆ 2.05 ಕೋಟಿಜನರಿಗೆ ಸಹಾಯ ಹಸ್ತವನ್ನು ಕಾಂಗ್ರೆಸ್ ಚಾಚಿದೆ ಎಂದರು.

ಸರಕಾರದ ವೈಫಲ್ಯದ ವಿರುದ್ಧ ಜು.7ಕ್ಕೆ ಸೈಕಲ್‍ಜಾಥಾ :

      ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಜು. 7 ರಂದು ಸೈಕಲ್ ಜಾಥಾ ಹಮ್ಮಿಕೊಂಡಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಸೈಕಲ್‍ಜಾಥಾ ನಡೆಯಲಿದ್ದು, ಜನಸಾಮಾನ್ಯರಿಗೆ ಈ ಸರ್ಕಾರಗಳ ದುರಾಡಳಿತ ಬಗ್ಗೆ ಜಾಗೃತಿ ಮೂಡಿಸಲಾಗುವುದೆಂದರು. ಸೈಕಲ್ ಜಾಥಾವನ್ನು ಪ್ರತೀ ತಾಲೂಕಿಗೊಂದು ದಿವಸದಂತೆ ಜು.17ರವರೆಗೆ ನಡೆಸಬೇಕೆಂದು ಗೋಷ್ಠಿಯ ಬಳಿಕ ನಡೆದ ಸಭೆಯಲ್ಲಿ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆಮಠ್ ಕೆಪಿಸಿಸಿ ಕಾರ್ಯಾಧ್ಯಕ್ಷರ ಗಮನ ಸೆಳೆದರು.

      ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ವೆಂಕಟರಮಣಪ್ಪ, ಡಾ.ಕೆ.ರಂಗನಾಥ್, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್, ಆರ್.ನಾರಾಯಣ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ,್ಣ ಯುವ ಮುಖಂಡ ಆರ್.ರಾಜೇಂದ್ರ, ಕಾಯಾಧ್ಯಕ್ಷ ಸಾಸಲು ಸತೀಶ್,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ರಾಯಸಂದ್ರ ರವಿ, ಮಾಜಿ ಎಂಎಲ್ಸಿ ಎಂ.ಡಿ.ಲಕ್ಷ್ಮೀನಾರಾಯಣ್, ಹೊನ್ನಗಿರಿಗೌಡ ಮತ್ತಿತರರು ಉಪಸ್ಥಿತರಿದ್ದರು.

       ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಬಣವಿಲ್ಲ. ಇರುವುದೊಂದೇ ಕಾಂಗ್ರೆಸ್ ಬಣ. ಕಾಂಗ್ರೆಸ್-ಜೆಡಿಎಸ್ ತೊರೆದ 17 ಮಂದಿ ಸೇರಿದಂತೆ ಯಾರೇ ಪಕ್ಷಕ್ಕೆ ಬರಬೇಕೆಂದರೂ ನಮ್ಮ ತತ್ವ ಸಿದ್ದಾಂತವನ್ನು ಒಪ್ಪಿ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿ ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದನ್ನು ತೀರ್ಮಾನಿಸಲಿದೆ. ಯುವ ಕಾಂಗ್ರೆಸ್ ಅಧ್ಯಕ್ಷರ ಗೊಂದಲವೂ ಪರಿಹಾರದ ಅಂತಿಮ ಹಂತಕ್ಕೆ ಬಂದಿದೆ.

-ಸಲೀಂ ಅಹಮದ್, ಕಾರ್ಯಾಧ್ಯಕ್ಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap