ತುಮಕೂರು :
ತುಮಕೂರು ನಗರ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ 545 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ತುಮಕೂರು ನಗರದ ಅಶೋಕನಗರದ 56 ವರ್ಷದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದು, ಊರುಕೆರೆ ಗ್ರಾಮದ 69 ವರ್ಷದ ಮಹಿಳೆ ಸಹ ಕೋವಿಡ್ಗೆ ಬಲಿಯಾಗಿದ್ದಾರೆ. ಸೋಂಕಿತರ ಪೈಕಿ ಚಿ.ನಾ.ಹಳ್ಳಿ 29, ಗುಬ್ಬಿ 31, ಕೊರಟಗೆರೆ 34, ಕುಣಿಗಲ್ 35, ಮಧುಗಿರಿ 34, ಪಾವಗಡ 32, ಶಿರಾ 41, ತಿಪಟೂರು 34, ತುಮಕೂರು 255 ಹಾಗೂ ತುರುವೇಕೆರೆಯಲ್ಲಿ 20 ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,947ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 309 ಮಂದಿ ಪುರುಷರು, 239 ಮಂದಿ ಮಹಿಳೆಯರಿದ್ದು, 5 ವರ್ಷದೊಳಗಿನ 7 ಮಂದಿ ಮಕ್ಕಳಿದ್ದು, 60ವರ್ಷ ಮೇಲ್ಪಟ್ಟ 65 ಮಂದಿ ಹಿರಿಯ ನಾಗರಿಕರಿದ್ದಾರೆ.
ಐಸಿಯುವಿನಲ್ಲಿ 50 ಮಂದಿ ದಾಖಲು
2484 ಮಂದಿ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಸರಕಾರಿ ಆಸ್ಪತ್ರೆಯಲ್ಲಿ 15 ಮಂದಿ ಖಾಸಗಿ ಐಸಿಯುವಿನಲ್ಲಿ 35 ಮಂದಿ ಸೇರಿ ಒಟ್ಟು 50 ಮಂದಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ