ತುಮಕೂರು :
ಜಿಲ್ಲೆಯಲ್ಲಿ ಹೊಸದಾಗಿ 2854 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಅರ್ಧ ಲಕ್ಷ ದಾಟಿದ್ದು, ಈವರೆಗೆ 50529 ಮಂದಿ ಸೋಂಕಿತರಾಗಿದ್ದಾರೆ.
ತುಮಕೂರು ತಾಲೂಕಿನಲ್ಲಿ ಅತ್ಯಧಿಕ 939 ಮಂದಿಗೆ ಸೋಂಕು ತಗುಲಿದ್ದು, ಚಿ.ನಾ.ಹಳ್ಳಿ 86, ಗುಬ್ಬಿ 172, ಕೊರಟಗೆರೆ 160, ಕುಣಿಗಲ್ 275, ಮಧುಗಿರಿ 242, ಪಾವಗಡ 211, ಶಿರಾ 219, ತಿಪಟೂರು 389, ತುಮಕೂರು 939, ತುರುವೇಕೆರೆಯಲ್ಲಿ 161 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1632 ಪುರುಷರು, 1222 ಮಹಿಳೆಯರು, 5 ವರ್ಷದೊಳಗಿನ 26 ಮಕ್ಕಳು ಸೇರಿದ್ದು, 60 ವರ್ಷದೊಳಗಿನ 393 ಹಿರಿಯ ನಾಗರಿಕರು ಸೇರಿದ್ದಾರೆ.
ಮೃತರ ವಿವರ:
ಮೃತ ಹತ್ತು ಮಂದಿಯ ಪೈಕಿ ಐವರು ಕೋವಿಡ್‍ಗೆ, ಮತ್ತೆ ಐವರು ಕೋವಿಡ್ ಜೊತೆಗೆ ಅನ್ಯಕಾರಣದಿಂದ ಮೃತಪಟ್ಟಿದ್ದು, ತುಮಕೂರು ತಾಲೂಕು ಅಲುಪನಹಳ್ಳಿ ಗ್ರಾಮದ 60 ವರ್ಷದ ಮಹಿಳೆ, ತುರುವೇಕೆರೆ ತಾಲೂಕು ನೇರಳೆಕೆರೆ ಗ್ರಾಮದ 60 ವರ್ಷದ ಮಹಿಳೆ, ಕುಣಿಗಲ್ ತಾಲೂಕು ಕುರುಡಿಹಳ್ಳಿ ಗ್ರಾಮದ 49 ವರ್ಷದ ವ್ಯಕ್ತಿ ಪಾವಗಡ ನಗರದ 65 ವರ್ಷದ ಮಹಿಳೆ, ಮಧುಗಿರಿ ತಾಲೂಕು ಬಡವನಹಳ್ಳಿ ಗ್ರಾಮದ 43 ವರ್ಷದ ವ್ಯಕ್ತಿ, ತುಮಕೂರು ತಾಲೂಕು ಕೊತ್ತಿಹಳ್ಳಿ ಗ್ರಾಮದ 70 ವರ್ಷದ ವೃದ್ಧರು, ಕುಣಿಗಲ್ ತಾಲೂಕು ಶಿವರಾಮಪುರ ಗ್ರಾಮದ 80 ವರ್ಷ ಮಹಿಳೆ, ಮಧುಗಿರಿ ತಾಲೂಕು ಶೆಟ್ಟಿಹಳ್ಳಿ ಗ್ರಾಮದ 55 ವರ್ಷದ ಮಹಿಳೆ, ಪಾವಗಡ ತಾಲೂಕು ಬನಶಂಕರಿ ಬಡಾವಣೆಯ 47 ವರ್ಷದ ಮಹಿಳೆ, ಹೆಗ್ಗೆರೆಯ 51 ವರ್ಷದ ವ್ಯಕ್ತಿ ಕೋವಿಡ್‍ಗೆ ಬಲಿಯಾದವರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
