ತುಮಕೂರು : ಕಾಂಗ್ರೆಸ್ ಮಾಜಿ ಶಾಸಕರ ರಾಜೀನಾಮೆ

ತುಮಕೂರು 

     ನಗರದ ಕಾಂಗ್ರೆಸ್‌ ಹಿರಿಯ ಧುರೀಣರಾದ ಶ್ರೀ ಎಸ್‌ ಶಫಿ ಅಹಮದ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

      ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ನಮ್ಮ ಅಳಿಯ ಡಾ. ರಫೀಕ್ ಅಹಮದ್ ರವರಿಗೆ ಟಿಕೆಟ್ ನೀಡುವ ವಿಶ್ವಸವನ್ನು ನೀಡಿ ನಂತರ ಟಿಕೆಟ್ ಕೈತಪ್ಪುವಂತೆ ಚಾಣಾಕ್ಷತನ ತೋರಿ ಬೇರೆಯವರಿಗೆ ಟಿಕೆಟ್ ನೀಡುವ ಮೂಲಕ ನಮಗೆ ವಿಶ್ವಾಸ ಘಾತಕ ಕೆಲಸವನ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಫಿ ಅಹಮದ್ ರವರು ಡಾ.ಜಿ ಪರಮೇಶ್ವರ್ ರವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

     ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಶಫಿ ಅಹಮದ್ ಹಾಗೂ ರಫೀಕ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಸಭೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ಜಿ ಪರಮೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

     ಲಕ್ಕಪ್ಪ ರವರ ಕಾಲದಿಂದಲೂ ಪಕ್ಷಕ್ಕೆ ದುಡಿದಿದ್ದೇವೆ ಸುಮಾರು 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಪಕ್ಷದ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡಿದ್ದೇವೆ ಅದರಂತೆ ರಫೀಕ್ ಅಹಮದ್ ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ ನಾವು ಇಷ್ಟು ವರ್ಷ ದುಡಿದರು ಡಾಕ್ಟರ್ ಜಿ ಪರಮೇಶ್ವರ್ ವಿಶ್ವಾಸ ಘಾತ ಕೆಲಸವನ್ನು ಮಾಡುವ ಮೂಲಕ ಅಲ್ಪಸಂಖ್ಯಾತರ ವಿರೋಧಿ ನಡೆಗೆ ಮುಂದಾಗಿದ್ದಾರೆ ಎಂದಿದ್ದಾರೆ.

     ಇನ್ನು ಟಿಕೆಟ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ನಾವು ಸಹ ಮನವಿ ಮಾಡಿಕೊಂಡಿದ್ದವು ರಫೀಕ್ ಅವರನ್ನ ಟಿಕೆಟ್ ನೀಡಿದ್ದೇ ಆದರೆ ಗೆಲ್ಲಿಸುವ ಬರವಸೆ ಕೊಟ್ಟಿದ್ದೆವು ಆದರೆ ಕೊನೆಗಳಿಗೆ ಡಾ. ಜಿ ಪರಮೇಶ್ವರ್ ಅವರು ನಮಗೆ ಮೋಸ ಮಾಡಿದ್ದಾರೆ ಆ ಮೂಲಕ ಪರಮೇಶ್ವರ್ ರವರು ಕೊಟ್ಟ ಆಶ್ವಾಸನೆಯನ್ನು ಮರೆತು ಮೋಸ ಮಾಡುವ ಮೂಲಕ ನಮಗೆ ಟಿಕೆಟ್ ಕೈತಪ್ಪುವಂತೆ ಮಾಡಿದ್ದು.

     ನಮಗೆ ಟಿಕೆಟ್ ಕೈತಪ್ಪಲು ಡಾ ಜಿ ಪರಮೇಶ್ವರ್ ಅವರೇ ನೇರ ಕಾರಣರಾಗಿದ್ದಾರೆ ನೂರಕ್ಕೆ ನೂರು ಪರಮೇಶ್ವರರವರನ್ನ ಟಿಕೆಟ್ ಕೊಡಿಸಲಿದ್ದಾರೆ ಎಂದು ನಂಬಿದ್ದೆವು ಎಂದರು.

    ಇನ್ನು ಡಾ ಜಿ ಪರಮೇಶ್ವರ್ ಅವರು ಅಭ್ಯರ್ಥಿಗಳ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿದ್ದರು ಸಭೆ ನಡೆಯುವ ವೇಳೆ ಪರಮೇಶ್ವರ್ ಅವರನ್ನು ಹೊರತುಪಡಿಸಿ ಎಲ್ಲಾ ನಾಯಕರು ನಮಗೆ ಟಿಕೆಟ್ ನೀಡಲು ಸಮ್ಮತಿ ಸೂಚಿಸಿದರು ಸಹ ಪರಮೇಶ್ವರ್ ರವರು ತಮ್ಮ ವಿರೋಧವನ್ನು ತೋರುವ ಮೂಲಕ ಟಿಕೆಟ್ ತಪ್ಪಲು ನೇರ ಕಾರಣಕರ್ತರಾಗಿದ್ದಾರೆ ಎಂದರು.

    ಇನ್ನು ಅವರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇಲ್ಲ ಅನ್ನೋದು ಸಾಬೀತಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಜಿ ಪರಮೇಶ್ವರ್ ಅವರೇ ನೇರ ಹೊಣೆಯಾಗಿರುತ್ತಾರೆ ಎನ್ನುವ ಮೂಲಕ ಪರಮೇಶ್ವರ್ ರವರ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ.

     ಇನ್ನು ಕಾಂಗ್ರೆಸ್ ಹಿರಿಯ ಮುಖಂಡ ಶಫಿ ಅಹಮದ್ ರವರು ಇಂದು ನಡೆಸಿದ ಕಾರ್ಯಕರ್ತರ ಸಭೆಗೆ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರು ಕಾಟಚಾರವೆಂಬಂತೆ ಒಲ್ಲದ ಮನಸ್ಸಿನಿಂದ ಸಭೆಯಲ್ಲಿ ಕುಳಿತುಕೊಳ್ಳದೆ ಸಭೆಯಿಂದ ಹೊರಗುಳಿದು ದ್ವಂದ ಸಂದೇಶವನ್ನು ರವಾನಿಸಿದ್ದಾರೆ.

    ಇನ್ನು ತಮ್ಮ ಅಳಿಯನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಶಫಿ ಅಹಮದ್ ರವರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡು ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ನಾಳೆ ರಾಜೀನಾಮೆ ಸಲ್ಲಿಸುತ್ತೇನೆ ಎಂದಿದ್ದಾರೆ.

    ಇನ್ನು ಕಾಂಗ್ರೆಸ್ ನಾಯಕರಾದ ಪರಮೇಶ್ವರ ಅವರಿಗೆ ನಮ್ಮ ಮೇಲೆ ಸಿಟ್ಟು ಹೆಚ್ಚಾಗಿದೆ ಹಾಗಾಗಿ ಅವರಿಂದಲೇ ನಮಗೆ ಟಿಕೆಟ್ ಕೈತಪ್ಪಿದ್ದು ಇನ್ನೂ ನಮ್ಮ ಮೇಲೆ ಯಾಕೆ ಇಷ್ಟೊಂದು ಕೋಪವನ್ನ ಹಾಗೂ ದ್ವೇಷವನ್ನು ಸಾಧಿಸುತ್ತಿದ್ದಾರೆ ಎನ್ನುವುದು ನಮಗೂ ಸಹ ಗೊತ್ತಿಲ್ಲ ಇದಕ್ಕೆಲ್ಲ ಅವರೇ ಉತ್ತರವನ್ನು ನೀಡಬೇಕು ಎಂದಿದ್ದಾರೆ.

    ಟಿಕೆಟ್ ಕೈತಪ್ಪಿರುವ ಮಾಜಿ ಶಾಸಕ ರಫೀಕ್ ಅಹಮದ್ ರವರು ಮುಂದಿನ ಎರಡು ದಿನದಲ್ಲಿ ಮತ್ತೊಮ್ಮೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ನಮ್ಮ ಮುಂದಿನ ನಿರ್ಣಯವನ್ನು ಪ್ರಕಟಿಸಲಿದ್ದೇನೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ನಡೆಗೆ ಮುಂದಾಗಿದ್ದಾರೆ.

     ಇದಕ್ಕೆ ಕಾರಣ ಕೇಳಿದಾಗ ಅವರು ಪಕ್ಷ ನಿಷ್ಠರಿಗೆ ಈಗ ಕಾಲವಲ್ಲ ಏನಿದ್ದರೂ ಬೇರೆಯ ರೀತಿಯಲ್ಲಿ ಕಾರ್ಯ ನರ್ವಹಿಸುವವರಿಗೆ ಮಾತ್ರ ಕಾಲ ಎಂದಿದ್ದಾರೆ .ನನ್ನ ರಾಜೀನಾಮೆಗೆ ಪರಂ ನೇರ ಹೊಣೆ ಎಂದಿದ್ದಾರೆ. ಮತ್ತು ಇದೇ ಪ್ರಶ್ನೆ ಡಾ. ರಫೀಕ್‌ ಅಹಮದ್‌ ಅವರಿಗೆ ಕೇಳಿದರೆ ಇನ್ನೆರಡು ದಿನದಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap