ತುಮಕೂರು : ಇಬ್ಬರು ಗಾಂಜಾ ಮಾರಾಟಗಾರರ ಬಂಧನ!!

 ತುಮಕೂರು:

      ಒಣಗಿದ ಗಾಂಜಾವನ್ನು ಕೊಂಡೊಯ್ಯುತ್ತಿದ್ದ ಕೊರಟಗೆರೆ ತಾಲ್ಲೂಕು ಬೋವಿ ಕಾಲೋನಿಯ ನಿವಾಸಿ ಚಿನ್ನರಾಮಾಂಜಿ (34) ಎಂಬಾತನನ್ನು ಪೊಲೀಸರು ಬಂಧಿಸಿ, ಆತನ ಬಳಿಯಿದ್ದ 1 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

      ಈತ ಯಲ್ಲಾಪುರದಲ್ಲಿ ಗಾಂಜಾವನ್ನು ಕೊಂಡೊಯ್ಯುತ್ತಿದ್ದಾಗ ಬಂಧಿಸಲಾಗಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಮಾ.25 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಮುದ್ದಿನಪಲ್ಲಿ ಗ್ರಾಮದಲ್ಲಿ ದೇವಿ (34) ಎಂಬಾಕೆಯನ್ನು ಬಂಧಿಸಿ ಈಕೆಯ ಬಳಿಯಿದ್ದ 11.ಕೆ.ಜಿ. ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುತ್ತಾರೆ. ಈ ಗಾಂಜಾವನ್ನು ದೇವಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ನ್ಯೂನಿ ಎಂಬಲ್ಲಿಂದ ತಂದು ರಾಮಾಂಜಿ ಮೂಲಕ ಮಾರಾಟ ಮಾಡಿಸುತ್ತಿದ್ದಳೆಂದು ತಿಳಿದು ಬಂದಿದೆ. ಆರೋಪಿ ರಾಮಾಂಜಿ ಗಾಂಜಾವನ್ನು ಚಿಲ್ಲರೆಯಾಗಿ ಜನರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವುದನ್ನು ರೂಢಿಮಾಡಿಕೊಂಡಿದ್ದ. ಈತನಿಗೆ ಈ ಹಿಂದೆ 2020 ರಲ್ಲಿ ಕೋರಾ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದು, ನ್ಯಾಯಾಲಯದ ಜಾಮೀನು ಪಡೆದು ಪುನಃ ಇದೇ ವೃತ್ತಿಯನ್ನು ಮುಂದುವರೆಸಿರುತ್ತಾನೆ.

      ಅಪರ ಪೊಲೀಸ್ ಅಧೀಕ್ಷಕರಾದ ಟಿ.ಜೆ.ಉದೇಶ್ ಹಾಗೂ ಡಿವೈಎಸ್ಪಿ ಸೂರ್ಯನಾರಾಯಣ ರಾವ್ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ. ಶೇಷಾದ್ರಿ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಶಮೀನ್ ಮತ್ತು ಕುಮಾರಿ ಹಾಗೂ ಸಿಬ್ಬಂದಿಗಳಾದ ಅಯೂಬ್, ಮಲ್ಲೇಶ್, ರಮೇಶ್, ಶಿವಪ್ರಸಾದ್, ರವಿಕುಮಾರ್ ರೆಡ್ಡಿ ಹಾಗೂ ಮಹಿಳಾ ಪಿ.ಸಿ.ಗಳಾದ ಅಮ್ಮಾಜಮ್ಮ ಅವರುಗಳು ಆರೋಪಿಗಳನ್ನು ಪತ್ತೆ ಹಚ್ಚಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap