ಕೊಲ್ಕತ್ತಾ:
ಕೊಲ್ಕತ್ತಾ ನಗರದ ಜೀವನಾಡಿಗಳಲ್ಲಿ ಒಂದಾದ ಮೆಟ್ರೋ ರೈಲೊಂದರ ಹವಾನಿಯಂತ್ರಿತ ಬೋಗಿಯ ಒಳಗಡೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನ ಸಂಚಾರದಲ್ಲಿ ನಿನ್ನೆ ಸಾಯಂಕಾಲ ವ್ಯತ್ಯಯ ಉಂಟಾಯಿತು ಎಂದು ಕೊಲ್ಕತ್ತಾ ಮೆಟ್ರೋ ಪ್ರಾಧಿಕಾರ ತಿಳಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಕೊಲ್ಕತ್ತಾ ವಿಪತ್ತು ನಿರ್ವಹಣಾ ಕೇಂದ್ರದ ಪೊಲೀಸರು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ .