ತುಮಕೂರು : ನಾಳೆ 9 ಉಪಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ

ತುಮಕೂರು : 

      ಏ.11 ರಂದು ರಾಜ್ಯಾದ್ಯಂತ ನಡೆಯಲಿರುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಗೆ ತುಮಕೂರು ವಿಶ್ವವಿದ್ಯಾನಿಲಯವು ಒಂದು ನೋಡಲ್ ಕೇಂದ್ರವಾಗಿದ್ದು, ತುಮಕೂರು ನಗರದಲ್ಲಿ ಒಟ್ಟು 09 ಉಪಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು.

    ಸದರಿ ಕೇಂದ್ರದಲ್ಲಿ ಈ ಬಾರಿ ಒಟ್ಟು 3680 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರದ ಶ್ರೀ ಸಿದ್ಧಗಂಗಾ ಮಹಿಳೆಯರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸೆಂಟರ್‍ಕೋಡ್, ಶ್ರೀ ಸಿದ್ಧಗಂಗಾ ಕಲಾ ವಾಣಿಜ್ಯ ಮತ್ತು ವಿಜ್ಞಾನಕಾಲೇಜು, ಚೇತನ ವಿದ್ಯಾಮಂದಿರ ಹೈಸ್ಕೂಲ್, ಹೊರಪೇಟೆ ಸರ್ವೋದಯ ಪಿ.ಯು. ಕಾಲೇಜು, ಸರ್ಕಾರಿ ಪ್ರಥಮ ದರ್ಜೆಕಾಲೇಜು, ಶ್ರೀ ಸಿದ್ಧಗಂಗಾ ಪಾರ್ಮಸಿ ಕಾಲೇಜು, ಚೇತನ ವಿದ್ಯಾಮಂದಿರ, ಬಟವಾಡಿ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯ ಕಲಾ ಕಾಲೇಜು, – ಇವುಗಳು ಪರೀಕ್ಷಾ ಕೇಂದ್ರಗಳಾಗಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಒಟ್ಟು 3680 ಅಭ್ಯರ್ಥಿಗಳು ಜಿಲ್ಲೆಯಲ್ಲಿ ಪರೀಕೆಯನ್ನು ಬರೆಯಲಿದ್ದಾರೆ.

      ಅಭ್ಯರ್ಥಿಗಳ ಕ್ರಮ ಸಂಖ್ಯೆ ಹಾಗೂ ನಿಗದಿಪಡಿಸಿರುವ ಕೇಂದ್ರದ ವಿವರಗಳನ್ನು ತುಮಕೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ನ http://tumkuruniversity.ac.in/ ಲ್ಲಿ ಪ್ರಕಟಿಸಲಾಗಿದೆ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸಲಾಗುತ್ತದೆ ಮೊದಲನೆ ಅವಧಿಯಲ್ಲಿ ಪತ್ರಿಕೆ-1 ಹಾಗೂ ಬೆಳಿಗ್ಗೆ 9.30 ರಿಂದ 10.30 ಗಂಟೆಯ ವರೆಗೆ ಹಾಗೂ ಎರಡನೇ ಅವಧಿಯಲ್ಲಿ ಪತ್ರಿಕೆ-2 11.00 ರಿಂದ 1.00 ಗಂಟೆಯವರೆಗೆ ನಡೆಯುತ್ತದೆ.ಪ್ರಶ್ನೆಪತ್ರಿಕೆಯು ಯುಜಿಸಿ-ನೆಟ್ ಪರೀಕ್ಷೆಯಲ್ಲಿರುವಂತೆ ವಸ್ತುನಿಷ್ಠ ಮಾದರಿಯದ್ದಾಗಿರುತ್ತದೆ.

       ಈಗಾಗಲೇ ತಿಳಿಸಿರುವಂತೆ, ಅಭ್ಯರ್ಥಿಗಳು ತಮ್ಮ ಬಳಿ ಇರುವ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದು. ಯಾವುದೆ ಸಂದರ್ಭದಲ್ಲೂ ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಹಾಗೆಯೇ ಪ್ರತಿ ಅಭ್ಯರ್ಥಿಯೂ ತಮ್ಮ ಜೊತೆ ಗುರುತಿನ ಚೀಟಿಯನ್ನು ತರತಕ್ಕದ್ದು.

       ಅಭ್ಯರ್ಥಿಗಳು ಪರೀಕ್ಷಾ ದಿನದಂದು ಬೆಳಿಗ್ಗೆ8.00 ಗಂಟೆಯ ರೊಳಗಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಿದೆ.ಸರ್ಕಾರ ಸೂಚಿಸಿರುವ ಕೋವಿಡ್ ಮುನ್ನೇಚ್ಚರಿಕೆಯ ಕ್ರಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಸ್ಯಾನಿಟೈಸರ್‍ಗಳನ್ನು ಬಳಸುವುದು ಹಾಗೂ ಪರಸ್ಪರ ಅಂತರ ಕಾಯ್ದು ಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಲಾಗಿದೆ ಎಂದು ಕೆ-ಸೆಟ್ ನೋಡಲ್‍ಅಧಿಕಾರಿಯಾದ ಡಾ.ಗಿರೀಶ್ ಕೆ.ಎಸ್.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap