ಬೆಂಗಳೂರು ಸೇರಿ ಇನ್ನೂ 4 ಕಡೆ ಹೊಸ ಆ್ಯಪಲ್ ಸ್ಟೋರ್ಸ್……!

ನವದೆಹಲಿ

     ಆ್ಯಪಲ್ ಸಂಸ್ಥೆ ಭಾರತೀಯ ಮಾರುಕಟ್ಟೆ ಮತ್ತು ತಯಾರಕಾ ವ್ಯವಸ್ಥೆಯತ್ತ ಗಮನ ಹರಿಸುತ್ತಿರುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ ಎರಡು ರೀಟೇಲ್ ಸ್ಟೋರ್​ಗಳನ್ನು ತೆರೆದಿದ್ದ ಆ್ಯಪಲ್ ಇದೀಗ ಇನ್ನೂ ನಾಲ್ಕು ಸ್ಟೋರ್ಸ್ ಆರಂಭಿಸಲು ಯೋಜಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಹೊಸ ಆ್ಯಪಲ್ ಸ್ಟೋರ್​ಗಳು ಆರಂಭವಾಗಲಿವೆ. ಮುಂದಿನ ವರ್ಷ ಬೆಂಗಳೂರು, ಪುಣೆ, ಮುಂಬೈ ಮತ್ತು ದೆಹಲಿಯಲ್ಲಿ ನಾಲ್ಕು ರೀಟೇಲ್ ಮಳಿಗೆಗಳು ಶುರುವಾಗಲಿವೆ. ಕಳೆದ ವರ್ಷದ ಏಪ್ರಿಲ್​ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಸ್ ಆರಂಭವಾಗಿದ್ದವು. ಈಗ ಇವೆರಡು ನಗರಗಳಿಗೆ ಮತ್ತೊಂದು ಆ್ಯಪಲ್ ಸ್ಟೋರ್ ಸಿಗಲಿದೆ.

   ‘ಭಾರತದಾದ್ಯಂತ ಗ್ರಾಹಕರ ಸ್ಪಂದನೆಯಿಂದ ಉತ್ಸಾಹಿತಗೊಂಡಿರುವ ನಾವು ಇನ್ನಷ್ಟು ಸ್ಟೋರ್​ಗಳನ್ನು ತೆರೆಯಲು ಯೋಜಿಸಿದ್ದೇವೆ. ಅದಕ್ಕಾಗಿ ನಮ್ಮ ತಂಡಗಳನ್ನು ಕಟ್ಟುತ್ತಿದ್ದೇವೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಖುದ್ದಾಗಿ ಕಂಡು ಅನುಭವಿಸಲು ಮತ್ತು ನಮ್ಮ ಅಸಾಧಾರಣ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು ಗ್ರಾಹಕರಿಗೆ ಇನ್ನಷ್ಟು ಅವಕಾಶ ನೀಡಲು ತುದಿಗಾಲಲ್ಲಿ ಇದ್ದೇವೆ’ ಎಂದು ಆ್ಯಪಲ್​ನ ರೀಟೇಲ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇರ್​ಡ್ರೇ ಓಬ್ರಿಯಾನ್ ಇಂದು ಶುಕ್ರವಾರ ಹೇಳಿಕೆ ನೀಡಿದ್ದಾರೆ. 

   ಆ್ಯಪಲ್ ಸಂಸ್ಥೆಯ ಐಫೋನ್ 16 ಸರಣಿಯ ಎಲ್ಲಾ ಸ್ಮಾರ್ಟ್​ಫೋನ್​ಗಳನ್ನೂ ಭಾರತದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಐಫೋನ್ ಸರಣಿಯ ಹೈ ಎಂಡ್ ಅವತರಣಿಕೆಗಳಾದ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಅನ್ನು ಬೇರೆ ಕಡೆ ತಯಾರಿಸಿ ಭಾರತಕ್ಕೆ ತರಲಾಗುತ್ತಿದೆ. ಈಗ ಇವೂ ಕೂಡ ಭಾರತದಲ್ಲೇ ತಯಾರಾಗಲಿದೆ. ಇದೇ ತಿಂಗಳು ಪ್ರೋ ಮತ್ತು ಪ್ರೋಮ್ಯಾಕ್ಸ್ ಸರಣಿಯ ಐಫೋನ್16 ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ತಯಾರಾಗಲಿವೆ. ಮುಂದಿನ ತಿಂಗಳಿಂದಲೇ ಇವು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಫಾಕ್ಸ್​ಕಾನ್, ಟಾಟಾ ಗ್ರೂಪ್ ಸಂಸ್ಥೆಗಳು ಭಾರತದಲ್ಲಿ ಆ್ಯಪಲ್​ನ ಐಫೋನ್​ಗಳನ್ನು ತಯಾರಿಸುತ್ತವೆ.

Recent Articles

spot_img

Related Stories

Share via
Copy link
Powered by Social Snap