ತುಮಕೂರು :
ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಅಭಾವವು ಜಿಲ್ಲೆಯಲ್ಲಿಮುಂದುವರಿದಿದ್ದು, ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಧ್ಯಾಹ್ನದ ವೇಳೆಗೆ ನೋ ವ್ಯಾಕ್ಸಿನ್ ಬೋರ್ಡ್‍ಗಳು ಹಾಕುತ್ತಿರುವುದು ಕಂಡುಬಂದಿದೆ.
ಕೋವಿಡ್ ಲಸಿಕೆ ಸರಕಾರದಿಂದ ಸರಬರಾಜಾದಷ್ಟು ಮಾತ್ರ ಆರೋಗ್ಯ ಇಲಾಖೆ ಹಂಚಿಕೆ ಮಾಡುತ್ತಿದ್ದು, ಆರೋಗ್ಯ ಕೇಂದ್ರಗಳಿಗೆ 50-60 ಸಂಖ್ಯೆಯಲ್ಲಿ ಮಾತ್ರ ವಿತರಣೆಯಾಗುತ್ತಿದೆ. ಇದರಿಂದ ಹಂಚಿಕೆಯಾದ ಕೇವಲ ಒಂದು-ಎರಡು ತಾಸಿಗೆ ಲಸಿಕೆ ಮುಗಿಯುತ್ತಿದ್ದು, ಆರೋಗ್ಯ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಬಂದವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಿರುವ ದೃಶ್ಯ ಕಂಡುಬಂದಿದೆ.
ತುಮಕೂರು ನಗರದ ಕೋತಿತೋಪು ಬಳಿಯ ನಗರ ಆರೋಗ್ಯ ಕೇಂದ್ರದಲ್ಲಿ ನೋ ವ್ಯಾಕ್ಸಿನ್ ಬಾರ್ಡ್ ಅನ್ನು ಮಂಗಳವಾರ ಅಳವಡಿಸಿದ್ದು, ವ್ಯಾಕ್ಸಿನ್ ಅಭಾವಕ್ಕೆ ಜ್ವಲಂತ ಸಾಕ್ಷಿಯೆನಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ