ತುಮಕೂರು : ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ವ್ಯವಸ್ಥೆಗೆ ಆಗ್ರಹ!!

ತುಮಕೂರು : 

      ಬಹುಪಾಲು ಜನರು ತಮ್ಮ ವ್ಯಾಪಾರ ವ್ಯವಹಾರಗಳಿಗೆ ಓಡಾಡಲು ರೈಲುಗಳನ್ನು ಅವಲಂಬಿಸಿದ್ದಾರೆ.ಒಂಬತ್ತು ತಿಂಗಳಿಂದ ಪ್ಯಾಸೆಂಜರ್ ಮತ್ತು ಸಾಮಾನ್ಯ ರೈಲು ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದಕ್ಕೆ ನಾಲ್ಕರಷ್ಟು ಹಣಕೊಟ್ಟು ಬಸ್ಸುಗಳಲ್ಲಿ ತಮ್ಮ ಲಗ್ಗೇಜುಗಳ ಸಮೇತ ಹೋಗಲು ಸಾಧ್ಯವಾಗದೆ ತಮ್ಮ ವ್ಯಾಪಾರ ವ್ಯವಹಾರ ನಡೆಯದೆ ಆರ್ಥಿಕವಾಗಿ ದುರ್ಬಲರಾಗಿದ್ದಾರೆ.ಬಹಳಷ್ಟು ರೈತರು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳು ರೈಲುಗಳ ಓಡಾಟದ ಮೇಲೆ ತಮ್ಮ ಬದುಕು ಕಟ್ಟಿಕೊಂಡಿದ್ದರು. ಈಗ ಅವರೆಲ್ಲರ ಬದುಕು ಹದಗೆಡುತ್ತಿದೆ.

      ಈಗ ಓಡಾಡುತ್ತಿರುವ ಫಾಸ್ಟ್ ರೈಲುಗಳಿಗೆ ರೈಲ್ವೆ ನಿಲ್ದಾಣದಲ್ಲಿ ಕರೋನವೈರಸ್ ಭಯದಿಂದಟಿಕೆಟ್ ಕೊಡುತ್ತಿಲ್ಲ. ಪ್ರತಿ ಪ್ರಯಾಣಿಕರು ಆನ್ಲೈನ್ನಲ್ಲಿ ಟಿಕೆಟ್ ಪಡೆಯಲು ಕಾಲಾವಕಾಶದ ಕೊರತೆಯಿದೆ ಜೊತೆಗೆ ಒಂದು ಟಿಕೆಟ್ಗೆ 15ರಿಂದ 20 ರೂಪಾಯಿ ಹೆಚ್ಚಿಗೆ ಹಣ ಕೊಡಬೇಕು ಎಲ್ಲಾ ಕಡೆ ಇಂಟರ್ನೆಟ್ ಸ್ಲೋ ಇರುವುದರಿಂದ ಸಮಯಕ್ಕೆ ಸರಿಯಾಗಿ ಟಿಕೆಟ್ ಪಡೆಯಲು ಆಗುತ್ತಿಲ್ಲ. ಅತ್ಯಾಧುನಿಕ ಸೌಕರ್ಯ ಇರುವ ಫೋನ್ಗಳು ಅವರ ಬಳಿ ಇಲ್ಲ. ಈ ಎಲ್ಲ ಬದಲಾವಣೆಗಳನ್ನು ತಕ್ಷಣದಿಂದ ಜಾರಿಗೆ ತರಬೇಕು ಎನ್ನುವ ಸರ್ಕಾರದ ಉದ್ದೇಶ ತೆನಾಲಿರಾಮಕೃಷ್ಣನ ಕರಿ ನಾಯಿಯನ್ನು, ಬಿಳಿ ನಾಯಿ ಮಾಡುವ ಪ್ರಯತ್ನದಂತೆ ಇದೆ ಎಂದಿದ್ದಾರೆ.

      ಕೆಲಸವಿಲ್ಲದೆ ರೈಲ್ವೆ ಇಲಾಖೆಯ ನೌಕರರು ತಮ್ಮ ಆರೋಗ್ಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರೈಲ್ವೆ ಇಲಾಖೆಯ ನೌಕರರು ಗ್ಲಾಸ್ ಚೇಂಬರ್ ಹಿಂದೆ ಮಾಸ್ಕ್ ಹಾಕಿಕೊಂಡು ಜನರ ಸಂಪರ್ಕದಿಂದ ದೂರ ಇರುವುದರಿಂದ ಅವರಿಗೆ ಕರೋನಾ ಬರುವ ಭಯವಿಲ್ಲ. ಎಲ್ಲ ವ್ಯವಸ್ಥೆ ಎಂದಿನಂತೆ ನಡೆಯುತ್ತಿದೆ, ಬಸ್ಗಳು ಜನಸಂದಣಿಯಿಂದ ಚಲಿಸುತ್ತಿವೆ, ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕೇಂದ್ರದ ಮುಂದೆ ಸೇರಿರುವ ಜನಸಂದಣಿಯನ್ನು ಗಮನಿಸಿದಾಗ, ಎಲ್ಲೂ ಇಲ್ಲದ ಬಿಗಿ ಹತೋಟಿ ರೈಲ್ವೆ ಇಲಾಖೆಗೆ ಮಾತ್ರ ಏಕೆ ಎಂಬ ಪ್ರಶ್ನೆ ಮೂಡುತ್ತದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಎಲ್ಲ ರೈಲುಗಳಿಗೆ ರೈಲು ನಿಲ್ದಾಣದಲ್ಲಿ ಟಿಕೆಟ್ ಕೊಡುವ ವ್ಯವಸ್ಥೆ ಮಾಡಲಿ ಮತ್ತು ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಪ್ರಾರಂಭಿಸಲಿ.ಮಾನ್ಯ ಸಂಸತ್ ಸದಸ್ಯರು ಕೂಡಲೇ ಈ ದಿಕ್ಕಿನಲ್ಲಿ ಯೋಚಿಸಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ವ್ಯವಸ್ಥೆ ಸರಿಪಡಿಸಬೇಕೆಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷರಾದ ಎನ್ ಎಸ್ ಪಂಡಿತ್ ಜವಾಹರ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link