ತುಮಕೂರು :
ತುರುವೇಕೆರೆ ತಾಲೂಕಿನ ಸಂಪಿಗೆ ರಸ್ತೆ ಸಿಂಗಸಂದ್ರ ಗೇಟ್ ಬಳಿ ಮಡಿಕೆ ಖರೀದಿ ನೆಪದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ದೋಚಿದ್ದ ದುಷ್ಕರ್ಮಿಯನ್ನು ದಂಡಿನಶಿವರ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಂಧಿತನನ್ನು ರವಿಕುಮಾರ್ ಎಂದು ಗುರುತಿಸಿದ್ದು, ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ಲಿಕಾರ್ಯನಿರ್ವಹಿಸುತ್ತಿದ್ದ ಈತ ಲಾಕ್‍ಡೌನ್‍ನಲ್ಲಿ ಕೆಲಸವಿಲ್ಲದೆ ಮನೆಯಲ್ಲಿದ್ದು ಡ್ರೀಮ್ 11 ಆನ್‍ಲೈನ್ ಕ್ರಿಕೆಟ್ ಆಟ ಆಡುವ ಚಟ ಬೆಳೆಸಿಕೊಂಡಿದ್ದ. ಈ ಆಟಕ್ಕಾಗಿ ಸ್ನೇಹಿತರ ಬಳಿ ಸಾಲ ಮಾಡಿದ್ದು, ಹಣದ ಅವಶ್ಯಕತೆ ಹೆಚ್ಚಾದ ಹಿನ್ನೆಲೆಯಲ್ಲಿ ಒಂಟಿ ಮಹಿಳೆಯರನ್ನು ದೋಚುವ ಹೊಂಚು ಹಾಕಿ ಮಡಿಕೆಖರೀದಿ ನೆಪದಲ್ಲಿ ಸಿಂಗಸಂದ್ರ ಗ್ರಾಮದ ಮಹಿಳೆ ಮೇಲೆ ಅವರ ಮನೆಯಲ್ಲೆಕಬ್ಬಿಣದ ಲಾಂಗ್‍ನಿಂದ ಹೊಡೆದು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರರಿಯಾಗಿದ್ದ. ಕಡೆಗೆ ಆರೋಪಿಯನ್ನು ಬೆಂಗಳೂರಿನ ಲಕ್ಷ್ಮೀದೇವಿನಗರದಲ್ಲಿ ಬಂಧಿಸಿದ್ದು, ಡ್ರೀಮ್ 11 ಆಟ ಆಡಲು ಹಣಕ್ಕಾಗಿ ಈ ಕೃತ್ಯವೆಸಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ಎಎಸ್ಪಿ ಟಿ.ಜೆ.ಉದೇಶ, ಡಿವೈಎಸ್ಪಿ ರಮೇಶ್ ಮಾರ್ಗದರ್ಶನದಲ್ಲಿ ಸಿಪಿಐ ನವೀನ್ ಪಿಎಸೈ ಶಿವಲಿಂಗಪ್ಪನೇತೃತ್ವದಲ್ಲಿ ಎಎಸ್‍ಐ ಗಂಗಣ್ಣ ಮತ್ತು ಸಿಬ್ಬಂದಿಗಳಾದ ಮಂಜುನಾಥ್, ಶಶಿಧರ, ಮುತ್ತಣ್ಣ, ನಾಗರಾಜ ಕಮ್ಮತ್ತರ್, ಯಲ್ಲಪ್ಪ, ತಿಮ್ಮರಾಜು ಅವರು ಬಂಧಿಸಿದ್ದು, ಆರೋಪಿಯನ್ನು ಸೆರೆಹಿಡಿದ ತಂಡವನ್ನು ಎಸ್ಪಿ ರಾಹುಲ್‍ಕುಮಾರ್ ಶಹಾಪುರ್‍ವಾಡ್ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ