ತುಮಕೂರು :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ಜೋಗ ಜಲಪಾತಕ್ಕೆ ಸೆಪ್ಟೆಂಬರ್ 18 ರಿಂದ ವಿಶೇಷ ಪ್ಯಾಕೇಜ್‍ನಡಿ ಕರ್ನಾಟಕ ಸಾರಿಗೆ ಹಾಗೂ ರಾಜಹಂಸ ಸಾರಿಗೆಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ನಿಗಮದಿಂದ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತುಮಕೂರಿನಿಂದ ಸಾಗರ ಮಾರ್ಗವಾಗಿ ವರದಮೂಲ, ಇಕ್ಕೇರಿ ಹಾಗೂ ಜೋಗ ಜಲಪಾತಕ್ಕೆ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಪ್ರಯಾಣಿಕರು ನಿಗಮದ ಅವತಾರ್ (www.ksrtc.karnataka.gov.in) ತಂತ್ರಾಂಶದಲ್ಲಿ ಮುಂಗಡ ಟಿಕೇಟ್‍ಗಳನ್ನು ಕಾಯ್ದಿರಿಸಬಹುದಾಗಿದೆ. ಕರ್ನಾಟಕ ಸಾರಿಗೆ ವೇಗದೂತದಲ್ಲಿ ವಯಸ್ಕರಿಗೆ 650/- ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 400/- ರೂ.ಗಳು ಮತ್ತು ರಾಜಹಂಸ ಸಾರಿಗೆಯಲ್ಲಿ ವಯಸ್ಕರಿಗೆ 850/- ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 600/- ರೂ.ಗಳ ಪ್ರಯಾಣ ದರವನ್ನು ನಿಗಧಿಪಡಿಸಲಾಗಿದೆ.
ವಿಶೇಷ ಟೂರ್ ಪ್ಯಾಕೇಜ್‍ನಡಿ ಕರ್ನಾಟಕ ಸಾರಿಗೆ ವೇಗದೂತ ಕಾರ್ಯಾಚರಣೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದ್ದು, ಮಧ್ಯಾಹ್ನ 1.30 ಗಂಟೆಗೆ ಸಾಗರ-ವರದಮೂಲ-ಇಕ್ಕೇರಿಗೆ ತಲುಪಲಿದ್ದು, ಇಕ್ಕೇರಿ ಮಾರ್ಗವಾಗಿ 2.45ಕ್ಕೆ ಜಲಪಾತ ತಲುಪಲಿದೆ. ಜೋಗದಿಂದ ಸಂಜೆ 5.30ಕ್ಕೆ ನಿರ್ಗಮಿಸಿ ಮಧ್ಯರಾತ್ರಿ 12.45ಕ್ಕೆ ಮರಳಿ ತುಮಕೂರು ತಲುಪಲಿದೆ.
ಅದೇ ರೀತಿ ರಾಜಹಂಸ ಸಾರಿಗೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದ್ದು, ಮಧ್ಯಾಹ್ನ 1 ಗಂಟೆಗೆ ಸಾಗರ-ವರದಮೂಲ-ಇಕ್ಕೇರಿಗೆ ತಲುಪಲಿದ್ದು, ಇಕ್ಕೇರಿ ಮಾರ್ಗವಾಗಿ 2.15ಕ್ಕೆ ಜಲಪಾತ ತಲುಪಲಿದೆ. ಜೋಗದಿಂದ ಸಂಜೆ 5.30ಕ್ಕೆ ನಿರ್ಗಮಿಸಿ ಮಧ್ಯರಾತ್ರಿ 12.15ಕ್ಕೆ ಮರಳಿ ತುಮಕೂರು ತಲುಪಲಿದೆ.
ಪ್ರವಾಸಿಗರು ಮಾರ್ಗಮಧ್ಯೆ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು. ಇದಕ್ಕಾಗಿ ಮಾರ್ಗಮಧ್ಯೆ ಕಡೂರಿನ ರಸ್ತೆ ಬದಿಯಲ್ಲಿರುವ ಸುರುಚಿ ಹೋಟೆಲ್ (ಸಸ್ಯಹಾರಿ)ಅನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ