ತುರುವೇಕೆರೆ : ಗ್ರಾಪಂಗೆ ಆಯ್ಕೆಯಾದ ನಿವೃತ್ತ ಅಪರ ಜಿಲ್ಲಾಧಿಕಾರಿ ಅಲ್ಲಪ್ಪ

ತುರುವೇಕೆರೆ :

      ತಾಲೂಕಿನ ಲೋಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನೀರಗುಂದ ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದ ದಲಿತ ಸಮುದಾಯಕ್ಕೆ ಸೇರಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಅಲ್ಲಪ್ಪ ಜಯಶೀಲರಾಗಿದ್ದಾರೆ.

      ನೀರಗುಂದ ಗ್ರಾಮದವರೇ ಆದ ಅಲ್ಲಪ್ಪ ಸಾಮಾನ್ಯ ವರ್ಗದಿಂದ ಸ್ಪರ್ಧೆಗಿಳಿದು ವಿಜಯ ಸಾಧಿಸಿದ್ದಾರೆ. ನೀರಗುಂದ ಕೆರೆಗೆ ಹೇಮೆಯ ನೀರು ಹರಿಸುವ ಸಲುವಾಗಿ ಗ್ರಾಮಸ್ಥರೊಡಗೂಡಿ ಹೋರಾಟ ನಡೆಸಿದ್ದರು. ಅಂತಿಮವಾಗಿ ನೀರಗುಂದ ಕೆರೆಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದರು. ಊರಿನ ಕೆರೆಗೆ ನೀರು ತರಲು ಶ್ರಮಿಸಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಅಲ್ಲಪ್ಪರವರನ್ನು ಗ್ರಾಮದ ಮತದಾರರು ಜನನಾಯಕನಾಗಿ ಆರಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಹಾಗೂ ಜೆ.ನಳಿನ ಅವರನ್ನು ಶಾಸಕ ಮಸಾಲ ಜಯರಾಂ ಸನ್ಮಾನಿಸಿ ಅಭಿನಂದಿಸಿದರು.

      ಈ ವೇಳೆ ಮಾತನಾಡಿದ ಅಲ್ಲಪ್ಪ, ನಾನು ನಿವೃತ್ತಿಯ ನಂತರ ಸಮಾಜಸೇವೆ ಮಾಡಬೇಕೆಂಬ ಆಶಯದೊಂದಿಗೆ ಗ್ರಾಮಸ್ಥರೊಡಗೂಡಿ ಅನೇಕ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೆ. ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಲೋಕಮ್ಮನಹಳ್ಳಿ ಗ್ರಾ.ಪಂ ಚುನಾವಣೆ ನೀರಗುಂದ ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿದ ನನ್ನನ್ನು ಮತದಾರರು ಆಶೀರ್ವದಿಸಿದರು ಎಂದರು.

      ಈ ಸಂದರ್ಭದಲ್ಲಿ ಲೋಕಮ್ಮನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಉಮೇಶ್, ಮಹೇಶ್, ಶಂಕರಪ್ಪ, ಕುಮಾರಯ್ಯ, ಓಂಕಾರ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link