ತುರುವೇಕೆರೆ : ಬಯಲು ಗೋಡೆಗಳನ್ನು ಶೌಚಾಲಯಕ್ಕೆ ಆಶ್ರಯಿಸಿರುವ ಸಾರ್ವಜನಿಕರು

 ತುರುವೇಕೆರೆ : 

      ಪಟ್ಟಣದ ತಾಲ್ಲೂಕು ಕಛೇರಿಗೆ ಹೊಂದಿಕೊಂಡಂತಿರುವ ಸಾರ್ವಜನಿಕ ಶೌಚಾಲಯವನ್ನು ಹಲವು ದಿನಗಳಿಂದ ಬಂದ್ ಮಾಡಿದ್ದು ಶೌಚಾಲಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ತಾಲ್ಲೂಕು ಕಛೇರಿಗೆ ಪ್ರತಿದಿನ ಸಾವಿರಾರು ಜನ ತಮ್ಮ ಕೆಲಸಕಾರ್ಯಗಳ ನಿಮಿತ್ತ ಭೇಟಿ ನೀಡುತ್ತಾರೆ. ಕಛೇರಿ ಹಿಂಭಾಗದಲ್ಲಿರುವ ಸಾರ್ವಜನಿಕ ಸುಲಭ ಶೌಚಾಲಯ ಬಹಳ ದಿನಗಳಿಂದ ಮುಚ್ಚಿರುವುದರಿಂದ ಜನರಿಗೆ ತೊಂದರೆಯಾಗಿದೆ. ಪಟ್ಟಣದ ತರಕಾರಿ ಮಾರ್ಕೆಟ್ ಒಳಗಿರುವ ಶೌಚಾಲಯವೊಂದನ್ನು ಬಿಟ್ಟರೆ ಮತ್ಯಾವುದೆ ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲ್ಲೂಕು ಕಚೇರಿ ಪಕ್ಕದ ಶೌಚಾಲಯ ಮುಚ್ಚಿರುವುದರಿಂದ ಜನರು ತಾಲ್ಲೂಕು ಕಛೇರಿ ಕಟ್ಟಡ ಹಾಗೂ ಅಕ್ಕಪಕ್ಕದ ಗೋಡೆಗಳು ಹಾಗೂ ಗುರುಭವನ ಮೈದಾನದ ಕಾಂಪೌಂಡ್‍ಗಳನ್ನೇ ಮೂತ್ರ ವಿಸರ್ಜನೆಗೆ ಬಳಸಿಕೊಳ್ಳುತ್ತಿರುವುದರಿಂದ ಕಛೇರಿ ಸುತ್ತ ಮುತ್ತ ದುರ್ವಾಸನೆ, ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.

      ಮುಖಂಡ ರಂಗಸ್ವಾಮಿ ಮಾತನಾಡಿ, ತಾಲ್ಲೂಕು ಕಛೇರಿ ಪಕ್ಕದಲ್ಲಿರುವ ಶೌಚಾಲಯದ ಪಿಟ್ ತುಂಬಿರುವುದರಿಂದ ಶೌಚಾಲಯ ಮುಚ್ಚಲಾಗಿದೆ. ಪಿಟ್ ತೆರವುಗೊಳಿಸಲು ಸಂಗ್ರಹದ ಹಣಕ್ಕಿಂತ ಖರ್ಚು ಜಾಸ್ತಿಯಾಗುತ್ತದೆಂಬ ನೆಪಹೊಡ್ಡಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಶೌಚಾಲಯ ನಿರ್ವಹಣೆಗಾರರಿಂದ ಕೇಳಿ ಬರುತ್ತಿದ್ದು ಕೂಡಲೇ ಸಂಬಂಧಿಸಿದವರು ಇತ್ತ ಗಮನ ಹರಿಸಿ ಬಂದ್ ಆಗಿರುವ ಶೌಚಾಲಯ ತೆರೆಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap