ತುರುವೇಕೆರೆ : ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ

ತುರುವೇಕೆರೆ : 

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಮಂಗಳವಾರ ಸಭೆ ನಡೆಯಿತು.

      ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಶಾಸಕ ಮಸಾಲ ಜಯರಾಂ ಮಾತನಾಡಿ ದೇಶದಲ್ಲಿ ಕೊರೋನಾ 2 ನೇ ಅಲೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತೆ ಸಂತೆಗಳು, ಜಾತ್ರೆಗಳು, ಆರ್ಕೆಸ್ಟ್ರಾ, ಹಬ್ಬ ಹರಿದಿನಗಳು, ಕ್ರೀಡೆ. ರಾಜಕೀಯ ಸಭೆ ಇತ್ಯಾಧಿ ಜನಸಂದಣಿ ಸೇರುವಂತ ಕಾರ್ಯಕ್ರಮಗಳನ್ನು ಆಚರಿಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಆ ಪ್ರಕಾರ ಪ.ಪಂ. ಹಾಗೂ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಕಡೆ ನಿರ್ಭಂಧ ಹೇರಲಾಗಿದೆ. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ, ಪ.ಪಂ., ಆರೋಗ್ಯ ಇಲಾಖೆ ಹಾಗೂ ಆರಕ್ಷಕ ಇಲಾಖೆ ಬುಧವಾರದಿಂದಲೇ ಕ್ರಮ ಜಾರಿಗೆ ತರಲಿದ್ದು. ಇವರು ನೀಡುವ ಸಲಹೆ, ಸೂಚನೆಗಳನ್ನು ದಯಮಾಡಿ ತಾಲ್ಲೂಕಿನ ಜನತೆ ಪಾಲಿಸಿ ಕ್ಷೇತ್ರವನ್ನು ಕಾಪಾಡಿ. ಈಗಾಗಲೇ ನಮ್ಮ ತಾಲ್ಲೂಕಿನಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕಾನೂನು ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು. ಕೆಮ್ಮು, ನೆಗಡಿ ಬಂದಲ್ಲಿ ತಕ್ಷಣ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ. ವಯೋವೃದ್ದರು ಹಾಗೂ 45 ವರ್ಷ ಮೇಲ್ಪಟ್ಟವರು ಉಚಿತವಾಗಿ 11 ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಉಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

      ಮಾಸ್ಕ್ ಹಾಕದೆ ಹೋಟೆಲ್ ಒಳಗೆ ಬಂದರೆ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮುಂದಿನ ಆದೇಶ ಬರುವವರೆವಿಗೂ 2ನೇ ಅಲೆ ತಡೆಗಟ್ಟಲು ಸ್ಥಳೀಯ ಆಡಳಿತ, ತಾ.ಆಡಳಿತ ಹಾಗೂ ಪ.ಪಂ. ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ. ನಮ್ಮ ತಾಲ್ಲೂಕಿನಲ್ಲಿ ಸಕ್ರಿಯ 29 ಕೋವಿಡ್ ಸೋಂಕಿತರಿದ್ದು ಇದುವರೆವಿಗೂ 18 ಜನ ಕೋವಿಡ್ ಗೆ ಬಲಿಯಾಗಿದ್ದಾರೆ. ಎಂದು ತಿಳಿಸಿದರು.
ಮಾಸ್ಕ್ ಧರಿಸದವರಿಗೆ 100 ರೂ. ದಂಡದ ಜೊತೆಗೆ ಒಂದು ಮಾಸ್ಕ್ ನೀಡಲಾಗುವುದು. ಅವಶ್ಯಕತೆಯಿದ್ದವರು ಮಾತ್ರ ಪಟ್ಟಣಕ್ಕೆ ಬನ್ನಿ. ಈಗಾಗಲೇ ತಾಲ್ಲೂಕಿನಲ್ಲಿ 10972 ಮಂದಿ ವ್ಯಾಕ್ಸಿನ್ ಪಡೆದಿದ್ದು ದಿನ ಪ್ರತಿ 1350 ಜನಕ್ಕೆ ಕೊಡುವಷ್ಟು ವ್ಯಾಕ್ಸಿನ್ ತಾಲ್ಲೂಕಿನಲ್ಲಿ ದಾಸ್ತಾನಿದ್ದು ತಾ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

      ಸಭೆಯಲ್ಲಿ ತಹಶೀಲ್ದಾರ್ ಆರ್.ನಯೀಂಉನ್ನೀಸಾ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಯಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ, ಡಿವೈಎಸ್‍ಪಿ ರಮೇಶ್, ಸಿಪಿಐ. ನವೀನ್, ಪಿಎಸ್‍ಐ ಪ್ರೀತಂ, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ವೈದ್ಯಾಧಿಕಾರಿ ಶ್ರೀಧರ್, ಸಿಡಿಪಿಓ ಅರುಣ್, ಎಎಸ್‍ಐ ಶಿವಲಿಂಗಯ್ಯ ಸೇರಿದಂತೆ ಇತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap