ಮಾರ್ಗಸೂಚಿಗಳನ್ನು ಮರೆತು ವಾಹನಗಳಲ್ಲಿ ಓಡಾಡುತ್ತಿರುವ ಜನರು

 ತುರುವೇಕೆರೆ : 

      ಸರ್ಕಾರ ಮೇ.10 ರಿಂದ ಜಾರಿಗೆ ತಂದಿರುವ ಜನತಾ ಕಫ್ರ್ಯೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದಕ್ಕೆ ಸೋಮವಾರ ಪಟ್ಟಣದಲ್ಲಿ ಜನ ವಾಹನಗಳಲ್ಲಿ ಓಡಾಡುತ್ತಿದ್ದ ಉದಾಹರಣೆಯೇ ಸಾಕಾಗಿದೆ.

      ರಾಜ್ಯದಲ್ಲಿ ಕೊರೋನಾ 2ನೇ ಅಲೆ ಮಿತಿಮೀರುತ್ತಿದ್ದು ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮೇ.10 ರಿಂದ 14 ದಿನಗಳವರೆಗೆ ಜನತಾ ಕಫ್ರ್ಯೂವನ್ನು ಜಾರಿಗೆ ತಂದು ಅದರ ಮಾರ್ಗಸೂಚಿಯಂತೆ ಬೆಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಸಮಯ ನಿಗದಿ ಪಡಿಸಿದ್ದು. ಆ ವೇಳೆಯಲ್ಲಿ ಜನರು ವಾಹನಗಳನ್ನು ಬಳಸದೆ ಕೇವಲ ಕಾಲ್ನಡಿಗೆಯಲ್ಲಿ ಮಾತ್ರ ವಸ್ತುಗಳನ್ನು ಕೊಳ್ಳಬಹುದಾಗಿದೆ. ಎಂಬ ಸರ್ಕಾರದ ಮಾರ್ಗಸೂಚಿಯನ್ನು ಜನ ಗಾಳಿಗೆ ತೂರಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಮರೆತು ಪಟ್ಟಣದಲ್ಲಿ ಜನತೆ ಯಥಾವತ್ತಾಗಿ ತಮ್ಮ ತಮ್ಮ ವಾಹನಗಳಲ್ಲಿ ಓಡಾಡುತ್ತಿದ್ದುದು ಸೋಮವಾರ ಕಂಡುಬಂತು.

      ಬೆಳಗಿನ ವ್ಯಾಪಾರ ವಹಿವಾಟಿನ ಸೀಮಿತ ಅವಧಿಯಲ್ಲೇ ತಾಲ್ಲೂಕು ಕಚೇರಿ ರಸ್ತೆ ಹಾಗೂ ಬಾಣಸಂದ್ರ ರಸ್ತೆಗಳಲ್ಲಿ ಜನಗಳ ಸಂಚಾರ ಹೆಚ್ಚಾಗಿದ್ದು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕೊರೋನಾ ಮತ್ತಷ್ಟು ಹೆಚ್ಚುವ ಭೀತಿ ತಾಲ್ಲೂಕಿನಲ್ಲಿ ಎದುರಾಗಿದೆ. ವ್ಯಾಪಾರದ ಅವಧಿ ಮುಗಿದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರೂ ಬಾಗಿಲು ಮುಚ್ಚುವ ನಾಟಕ ವಾಡುತ್ತಾ ವ್ಯಾಪಾರಿಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಾರೆ. ಕೆಲ ದೊಡ್ಡ ದಿನಸಿ ವ್ಯಾಪಾರಿಗಳು ಅಂಗಡಿ ಒಳಗಡೆ ಕೆಲವು ಗ್ರಾಹಕರನ್ನು ಕೂರಿಸಿ ಮುಂದಿನ ಡೋರ್ ಎಳೆದು ವ್ಯಾಪಾರ ಮಾಡುತ್ತಿರುವುದೂ ಉಂಟು.

      ಕೊರೋನಾ ಸೋಂಕಿನ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜನತಾ ಕಫ್ರ್ಯೂವನ್ನು ಜನತೆ ಪಾಲನೆ ಮಾಡುತ್ತಿಲ್ಲ. ತಾಲ್ಲೂಕು ಆಡಳಿತ ಆರೋಗ್ಯಾಧಿಕಾರಿಗಳು. ಪಟ್ಟಣ ಪಂಚಾಯಿತಿ ಹಾಗೂ ಆರಕ್ಷಕ ಸಿಬ್ಬಂದಿಗಳು ತಮ್ಮ ಮನೆಮಠ ಬಿಟ್ಟು ಹೋರಾಡುತ್ತಿದ್ದು. ಈಗಾಗಲೇ ಅವರು ಹೈರಾಣಾಗಿ ಹೋಗಿದ್ದಾರೆ. ಆದರೂ ಕೊರೋನಾ ತಹಬದಿಗೆ ಬಂದಿಲ್ಲ. ಕಾರಣ ಜನರಲ್ಲಿ ಇಚ್ಚಾಶಕ್ತಿ ಇಲ್ಲದಿರುವುದು. ಪೊಲೀಸರು ಸಹಾ ಇನ್ನು ಮುಂದೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇದಕ್ಕೆ ಉಳಿದಿರುವುದು ಒಂದೇ ದಾರಿ ಎಂದರೆ ಜನತಾ ಕಫ್ರ್ಯೂ ಮುಗಿಯುವ ತನಕ ಜನ ಮನೆಯಿಂದ ಹೊರಬಾರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿದ್ದೇ ಅದಲ್ಲಿ ಕೊರೋನಾವನ್ನು ಸ್ವಲ್ಪ ಮಟ್ಟಿಗಾದರೂ ತಹಬದಿಗೆ ತರಲು ಸಾಧ್ಯವಿದೆ. ಎಂಬುದು ಪ್ರಜ್ಞಾವಂತರ ಅಭಿಮತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link