ಕೊರೋನಾಗೆ ಹೆದರದೆ ಸೂಕ್ತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

 ತುರುವೇಕೆರೆ:

     ಕೊರೋನಾ ಸೋಂಕಿನ ಸೂಚನೆಗಳು ಕಂಡುಬಂದ ತಕ್ಷಣ ಹೆದರದೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಕೊಂಡು ಕೊರೋನಾ ಮುಕ್ತರಾಗಿ ಎಂದು ಶಾಸಕ ಮಸಾಲ ಜಯರಾಮ್ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.

      ತಾಲ್ಲೂಕಿನ ದೆಬ್ಬೇಘಟ್ಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪೀಡಿತರಿಗೆ ತಮ್ಮ ಸ್ವಂತ ವೆಚ್ಚದಿಂದ ಜೀವರಕ್ಷಕ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಗಂಗಾಧರಯ್ಯನವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿರುವುದನ್ನು ಮನಗಂಡು ತಮ್ಮ ಸ್ವಂತ ಹಣದಿಂದ ತುಂಬಾ ಅವಶ್ಯಕವಿರುವ ದುಬಾರಿ ವೆಚ್ಚದ ಇಂಜಕ್ಷನ್‍ಗಳು, ಮಾತ್ರೆಗಳು, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಜೀವರಕ್ಷಕ ಔಷಧಗಳನ್ನು ನೀಡುತ್ತಿದ್ದು, ದಯಮಾಡಿ ನನ್ನ ಕ್ಷೇತ್ರದ ಜನತೆ ಕೊರೋನಾ ಬಗ್ಗೆ ಉದಾಸೀನ ಮಾಡದೆ ಸೋಂಕಿನ ಲಕ್ಷಣಗಳು ಕಂಡಲ್ಲಿ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿ. ಪಾಸಿಟೀವ್ ಬಂದ ಪಕ್ಷದಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗದೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಯಲ್ಲಿ ಔಷಧ, ಮಾತ್ರೆಗಳು, ಆಕ್ಷಿಜನ್, ವೆಂಟಿಲೇಟರ್ ಸೌಲಭ್ಯಗಳಿದ್ದು ಬೇಗ ಗುಣಮುಖರಾಗುವಿರಿ. ಹೋಮ್ ಕ್ವಾರಂಟೈನ್ ಆದ್ದಲ್ಲಿ ನಿಮ್ಮ ಮನೆಯಲ್ಲಿರುವ ಎಲ್ಲರಿಗೂ ರೋಗ ಹರಡುವುತ್ತದೆ. ಆದ್ದರಿಂದ ದಯಮಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದು ತಾವು ಚಿಕಿತ್ಸೆ ಪಡೆಯುವುದು ಸೂಕ್ತ. ಕೆಲವರು ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿ ಆಕ್ಷಿಜನ್ ಉಸಿರಾಟದ ಪ್ರಮಾಣ 60-50 ಕ್ಕೆ ಬಂದು ರೋಗ ಉಲ್ಭಣಿಸಿದಾಗ ಆಸ್ಪತ್ರೆಗೆ ಬಂದರೆ ಪ್ರಯೋಜನವಾಗದು. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಲ್ಲಿ ಉಸಿರಾಟದ ಪ್ರಮಾಣ 80-90 ರ ಆಸುಪಾಸಿನಲ್ಲಿದ್ದರೂ ಸಹಾ ತಕ್ಷಣ ಆ ವ್ಯಕ್ತಿಗೆ ಆಕ್ಷಿಜನ್ ನೀಡಿ ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜನತಾ ಕಫ್ರ್ಯೂ ಜಾರಿ ಮಾಡಿದ್ದು ಸರ್ಕಾರದ ಆದೇಶಗಳನ್ನು ಜನಸಾಮಾನ್ಯರು ಕಟ್ಟುನಿಟ್ಟಾಗಿ ಪಾಲನೆಮಾಡಿ. ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಯಾವುದೇ ಸಹಾಯ ನೀಡಲು ನಾನು ಬದ್ಧನಾಗಿದ್ದು, ಕೊರೋನಾದಿಂದ ಮುಕ್ತರಾಗಲು ಜೀವರಕ್ಷಕ ಔಷಧಿಗಳ ಕೊರತೆಯಾದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ವಂತ ಹಣದಿಂದ ನೀಡುತ್ತೇನೆ. ಜನತೆ ಕೊರೋನಾ ಸೋಂಕಿಗೆ ಭಯಪಡದೆ ಧೈರ್ಯದಿಂದಿರಬೇಕು. ನಾನು ಸದಾ ನಿಮ್ಮೊಂದಿಗಿದ್ದು ಕೊರೋನಾ ತಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕರು ಜನತೆಗೆ ಧೈರ್ಯ ತುಂಬಿದರು.

      ಈ ಸಂಸರ್ಭದಲ್ಲಿ ದೆಬ್ಬೇಘಟ್ಟ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಗಂಗಾಧರಯ್ಯ, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ಆಯರಹಳ್ಳಿ ಪಾಂಡು, ನಾಗೇಶ್, ರವಿ, ಶಿಕ್ಷಕಿ ಅನು, ಆರೋಗ್ಯ ಸಹಾಯಕ ಮಂಜುನಾಥ್, ಎಲ್.ಹೆಚ್.ವಿ. ಸುಮಿತ್ರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link