ಸಿಮೆಂಟ್ ಕಾರ್ಖಾನೆಯಿಂದ ಆಸ್ಪತ್ರೆಗೆ ಆಮ್ಲಜನಕ ಘಟಕ

 ತುರುವೇಕೆರೆ : 

     ಕೋವಿಡ್ ರೋಗಿಗಳ ಜೀವ ರಕ್ಷಕವಾದ ಆಮ್ಲಜನಕ ಕೊರತೆಯನ್ನು ನೀಗಿಸುವ ಸಲುವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 500 ಲೀಟರ್ ಸಾಮರ್ಥದ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

    ತಾಲೂಕಿನ ಅಮ್ಮಸಂದ್ರದ ಹೈಡಲ್‍ಬರ್ಗ್ ಸಿಮೆಂಟ್ ಕಾರ್ಖಾನೆವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸುತ್ತಿರುವ ಆಮ್ಲಜನಕ ಘಟಕದ ಆದೇಶ ಪತ್ರವನ್ನು ಕಂಪನಿಯ ಅಧಿಕಾರಿಗಳಿಂದ ಶಾಸಕರು ಸ್ವೀಕರಿಸಿ ಮಾತನಾಡಿದರು.

      ತಾಲೂಕು ಆಡಳಿತ, ವೈದ್ಯಾಧಿಕಾರಿಗಳು, ದಾದಿಯರು, ಕೊರೊನ ವಾರಿಯರ್ಸ್‍ರ ಸತತ ಶ್ರಮದಿಂದ ತಾಲೂಕಿನಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ತಾಲೂಕಿನಲ್ಲಿ ಆಮ್ಲಜನಕದ ಕೊರತೆ ಇಲ್ಲದಿದ್ದರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳನ್ನು ಹೆಚ್ಚಿಸಬೇಕಾಗಿದೆ. ಕೋವಿಡ್-19 ರೋಗದ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಯಾವುದೇ ಕೊರತೆಯಾಗದಂತೆ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಅಮ್ಮಸಂದ್ರದ ಹೈಡಲ್‍ಬರ್ಗ್ ಸಿಮೆಂಟ್ ಕಂಪನಿ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 500 ಲೀಟರ್ ಸಾಮಥ್ರ್ಯದ ಆಮ್ಲಜನಕ ಘಟಕ ನಿರ್ಮಾಣ ಮಾಡಲಾಗುತ್ತಿದ್ದು ಇನ್ನು 2 ತಿಂಗಳಲ್ಲಿ ಆಮ್ಲಜನಕ ಕೊರತೆ ನೀಗಲಿದೆ. ಏಕಕಾಲದಲ್ಲಿ ಸುಮಾರು 40 ರೋಗಿಗಳಿಗೆ ಆಮ್ಲಜನಕ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲೀವಿಂಗ್‍ಗೆ ಪತ್ರ ಬರಯಲಾಗಿದೆ. ಹಲವು ದೊಡ್ಡ ಕಂಪನಿಗಳನ್ನು ಭೇಟಿ ಮಾಡಿದ್ದು ಬೆಡ್ ವ್ಯವಸ್ಥೆ ಸೇರಿದಂತೆ ಹಲವಾರು ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಅನೇಕ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ ಎಂದರು.
ಆಮ್ಲಜನಕ ಘಟಕ ಸ್ಥಾಪನೆ ಮಾಡಲು ಸಹಕಾರ ನೀಡಿದ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಹಾಗೂ ಹೈಡಲ್‍ಬರ್ಗ್ ಕಂಪನಿಯವರಿಗೂ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

     ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಮೂರ್ತಿ, ಅಮ್ಮಸಂದ್ರ ಸಿಮೆಂಟ್ ಕಾರ್ಖನೆ ಹೆಚ್.ಆರ್. ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ, ಡಾ. ನವೀನ್, ಡಾ.ಪವನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್‍ಕುಮಾರ್, ಸದಸ್ಯರಾದ ಚಿದಾನಂದ್, ಮುಖಂಡರಾದ ದುಂಡಾ ರೇಣಕಪ್ಪ, ಯೋಗಾನಂದ್, ಚಂದ್ರಣ್ಣ, ವಿ.ಬಿ.ಸುರೇಶ್, ಸೋಮಶೇಖರ್, ಜಯರಾಮ್ ಆಸ್ಪತ್ರೆ ಸಿಬ್ಬಂದಿ ಬೋರೇಗೌಡ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap