ಚುನಾವಣಾ ತುರ್ತು : ಇಬ್ಬರು ಐಪಿಎಸ್‌ ಗಳ ವರ್ಗಾವಣೆ…!

ಬೆಂಗಳೂರು: 

     ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಎಸ್ಪಿ ಮತ್ತು ನಿರ್ದೇಶಕರಾದ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ವೈಟ್‌ಫೀಲ್ಡ್ ಡಿಸಿಪಿಯಾಗಿ ನಿಯೋಜಿಸಲಾಗಿದೆ.

    ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಮತ್ತು ಪ್ರಾಂಶುಪಾಲರಾದ ಡಾ.ಅರುಣ್ ಕೆ ಅವರನ್ನು ದಾವಣಗೆರೆಯ ಎಸ್ಪಿಯಾಗಿ ನಿಯೋಜಿಸಲಾಗಿದೆ.

    ‘ಗಿರೀಶ್ ಅವರ ಮಾವ ಕೆ.ಎನ್‌. ರಾಜಣ್ಣ, ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ರಿಷ್ಯಂತ್ ಅವರ ಮಾವ ಎಸ್. ಮುನಿರತ್ನ, ಬೆಂಗಳೂರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.ಅಧಿಕಾರಿಗಳ ನೇರ ಸಂಬಂಧಿಗಳು ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap