ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು:

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಆರೋಪಿ ಅತೀಕ್ ಅಹ್ಮದ್‌ನನ್ನು ಬಂಧಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅತೀಖ್ ಅಹ್ಮದ್ ಎಂಬಾತನನ್ನು ಬಂಧಿಸಿದೆ.

    ಈ ಪ್ರಕರಣದಲ್ಲಿ ಬಂಧನವಾಗಿರುವವರಲ್ಲಿ ಈತ 21ನೇ ಆರೋಪಿ. ಈತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯನೆಂದು ಹೇಳಲಾಗಿದೆ. 2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಪಿಎಫ್ಐ ಸಂಘಟನೆಯ ಸದಸ್ಯರ ಕುಕೃತ್ಯ ಎಂಬುದು ತಿಳಿದುಬಂದಿದ್ದರಿಂದ ಆಗ ರಾಜ್ಯ ಸರ್ಕಾರ, ಇದನ್ನು ಎನ್ಐಗೆ ವಹಿಸಿತ್ತು. ಆಗಿನಿಂದಲೂ ತನಿಖೆ ನಡೆಸುತ್ತಿರುವ ಎನ್ಐಎ ಇದುವರೆಗೆ 21 ಮಂದಿಯನ್ನು (ಜ. 21ರ ಅತೀಕ್ ಅಹ್ಮದ್ ಬಂಧನವೂ ಸೇರಿ) ಬಂಧಿಸಲಾಗಿದೆ. ಇನ್ನೂ ಆರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ. ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನು ನೀಡುವುದಾಗಿಯೂ ಘೋಷಿಸಲಾಗಿದೆ.

   ಪಿಎಫ್‌ಐ ನಾಯಕರ ಮಾರ್ಗದರ್ಶನದಲ್ಲಿ ಅತೀಕ್, ಪ್ರಕರಣದ ಪ್ರಮುಖ ಸಂಚುಕೋರ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಜನರಲ್ಲಿ ಭಯ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಪಿಎಫ್‌ಐ ಕಾರ್ಯಸೂಚಿಯ ಭಾಗವಾಗಿ ಕೊಲೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು” ಎಂದು ಎನ್‌ಐಎ ಹೇಳಿದೆ.

   ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಪ್ರಕಾರ, ಕೊಲೆಯ ನಂತರ ಮುಸ್ತಫಾ ಪರಾರಿಯಾಗಿದ್ದ ಮತ್ತು ಆತನನ್ನು ಚೆನ್ನೈಗೆ ಸಾಗಿಸುವುದು ಸೇರಿದಂತೆ ಆತನ ಪ್ರಯಾಣಕ್ಕೆ ಅತೀಕ್ ಅನುಕೂಲ ಮಾಡಿಕೊಟ್ಟಿದ್ದ. ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೂ ಅವರು ಕಾನೂನಿನ ಕೈಯ್ಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು.

   ಆಗಸ್ಟ್ 2022 ರಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದ NIA, ‘PFI ಸೇವಾ ತಂಡಗಳು’ ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿಕೊಂಡು ನೆಟ್ಟಾರು ಅವರನ್ನು ಹತ್ಯೆ ಮಾಡಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ.

Recent Articles

spot_img

Related Stories

Share via
Copy link