ಉಢಾಳ್ ಬಾಬು ಪ್ರಮೋದ್ ಈಗ ‘ಬಾಂಡ್ ರವಿ’: ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್

‘ಪ್ರೀಮಿಯರ್ ಪದ್ಮಿನಿ’, ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ನಟ ಪ್ರಮೋದ್ ಈಗ ‘ಬಾಂಡ್ ರವಿ’ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಪ್ರಮೋದ್ ನಿರ್ವಹಿಸಿದ್ದ ಉಢಾಳ್ ಬಾಬು ಪಾತ್ರ ಜನಪ್ರಿಯವಾಗಿತ್ತು.

ಪ್ರಜ್ವಲ್ ಎ.ಪಿ ಅವರು ಬಾಂಡ್ ರವಿ ಸಿನಿಮಾದ ನಿರ್ದೇಶನ ಹೊಣೆ ಹೊತ್ತಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ರಿಕ್ಕಿ ಕೇಜ್‌

ನಿರ್ದೇಶಕ ಪ್ರಜ್ವಲ್ ಅವರು ಕಳೆದ 11 ವರ್ಷಗಳಿಂದ ನಿರ್ದೇಶಕರಾದ ಎಸ್ ಮಹೇಂದರ್, ಪ್ರಶಾಂತ್ ರಾಜ್ ಹಾಗೂ‌ ಕಾಂತಾ ಕನ್ನಹಳ್ಳಿ ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ. ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಬಾಂಡ್ ರವಿ’ ಸಿನಿಮಾಗೆ ಮನೋಮೂರ್ತಿ ಸಂಗೀತವಿದ್ದು, ನಾಗೇಂದ್ರಪ್ರಸಾದ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

ಬಾಂಡ್ ರವಿ ಸಿನಿಮಾದ ಟೈಟಲ್ ಹಾಗೂ ಫರ್ಸ್ಟ್ ಲುಕ್ ರಿಲೀಸ್ ಆಗಿದೆ. ಪ್ರತಿಭಾನ್ವಿತ ನಟ ಪ್ರಮೋದ್ ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟು ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಹೊಂದಿರುವ ಬಾಂಡ್ ರವಿ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap