ನಮಗೆ ಇವಿಎಂ ಬಗ್ಗೆ ಅನುಮಾನ ಇದೆ : ಉದ್ದವ್‌ ಠಾಕ್ರೆ

ಮುಂಬೈ

    ಇಂದು ಯಾವುದೇ ಕಾರಣಕ್ಕೂ ಮಹಾ ವಿಕಾಸ್ ಅಘಾಡಿಯ ನೂತನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಈ ಮೂಲಕ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಲಿದ್ದಾರೆ. ಈ ಬಗ್ಗೆ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಇಂದು ಹೇಳಿದ್ದಾರೆ. ಮತಯಂತ್ರಗಳನ್ನು  ಟ್ಯಾಂಪರಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಜನರಿಂದ ಬಂದ ತೀರ್ಪು ಅಲ್ಲ. ಇಲ್ಲಿ ಮಹಾ ಮೋಸ ನಡೆದಿದೆ. ಆ ಕಾರಣದಿಂದ ನಮ್ಮ ಮಹಾ ವಿಕಾಸ್ ಅಘಾಡಿ ಯಾವ ಶಾಸಕರು ಕೂಡ ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದರು.

  ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಳಂಬ್ಕರ್ ಅವರ ಮೇಲ್ವಿಚಾರಣೆಯ ಅಧಿವೇಶನದಲ್ಲಿ ಶಾಸಕರಿಗೆ ಪ್ರಮಾಣವಚನ, ವಿಧಾನಸಭಾ ಸ್ಪೀಕರ್ ಆಯ್ಕೆ, ಹೊಸ ಸರ್ಕಾರಕ್ಕೆ ವಿಶ್ವಾಸ ಮತ ಮತ್ತು ರಾಜ್ಯಪಾಲರ ಭಾಷಣ ನಡೆಯಲಿದೆ. ಬಿಜೆಪಿಯ ಹಿರಿಯ ಶಾಸಕ ಕೊಲಂಬ್ಕರ್ ಅವರನ್ನು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.

Recent Articles

spot_img

Related Stories

Share via
Copy link