ಶಿರಾದಲ್ಲಿ ಅತಂತ್ರ ನಗರಸಭೆ

ತುಮಕೂರು:

ಕಾಂಗ್ರೆಸ್ ಗೆ ಅಧಿಕ ಸ್ಥಾನ, ಪಕ್ಷೇತರರು ಪ್ರಾಬಲ್ಯ

            ಸಿರಾ ನಗರಸಭೆಯಲ್ಲಿ ಯಾವುದೇ    ಪಕ್ಷ ಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ನಗರಸಭೆ ನಿರ್ಮಾಣ ವಾಗಿ ದೆ.
ನಗರಸಭೆ ಯ ಒಟ್ಟು 31 ವಾರ್ಡ್ ಗಳ ಪೈಕಿ ಚುನಾವಣೆ ನಡೆದ 30 ವಾರ್ಡ್ ಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 4, ಜೆಡಿಎಸ್ 7ಹಾಗೂ ಪಕ್ಷೇತರರು 8 ಸ್ಥಾನಗಳ ಲ್ಲಿ ವಿಜಯಿಯಾಗಿ ದ್ದಾರೆ.

ಕಳೆದ ಬಾರಿ 1 ಸ್ಥಾನ ಗೆದ್ದಿದ್ದ ಬಿಜೆಪಿ 04 ಸ್ಥಾನ ಗೆದ್ದಿದ್ದರೆ, ಕಳೆದ ಬಾರಿ 15ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಈ ಬಾರಿ ನಾಲ್ಕು ಸ್ಥಾನ ಕಳೆದುಕೊಂಡರೂ 11ಸ್ಥಾನ ಗೆಲ್ಲುವ ಮೂಲಕ ಅತ್ಯಧಿಕ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ 7 ಸ್ಥಾನ ದೊಂದಿಗೆ ಎರಡನೇ ಸ್ಥಾನ ದಲ್ಲಿದ್ದು ಅಧಿಕಾರ ಹಿಡಿಯುವ ಮ್ಯಾಜಿಕ್ ನಂಬರ್ 16 ಸ್ಥಾನ ಪಡೆಯಲು ಕಾಂಗ್ರೆಸ್ ಗೆ ಜೆಡಿಎಸ್ ಇಲ್ಲವೆ ಪಕ್ಷೇತರರ ಬೆಂಬಲ ಗಳಿಸಬೇಕಿರುವುದು ಅನಿವಾರ್ಯವಾಗಿದೆ.

ವಿಧಾನಸಭೆ ಉಪ ಚುನಾವಣೆ ಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಗೆ ಫಲಿತಾಂಶ ಮುಖಭಂಗ. ಮೇಲ್ಮನೆ ಚುನಾವಣೆ ಯಲ್ಲಿ ಇತ್ತೀಚೆಗೆ ಗೆಲುವು ಸಾಧಿಸಿದ ಸಂಭ್ರಮ ದಲ್ಲಿ ದ್ದ ಕಾಂಗ್ರೆಸ್ ಗೂ ನಿರೀಕ್ಷಿತ ಬಹುಮತ ಪಡೆಯಲಾಗದಿರುವುದು ಹಿನ್ನಡೆಯೆನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap