ಯುಪಿಎಸ್ಸಿ ಫಲಿತಾಂಶ ಪ್ರಕಟ….!

ನವದೆಹಲಿ:

     ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ನಡೆಸಿದ್ದ 2023ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಐಐಟಿ ಕಾನ್ಪುರ ಇಂಜಿನಿಯರ್ ಆದಿತ್ಯ ಶ್ರೀವಾಸ್ತವ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

    https://upsc.gov.in/ ವೆಬ್​ಸೈಟ್​ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಆದಿತ್ಯ ಶ್ರೀವಾಸ್ತವ ಅವರು ದೇಶಕ್ಕೆ ಟಾಪರ್ ಆಗಿದ್ದು. ಅನಿವೇಶ್ ಪ್ರಧಾನ್ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನಗಳಿಸಿದ್ದಾರೆ.

   ಒಟ್ಟು 1016 ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ಸರ್ಕಾರದ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಲೋಕಸೇವ ಆಯೋಗ ತಿಳಿಸಿದೆ.

ಟಾಪ್ 20 ಅಭ್ಯರ್ಥಿಗಳ ಪಟ್ಟಿ

ರ‍್ಯಾಂಕ್ 1: ಆದಿತ್ಯ ಶ್ರೀವಾಸ್ತವ ರ‍್ಯಾಂಕ್ 2: ಅನಿಮೇಶ್ ಪ್ರಧಾನ್ ರ‍್ಯಾಂಕ್ 3: ಡೋಣೂರು ಅನನ್ಯಾ ರೆಡ್ಡಿ ರ‍್ಯಾಂಕ್ 4: ಪಿ ಕೆ ಸಿದ್ಧಾರ್ಥ್ ರಾಮಕುಮಾರ್ ರ‍್ಯಾಂಕ್ 5: ರುಹಾನಿ ರ‍್ಯಾಂಕ್ 6: ಸೃಷ್ಟಿ ದಾಬಾಸ್ ರ‍್ಯಾಂಕ್ 7:ಅನ್ಮೋಲ್ ರಾಥೋಡ್ ರ‍್ಯಾಂಕ್ 8: ಆಶಿಶ್ ಕುಮಾರ್ ರ‍್ಯಾಂಕ್ 9: ನೌಶೀನ್ ರ‍್ಯಾಂಕ್ 10: ಐಶ್ವರ್ಯಮ್ ಪ್ರಜಾಪತಿ ರ‍್ಯಾಂಕ್ 11: ಕುಶ್ ಮೋಟ್ವಾನಿ ರ‍್ಯಾಂಕ್ 12: ಅನಿಕೇತ್ ಶಾಂಡಿಲ್ಯ ರ‍್ಯಾಂಕ್ 13: ಮೇಧಾ ಆನಂದ್ , ರ‍್ಯಾಂಕ್ 14: ಶೌರ್ಯ ಅರೋರಾ ರ‍್ಯಾಂಕ್ 15: ಕುನಾಲ್ ರಸ್ತೋಗಿ ರ‍್ಯಾಂಕ್ 16: ಅಯಾನ್ ಜೈನ್ ರ‍್ಯಾಂಕ್ 17: ಸ್ವಾತಿ ಶರ್ಮಾ ರ‍್ಯಾಂಕ್ 18: ವಾರ್ದಾ ಖಾನ್ ರ‍್ಯಾಂಕ್ 19: ಶಿವಕುಮಾರ್ ರ‍್ಯಾಂಕ್ 20: ಆಕಾಶ್ ವರ್ಮಾ

ಸಾಮಾನ್ಯ ವರ್ಗ – 347, ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್​) – 115, ಒಬಿಸಿ – 303, ಎಸ್​ಸಿ – 165, ಎಸ್​ಟಿ ಕೋಟಾದಲ್ಲಿ 86 ಅಭ್ಯರ್ಥಿಗಳು ನೇಮಕವಾಗಿದ್ದಾರೆ.

ಐಎಎಸ್​ ಹುದ್ದೆಗಳಿಗೆ 180, ಎಎಫ್​ಎಸ್​ ಹುದ್ದೆಗಳಿಗೆ – 37, ಐಪಿಎಸ್​ ಹುದ್ದೆಗಳಿಗೆ 200 ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap