ಜಿಲ್ಲೆಗೆ ಬಂದ ಮೊದಲ ದಿನವೇ ಡಿಸಿಯನ್ನು ತರಾಟೆಗೆ ತೆಗೆದುಕೊಂಡ ಸೋಮಣ್ಣ….!

 ತುಮಕೂರು:-

    ಮಂತ್ರಿಯಾಗಿ ಬಂದ ಮೊದಲ ದಿನವೇ ಡಿಸಿ, ಸಿಇಒಗೆ ಕೇಂದ್ರದ ಮಂತ್ರಿ ವಿ ಸೋಮಣ್ಣ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

     ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭುಗೆ ಕರೆ ಮಾಡಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

    ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದ ವೇಳೆ ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರ ಆರೋಗ್ಯ ವಿಚಾರಣೆಗೆ ತೆರಳಿದ ವೇಳೆ ಯಾವುದೇ ಅಧಿಕಾರಿಗಳು ಇಲ್ಲದ್ದನ್ನು ಕಂಡು ವಿ ಸೋಮಣ್ಣ ಗರಂ ಆದರು. ಜಿಲ್ಲಾಸ್ಪತ್ರೆಯಲ್ಲೇ ಕರೆ ಮಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು

    ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಲ್ಯಾಣ್ ಅವರಿಗೆ ಕರೆ ಮಾಡಿದ ಸೋಮಣ್ಣ, ಅಮ್ಮಾ ಯಾರೂ ಗತಿ ಇಲ್ವಲ್ಲಮ್ಮಾ. ನಾನು ಮಂತ್ರಿ ಫಸ್ಟ್ ಟೈಮ್ ಬಂದಿದಿನಿ. ಆಸ್ಪತ್ರೆಗೆ ಬರ್ತಿದಿನಿ ನೀವು ಇಲ್ಲ. ನಿಮ್ಮ ಸಿಇಒ ನೂ ಇಲ್ಲ. ನೀರಾವರಿ ಇಲಾಖೆಯವರೂ ಯಾರೂ ಇಲ್ಲ. ಯಾವನೂ ಇಲ್ಲ. ಒಬ್ಬ ಡಿಎಸ್ ಇದಾರೆ. ಮಧುಗಿರಿಯಲ್ಲಿ ಗಿಡ ನೆಡೋದು ದೊಡ್ಡದಾ? ನಾನು ಆಸ್ಪತ್ರೆಗೆ ಬಂದೊಗ್ತಿನಿ ಅಂದ್ರಿ ಆಯ್ತಮ್ಮಾ ಅಂದೆ. ತಾವೇ  ಹೇಳುದ್ರೋ ಇಲ್ವಮ್ಮಾ? ಕಾಂಟ್ರವರ್ಸಿ ಮಾಡಕೋಬೇಡಿ ಅಮ್ಮ. ದಯವಿಟ್ಟು ಕಾಂಟ್ರುವರ್ಸಿ ಮಾಡಕೋಬೇಡಿ. ನಾನು ಇವರೆಲ್ಲರಿಗಿಂತ ಸರ್ವಿಸ್ ಇದೆ. ನಾನು ಬಂದಿದಿನಿ ಅಂದರೆ ರಿಸೀವ್ ಮಾಡಿಕೊಳ್ಳೋಕೆ ಅಟ್ಲಿಸ್ಟ್ ಒಬ್ಬ ಗತಿ ಇಲ್ಲವಲ್ಲ.

    ತಾವೇ ಮಂತ್ರಿಯಾಗಿ ನಾನು ಡಿಸಿಯಾಗಿ ಏನು ಮಾಡ್ತಿದ್ರಿ? ಹೇಳಮ್ಮ. ಆ ಪ್ರಭು ನಿನ್ನೆ ಕಾಲ್ ಮಾಡಿದಾಗ ಮೇಡಂ ಅಸ್ಪತ್ರೆ ಬರ್ತಾರೆ ಅಂದ್ರು. ಆಯ್ತಪ್ಪ ಅಂದೆ. ನಾನು ಬಂದಿದಿನಿ ಯಾವೊಬ್ಬ ಅಧಿಕಾರಿನೂ ಇಲ್ಲ. ನೀವೇ ಹೇಳಿದ್ರಲ್ಲಮ್ಮ ಆಸ್ಪತ್ರೆಗೆ ಬರ್ತಿನಿ ಅಂದ್ರಲ್ಲ. ಆಯ್ತು ಬಾ ಅಮ್ಮ ಅಂದೆ.   ನನ್ ಪ್ರಜೆನ್ಸಿಲಿ ಇರಬೇಕೋ ಬೇಡ್ವೋ? ನಾನು ಮಂತ್ರಿ ಅಲ್ವಾ? ಸೆಂಟ್ರಲ್ ಗೌರ್ನಮೆಂಟ್  ಲೆಕ್ಕ ಇಲ್ವಾ? ನಿಮಗೆಷ್ಟು ಭಯ ಇರಬೇಕು? ನನಗೆ ಹರ್ಟ್ ಆಯ್ತಮ್ಮ. ಬರ್ತಿನಿ ಅಂದು ಬರ್ಲಿಲ್ಲ. ಬರಬೇಕಾಗಿದ್ದು ನಿಮ್ ಡ್ಯೂಟಿ ಅಲ್ವಾ? ಜಿಲ್ಲಾಧಿಕಾರಿ ಅಂದ್ರೆ ಸ್ಟೇಟ್ ಅಷ್ಟೇ ಸೀಮಿತನಾ? ಸೆಂಟ್ರಲ್  ಗೌರ್ನಮೆಂಟ್ ಏನೇನು ಇಲ್ವಾ? ನನಗೆ ರಿಪೋರ್ಟ್ ಕಳುಹಿಸಿ ಸಂಜೆ ಒಳಗೆ ಎಂದು ಖಾರವಾಗಿಯೇ ಬೈದರು.

Recent Articles

spot_img

Related Stories

Share via
Copy link
Powered by Social Snap