18-44 ವರ್ಷದವರಿಗೆ ಲಸಿಕೆ ನೀಡಲು ಕೇಂದ್ರ ಸಮ್ಮತಿ!!

ನವದೆಹಲಿ: 

        ನೇರವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ 18-44 ವರ್ಷದವರಿಗೆ ಲಸಿಕೆ ನೀಡಲು  ಕೇಂದ್ರ ಸರ್ಕಾರ ನಿರ್ಧರಿಸಿದೆ.  

       ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಅಂತರ್ಜಾಲದ ಮೂಲಕ ನೋಂದಾಯಿಸಿಕೊಳ್ಳಲು ಆಗದವರಿಗೂ ಲಸಿಕೆ ಸಿಗುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಅಂತಿಮ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಲಿವೆ.

      ಇಲ್ಲಿಯವರೆಗೆ, 18-44 ವರ್ಷ ವಯಸ್ಸಿನವರು ಕೋವಿನ್ ಪೋರ್ಟಲ್ ಅಥವಾ ಆರೋಗ್ಯಾ ಸೇತು ಆಯಪ್ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಂಡವರು ನಂತರವೇ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು. ಆದರೆ 45 ವರ್ಷಕ್ಕಿಂತ ಮೇಲ್ಪಟ್ಟವರು ಯಾವುದೇ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಡೋಸ್ ಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ.

      ಇನ್ನು ಮೇ 1ರಿಂದಲೇ 18-44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಲಾಗಿತ್ತು. ಈ ಮೂಲಕ 49 ಕೋಟಿ ಮಂದಿಯ ಪೈಕಿ 1 ಕೋಟಿ ಜನರು ಇಲ್ಲಿಯವರೆಗೂ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದಾರೆ.

      ಕೆಲವು ಸೈಟ್ ಗಳ ಮೂಲಕ ನೋಂದಣಿ ಮತ್ತು ಕಾಯ್ದಿರಿಸುವ ಪ್ರಕ್ರಿಯೆ ಲಭ್ಯವಿದೆ. ಸುಗಮ ಸಮನ್ವಯದ ಅಗತ್ಯಕ್ಕಾಗಿ ಜನರು ಮತ್ತು ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್‌ಗಳು ಅಥವಾ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇದನ್ನು ಬಳಸದವರು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಕೇಂದ್ರವು ಒಪ್ಪಿಕೊಂಡಿತ್ತು. ಆದ್ದರಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

      ಇನ್ನು ಈ ಪ್ರಕ್ರಿಯೆಯಲ್ಲಿ ಖಾಸಗಿ ಲಸಿಕಾ ಕೇಂದ್ರಗಳು ಸದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ಖಾಸಗಿ ಕೇಂದ್ರಗಳು ತಮ್ಮ ಲಸಿಕಾ ವೇಳಾಪಟ್ಟಿಯ ಆನ್​ಲೈನ್ ನೇಮಕಾತಿಯನ್ನ ಪ್ರತ್ಯೇಕ ಸ್ಲಾಟ್​ನಲ್ಲಿ ಪ್ರಕಟಿಸಬೇಕಿದೆ.

      ಆಯಾ ರಾಜ್ಯಗಳ ನಿರ್ಧಾರದ ಮೇರೆಗೆ ಮಾತ್ರ ಈ ವೈಶಿಷ್ಟ್ಯ ಯೋಜನೆ ಬಳಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇನ್ನು ನೇರವಾಗಿ ಬರುವವರಿಗೆ ನೋಂದಣಿ ಪ್ರಕ್ರಿಯೆ ನಡೆಸಬೇಕು. ವಿಧಾನದ ಬಗ್ಗೆ ಆಯಾ ರಾಜ್ಯಗಳ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ರೋಗನಿರೋಧಕ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ರಾಜ್ಯಗಳಿಗೆ ಸೂಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap